ಬೆಟಗೇರಿ:ಬೆಳಗಾವಿ ಸಂಸದ ಹಾಗೂ ಕೇಂದ್ರ ರೇಲ್ವೆ ಸಚಿವರಾದ ಸುರೇಶ ಅಂಗಡಿ ಅವರ ನಿಧನ ಬೆಳಗಾವಿ ಜಿಲ್ಲೆಯ ಜನತೆಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಹೇಳಿದರು.
ಗ್ರಾಮದ ಆಶ್ವಾರೂಢ ಬಸವೇಶ್ವರ ವೃತ್ತದಲ್ಲಿ ಗುರುವಾರದÀಂದು ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮೃತ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ, ಮೌನಾಚರಣೆ ಸಲ್ಲಿಸಿ ಮಾತನಾಡಿ, ಈ ಭಾಗದ ಬಹುದಿನಗಳ ಕನಸಾಗಿದ್ದ ಹಲವಾರು ಬೇಡಿಕೆಗಳನ್ನು ಹಂತ ಹಂತವಾಗಿ ಇಡೇರಿಸುವ ಕನಸು ಹೊತ್ತಿದ್ದ ಸುರೇಶ ಅಂಗಡಿ ಅವರ ನಿಧನ ಈಗ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದರು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ, ಪತ್ರೇಪ್ಪ ನೀಲಣ್ಣವರ, ರಾಮಣ್ಣ ಬಳಿಗಾರ, ಈರಪ್ಪ ದೇಯಣ್ಣವರ, ಎಮ್.ಐ.ನೀಲಣ್ಣವರ, ಈರಣ್ಣ ಸಿದ್ನಾಳ, ಬಸವರಾಜ ಪಣದಿ, ರಾಮಣ್ಣ ಮುಧೋಳ, ಲಕ್ಷ್ಮಣ ಸೋಮಗೌಡ್ರ, ಶಂಭು ಹಿರೇಮಠ, ಚಂದ್ರಶೇಖರ ನೀಲಣ್ಣವರ, ಮಲ್ಲಪ್ಪ ಪಣದಿ, ಮಲ್ಲಪ್ಪ ಕಂಬಿ ಸೇರಿದಂತೆ ಸಂಸದ ದಿ. ಸುರೇಶ ಅಂಗಡಿ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.

????????????????????????????????????