Breaking News
Home / Recent Posts / ಅತೀ ಹೆಚ್ಚು ಯೋಧರನ್ನು ದೇಶ ರಕ್ಷಣೆಗೆ ನೀಡುವದು ಬೆಳಗಾವಿ ಜಿಲ್ಲೆ -ಕ್ಷೇತ್ರ ಶಿಕ್ಷಣಾಧಿಕಾರಿ ಎ ಸಿ ಮನ್ನಿಕೇರಿ

ಅತೀ ಹೆಚ್ಚು ಯೋಧರನ್ನು ದೇಶ ರಕ್ಷಣೆಗೆ ನೀಡುವದು ಬೆಳಗಾವಿ ಜಿಲ್ಲೆ -ಕ್ಷೇತ್ರ ಶಿಕ್ಷಣಾಧಿಕಾರಿ ಎ ಸಿ ಮನ್ನಿಕೇರಿ

Spread the love

ಮೂಡಲಗಿ : “ರಾಜ್ಯದಲ್ಲಿಯೇ ಅತೀ ಹೆಚ್ಚು ಯೋಧರನ್ನು ದೇಶ ರಕ್ಷಣೆಗೆ ನೀಡುವ ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ದೇಶ ಸೇವೆಗೆ ತಮ್ಮ ಕರುಳ ಕುಡಿಗಳನ್ನು ಧೈರ್ಯದಿಂದ ಕಳುಹಿಸುವ ಗಟ್ಟಿ ಗುಂಡಿಗೆಯ ತಾಯಿಂದಿರು ಇಲ್ಲಿದ್ದಾರೆ. ಇಂತಹ ವೀರ ನಾಡಿನಲ್ಲಿ ಹುಟ್ಟಿ ೨೦/0೯/೨೦೦೩ ರಲ್ಲಿ ಭಾರತೀಯ ಸೇನೆಗೆ ಸೇರಿ ಸುಮಾರು ೧೭ ವರ್ಷಗಳ ಕಾಲ ೪ನೇ ಮದ್ರಾಸ್ ರೆಜಿಮೆಂಟ್ ಬಟಾಲಿಯನ್ ನಲ್ಲಿ ಎಲ್.ಎನ್.ಕೆ ಹುದ್ದೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವವರು ಮೂಡಲಗಿಯ ಕಿರಣ ಚಂದ್ರಕಾಂತ ಇಂಗಳೆ. ಇವರು ದಿನಾಂಕ:೩೦/೦೯/೨೦೨೦ಕ್ಕೆ ನಿವೃತ್ತಿ ಹೊಂದಿರುತ್ತಾರೆ. ರಾಷ್ಟ್ರ ಸೇವೆಗೆ ಇವರು ಕೊಡುಗೆ ಅಪಾರವಾದುದು” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ ಸಿ ಮನ್ನಿಕೇರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ದಿನಾಂಕ:೦೨/೧೦/೨೦೨೦ ರಂದು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ದೇಶ ಸೇವೆಯಿಂದ ನಿವೃತ್ತರಾದ   ಕಿರಣ ಚಂದ್ರಕಾಂತ ಇಂಗಳೆ ಇವರ ಆತ್ಮೀಯ ಸರಳ ಸತ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು. ದೇಶ ರಕ್ಷಣೆಗೆ ಕಿರಣ ಚಂದ್ರಕಾಂತ ಇಂಗಳೆಯವರು ನೀಡಿರುವ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಲಾಯಿತು.

ಈ ಸಂದರ್ಭದಲ್ಲಿ ಇ.ಸಿ.ಓ ಸತೀಶ ಬಿ.ಎಸ್, ಕಚೇರಿ ಸಿಬ್ಬಂದಿ ಚಿದಾನಂದ ಹಾಗೂ ಕಿರಣ ಇಂಗಳೆಯವರ ಗೆಳೆಯರು ಉಪಸ್ಥಿತರಿದ್ದರು.


Spread the love

About inmudalgi

Check Also

ಡಿ.12ರಂದು ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ

Spread the loveಡಿ.12ರಂದು ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವರ ಕಾರ್ತಿಕೋತ್ಸವ ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ