ಮೂಡಲಗಿ ವಲಯದ ಪ್ರೌಢ ಶಾಲೆಗಳಿಗೆ ಕಂಪ್ಯೂಟರ ವಿತರಣೆ
ಮೂಡಲಗಿ: ಇನ್ಪೋಸಿಸ್ ಪೌಂಡೇಷನ್ ದೇಶಕ್ಕಾಗಿ ನೀಡಿರುವ ಕೊಡುಗೆ ಸಾಗರದಷ್ಟು. ವಿಶ್ವಕ್ಕೆ ಮಾದರಿಯಾಗಿದೆ. ಶಿಕ್ಷಣದಲ್ಲಿ ಹೊಸ ಕ್ರಾಂತಿ ಮಾಡುತ್ತಿದ್ದು,ರೈತಾಪಿ ವರ್ಗ, ಬಡವರ ಪಾಲಿಗೆ ಕಾಮದೇನುವಾಗಿದೆ ಎಂದು ಜಿಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ನಾಯಕ ಸ್ಟೂಡೆಂಟ್ ಫೆಡರೇಷನ್ ಪ್ರೌಢ ಶಾಲೆಯಲ್ಲಿ ಇಂದು ಸಂಜೆ ಇನ್ಪೋಸಿಸ್ ಪೌಂಡೇಷನ್ ಮುಖ್ಯಸ್ಥೆ ಶ್ರೀಮತಿ ಸುಧಾಮೂರ್ತಿ ಇವರು ಮೂಡಲಗಿ ವಲಯದ ಪ್ರೌಢ ಶಾಲೆಗಳಿಗೆ ಉಚಿತ ಕಂಪ್ಯೂಟರ ನೀಡಿದ್ದು ಇವುಗಳ ಶಾಲಾ ಮುಖ್ಯಸ್ಥರಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ವಿಜ್ಞಾನ ಯಗದಲ್ಲಿ ಕಂಪ್ಯೂಟರ ಅವಶ್ಯಕವಾಗಿದ್ದು ಗ್ರಾಮೀಣ ಮಕ್ಕಳು ಬಗರಕ್ಕೆ ಹೋಗಿ ಕಲಿಯಬೇಕಾಗುತ್ತೆ ಹಾಗೂ ಪಠ್ಯೆತರ ಚಟುವಟಿಕೆಗಳ ಅಭ್ಯಾಸ ಮಾಡಲು ಅನುಕೂಲವಾಗುವದು ದೃಷ್ಠಿಯಲ್ಲಿ ಇನ್ಪೋಸಿಸ್ ಪೌಂಡೇಷನ್ ಮುಖ್ಯಸ್ಥೆ ಶ್ರೀಮತಿ ಸುಧಾಮೂರ್ತಿ ಮೂಡಲಗಿ ವಲಯದ ಶಾಲೆಗಳಿಗೆ ಕಂಪ್ಯೂಟರ ನೀಡಿರುವದು ಮಕ್ಕಳಿಗೆ ಉಪಯೋಗ ಪಡೆಯಬೇಕು ಎಂದರು
ಸಂದರ್ಭದಲ್ಲಿ ಅನುದಾನಿತ ಶಾಲೆಗಳಾದ ಎನ್.ಎಸ್.ಎಫ್ ಪ್ರೌಢ ಶಾಲೆ ಹಾಗೂ ಕೇಳಕರ ಪ್ರೌಢ ಶಾಲೆ ಕುಲಗೋಡ.ಶ್ರೀ ಮಹಾಲಕ್ಷ್ಮೀ ಪ್ರೌಢ ಶಾಲೆ ಮಸಗುಪ್ಪಿ. ಜಿ.ಎನ್.ಎಸ್ ಪ್ರೌಢ ಶಾಲೆ ಯಾದವಾಡ.
ಸರಕಾರಿ ಪ್ರೌಢ ಶಾಲೆಗಳಾದ ಹೊನಕುಪ್ಪಿ, ಕೊಪದಟ್ಟಿ, ಹುಣಶ್ಯಾಳ, ಸುಣಧೋಳಿ, ಅವರಾದಿ ಪ್ರೌಢ ಶಾಲೆಗಳಿಗೆ ಒಂದರಂತೆ 10 ಕಂಪ್ಯೂಟರ ನೀಡಲಾಯಿತು. ಜಿಪಂ ಸದಸ್ಯ ಗೋವಿಂದ ಕೊಪ್ಪದ ಶಾಲೆಗಳಿಗೆ ನೀರಿನ ಕ್ಯಾನ್ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಗೋವಿಂದ ಕೊಪ್ಪದ. ನಿವೃತ್ತ ಜಿ ಆರ್.ಬಿ.ಸಿ ಅಧಿಕಾರಿ ಎಸ್ ಜಂಗಲ್. ಶಿಕ್ಷಣ ಸಂಯೋಜಕರಾದ ಬಸವರಾಜ ಟಿ. ಸತೀಶ ಬಿ.ಎಸ್. ಎಲ್.ಎಮ್ ಬಡಕಲ್ಲ. ಆರ್.ಎಮ್ ಮಹಾಲಿಂಗಪೂರ. ಸುರೇಶ ತಳವಾರ. ಹಣಮಂತ ಬೆಳಗಲಿ. ವಿಜಯ ಜಡ್ಲಿ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಇದ್ದರು.