Breaking News
Home / Recent Posts / ಸಮಾಜಮುಖಿ ಸೇವೆಗೆ ಸದಾಸಿದ್ಧ ಈ ಖಿದಮತ ಸೋಷಿಯಲ್ ವೆಲ್ಫೆರ ಕಮಿಟಿ

ಸಮಾಜಮುಖಿ ಸೇವೆಗೆ ಸದಾಸಿದ್ಧ ಈ ಖಿದಮತ ಸೋಷಿಯಲ್ ವೆಲ್ಫೆರ ಕಮಿಟಿ

Spread the love

ಸಮಾಜಮುಖಿ ಸೇವೆಗೆ ಸದಾಸಿದ್ಧ ಈ ಖಿದಮತ ಸೋಷಿಯಲ್ ವೆಲ್ಫೆರ ಕಮಿಟಿ
ಮೂಡಲಗಿ : ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಹೆಚ್ಚಳ ಮತ್ತು ಸಾವುಗಳಿಂದ ಜನತೆ ತಲ್ಲನಗೊಂಡಿರುವ ಇಂತಹ ಸಮಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಸ್ವತ:ಕುಟುಂಬಸ್ಥರು,ಸಂಬಂದಿಕರು ಹಿಂಜರಿಯುತ್ತಿರುವ ಪರಿಸ್ಥಿತಿಯಲ್ಲಿ ಮೂಡಲಗಿಯ ಖಿದಮತ ಸೋಷಿಯಲ್ ವೆಲ್ಫೇರ ಕಮಿಟಿ ಕೊರೋನಾದಿಂದ ಮೃತಪಟ್ಟವರ ಶವ ಸಂಸ್ಕಾರ ಕಾರ್ಯ ಮಾಡಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ನಾಲ್ಕು ವರ್ಷಗಳಿಂದ ಯಾವುದೆ ಪ್ರಚಾರ ಬಯಸದೆ ಬಡಬಗ್ಗರಿಗೆ ಸಹಾಯ ಮಾಡುತ್ತಿರುವ ಈ ಕಮಿಟಿಯು ಅನೇಕ ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯ,ಬಡವರಿಗೆ ವೈದ್ಯಕೀಯ ಚಿಕಿತ್ಸೆ,ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಾಂಗಕ್ಕೆ ನೆರವು,ಉಚಿತ ಕಣ್ಣಿನ ಶಿಬಿರ,ರಕ್ತ ದಾನ ಮಾಡುವುದು ಮಹಾಪೂರದಲ್ಲಿ ಹಾಗೂ ಕೊರೋನಾ ಲಾಕ್ ಡೌನ ಸಮಯದಲ್ಲಿ ಸಂಕಷ್ಟದಲ್ಲಿದ್ದವರಿಗೆ ಆಹಾರ,ಧಾನ್ಯ ಕಿಟ್ಟಗಳನ್ನು ತಮ್ಮ ಸ್ವಂತ ಖರ್ಚಿನಿಂದ ವಿತರಣೆ ಮಾಡಿದೆ. ಸಧ್ಯ ಕಮಿಟಿಯ ಅಧ್ಯಕ್ಷರಾಗಿ ಮೌಲಾನಾ ರಾಜೇಸಾಬ ನದಾಫ ಕಮಿಟಿಯನ್ನು ಮುನ್ನಡೆಸುತ್ತಿದ್ದು.ಇನ್ನುಳಿದ ಸದಸ್ಯರಾದ ಇಬ್ರಾಹಿಂ ಹುಣಶ್ಯಾಳ,ಶಕೀಲ ಬೇಪಾರಿ ಸಾತ ನೀಡುತ್ತಿದ್ದಾರೆ.

ಇವರ ಸೇವೆ ಗುರುತಿಸಿ ಅ.15ರಂದು ತಹಶೀಲದಾರ,ಬಿಇಒ,ಸಿಪಿಐ,ಪಿಎಸ್‍ಐ ಸಮ್ಮುಖದಲ್ಲಿ ‘ಉತ್ತಮ ಸಮಾಜ ಸೇವಕರು’ ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಅಲ್ತಾಫ್ ಎಚ್.ಹವಾಲ್ದಾರ


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ