Breaking News
Home / Recent Posts / ಭೂ ಸುಧಾರಣೆ ತಿದ್ದುಪಡೆ ಕಾನೂನು ಮತ್ತು ಎಪಿಎಂಸಿ ತಿದ್ದುಪಡೆ ಕಾನೂನು ಜಾರಿಗೆ ತರುವ ಮೂಲಕ ಎರಡು ಸರಕಾರಗಳು ರೈತ ಪರವಾದಂತಹ ಒಂದು ಐತಿಹಾಸಿಕ ನಿರ್ಣಯವನ್ನ ಮಾಡಿವೆ

ಭೂ ಸುಧಾರಣೆ ತಿದ್ದುಪಡೆ ಕಾನೂನು ಮತ್ತು ಎಪಿಎಂಸಿ ತಿದ್ದುಪಡೆ ಕಾನೂನು ಜಾರಿಗೆ ತರುವ ಮೂಲಕ ಎರಡು ಸರಕಾರಗಳು ರೈತ ಪರವಾದಂತಹ ಒಂದು ಐತಿಹಾಸಿಕ ನಿರ್ಣಯವನ್ನ ಮಾಡಿವೆ

Spread the love

ಮೂಡಲಗಿ: ಕೇಂದ್ರ ಸರಕಾರದ ಕೃಷಿ ಮಸೂದೆಗಳು ರಾಜ್ಯ ಸರಕಾರದ ಭೂ ಸುಧಾರಣೆ ತಿದ್ದುಪಡೆ ಕಾನೂನು ಮತ್ತು ಎಪಿಎಂಸಿ ತಿದ್ದುಪಡೆ ಕಾನೂನು ಜಾರಿಗೆ ತರುವ ಮೂಲಕ ಎರಡು ಸರಕಾರಗಳು ರೈತ ಪರವಾದಂತಹ ಒಂದು ಐತಿಹಾಸಿಕ ನಿರ್ಣಯವನ್ನ ಮಾಡಿವೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ  ಈರಣ್ಣ ಕಡಾಡಿ ಅವರು ಹೇಳಿದರು.
ಗುರುವಾರ ಅ 1 ರಂದು ಬೆಂಗಳೂರಿನಲ್ಲಿ ರಾಜ್ಯ ಸರಕಾರದ ಕೃಷಿ ಸಚಿವರಾದ ಬಿ ಸಿ ಪಾಟೀಲ ಅವರನ್ನು ಭೇಟ್ಟಿಯಾದ ರೈತ ಮೋರ್ಚಾದ ರಾಜ್ಯ ಪದಾಧಿಕಾರಿಗಳ ತಂಡ ಮೊಸರಿನಲ್ಲಿ ಕಲ್ಲು ಹುಡುಕುವ ಹಾಗೆ ವಿರೋಧ ಪಕ್ಷಗಳು ಇದರ ಬಗ್ಗೆ ಅಪಪ್ರಚಾರ ಮಾಡುತ್ತಿವೆ, ಅದಕ್ಕಾಗಿ ಬಿಜೆಪಿ ರಾಜ್ಯ ರೈತ ಮೋರ್ಚಾ ರಾಜ್ಯಾಂದ್ಯಂತ ಪ್ರವಾಸ ಮಾಡಿ ರೈತರಿಗೆ ಸಂಪೂರ್ಣ ಮಾಹಿತಿಯನ್ನ ನೀಡುವಂತಹ ಕಾರ್ಯಚಟುವಟಿಕೆಗಳನ್ನ ಹಮ್ಮಿಕೊಂಡಿದೆ ಎಂದು ಕಡಾಡಿಯವರು ವಿವರ ನೀಡಿದರು.
ಕೃಷಿ ಸಚಿವರಾದ ತಾವು ಉತ್ತಮ ಕಾರ್ಯವನ್ನ ನಿರ್ವಹಿಸುತ್ತಿದ್ದಿರಿ. ರೈತ ಪರವಾದ ಮಸೂದೆಗಳನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಸಂದರ್ಭದಲ್ಲಿ ಸಾಂಕೇತವಾಗಿ ತಮ್ಮನ್ನು ರಾಜ್ಯ ರೈತ ಮೋರ್ಚಾ ಪದಾಧಿಕಾರಿಗಳು ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷರಾದ ಲೊಕೇಶಗೌಡ, ನಂಜುಂಡೇಗೌಡ, ಪ್ರಸನ್ನಗೌಡ, ಆರ್.ಟಿ ಪಾಟೀಲ, ತೀರ್ಥರಾಮು ಎ.ವಿ, ದುಂಡಪ್ಪ ಬೆಣವಾಡೆ, ಪ್ರಧಾನ ಕಾರ್ಯದರ್ಶಿ ಎಸ್ ಶಿವಪ್ರಸಾದ, ಡಾ. ನವೀನ್ ಕುಮಾರ, ಧರ್ಮಣ್ಣ ದೊಡ್ಡಮನಿ, ರಮೇಶ ಡಿ, ಚಂದ್ರಶೇಖರ ಮಾಗನೂರ, ಖಜಾಂಚಿ ಲಲ್ಲೇಶ ರೆಡ್ಡಿ ಉಪಸ್ಥಿತರಿದ್ದರು.

ಮೂಡಲಗಿ ಬೆಂಗಳೂರಿನಲ್ಲಿ ರಾಜ್ಯ ಕೃಷಿ ಸಚಿವರಾದ ಬಿ ಸಿ ಪಾಟೀಲ ಅವರನ್ನು ರಾಜ್ಯಸಭಾ ಸದಸ್ಯರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಈರಣ್ಣ ಕಡಾಡಿ ಅವರು ಸನ್ಮಾನಿಸಿದರು. ಲೊಕೇಶಗೌಡ, ನಂಜುಂಡೇಗೌಡ, ಪ್ರಸನ್ನಗೌಡ, ಆರ್.ಟಿ ಪಾಟೀಲ, ತೀರ್ಥರಾಮು ಎ.ವಿ, ದುಂಡಪ್ಪ ಬೆಣವಾಡೆ, ಪ್ರಧಾನ ಕಾರ್ಯದರ್ಶಿ ಎಸ್ ಶಿವಪ್ರಸಾದ ಹಾಗೂ ಇತರರನ್ನು ಕಾಣಬಹುದು.


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ