ಅಧಿಕ ಮಾಸದ ಪ್ರವಚನ ಸಮಾರೋಪ ,
ಕೊರೊನಾ ಸೇನಾನಿಗಳಿಗೆ ಸನ್ಮಾನ
ಮೂಡಲಗಿ: ಮೂಡಲಗಿ ಸಮೀಪದ ಮುನ್ಯಾಳ ಗ್ರಾಮದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಆಧ್ಯಾತ್ಮಿಕ ಪ್ರವಚನ ಮತ್ತು ಕೋವಿಡ್ 19ರ ಅರಿವು’ ಕಾರ್ಯಕ್ರಮದ ಸಮಾರೋಪ ಸಮಾರಂಭವು ಅ. 15 ರಂದು ಬೆಳಿಗ್ಗೆ 9ಕ್ಕೆ ಮುನ್ಯಾಳದ ಸದಾಶೀವಯೋಗೀಶ್ವರ ಮಠದಲ್ಲಿ ಜರುಗಲಿದೆ.
ಸಾನ್ನಿಧ್ಯವನ್ನು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪುರದ ಸದಾಶಿವಯೋಗೀಶ್ವರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಯವರು ವಹಿಸುವರು.
ಪ್ರವಚನ ಮಂಗಲವನ್ನು ಶರಣ ಲಕ್ಷ್ಮಣ ದೇವರು ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಡಿ.ಜಿ. ಮಹಾತ್, ಜಿಲ್ಲಾ ಪಂಚಾಯ್ತಿ ಸದಸ್ಯೆ ವಾಸಂತಿ ತೇರದಾಳ, ತಾಲ್ಲೂಕು ಪಂಚಾಯ್ತಿ ಸದಸ್ಯ ಹಣಮಂತ ತೇರದಾಳ, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಶಿಶು ಅಭಿವೃದ್ಧಿ ಅಧಿಕಾರಿ ವೈ.ಎಂ. ಗುಜನಟ್ಟಿ, ಪದೋನ್ನತಿ ಹೊಂದಿರುವ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ, ಹಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮುರಗೋಡ,ಉಪ ತಹಶೀಲ್ದಾರ್ ಎಲ್. ಎಚ್. ಬೋವಿ ,ಕಂದಾಯ ನಿರೀಕ್ಷಕ ಬಿ.ಎಚ್ ಹೊಸಮನಿ. ಪಿಡಿಒ ಎಸ್.ಎಸ್. ರೊಡ್ಡಣ್ಣವರ, ಗ್ರಾಮ ಲೆಕ್ಕಾಧಿಕಾರಿ ಎಸ್.ಟಿ. ಕೊಟ್ಯಾಗೋಳ ಭಾಗವಹಿಸುವರು.
ಕೊರೊನಾ ಸೇನಾನಿಗಳಾದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಹಾಗೂ ಪತ್ರಕರ್ತರು ಮತ್ತು ಮುನ್ಯಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಇರುವುದು ಎಂದು ಸನ್ಮಾನ ಪ್ರಾಯೋಜಕರಾದ ಆನಂದರಾವ ನಾಯಕ ಹಾಗೂ ಸಂಚಾಲಕ ಡಾ. ಕೆ.ಎಚ್. ನಾಗರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.