ಮೂಡಲಗಿ:- ಮಹಾಮಾರಿ ಕೊರೋನಾ ತಡೆಗಟ್ಟಲು ಸಾಮಾಜಿಕ ಜವಾಬ್ದಾರಿಗಳನ್ನು ಪ್ರತಿಯೊಬ್ಬರು ಪಾಲಿಸುವುದರ ಜೊತೆಗೆ ತಮ್ಮ ಮನೆಗಳ ಸುತ್ತ ಮುತ್ತ ಸ್ವಚ್ಚತೆ ಕಾಯ್ದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹೇಳಿದರು.
ಅವರು ಶನಿವಾರದಂದು ಪಟ್ಟಣದ ನಾಗಲಿಂಗ ನಗರದಲ್ಲಿ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇವಾ ಸಂಘ, ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಹಾಗೂ ಗಾರ್ಡನ್ ಯುವ ಸಂಘ ಮೂಡಲಗಿ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣಾಭಿವೃದ್ದಿ ಸಂಘ ಮತ್ತು ವಾಲ್ಮೀಕಿ ಯುವಕ ಮಂಡಳ ಇವುಗಳ ಸಹಯೋಗದಲ್ಲಿ ಮನೆ ಮನೆಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಕೊರೋನಾ ಜಾಗೃತಿ ಕರ ಪತ್ರ ಮಾಸ್ಕ ವಿತರಿಸಿ ಮಾತನಾಡಿದ ಅವರು ಮನೆಯಿಂದ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ,ಸ್ಯಾನಿಟೈಜರ್,ಸಾಮಾಜಿಕ ಅಂತರ ಬಳಸಿ, ಕೊರೋನಾ ರೋಗಕ್ಕೆ ಯಾರೂ ಹೆದರದೆ ಮನೆಯಲ್ಲೆ ಇದ್ದು ಸ್ವಚ್ಚ ಪರಿಸರ ಉತ್ತಮ ಆರೋಗ್ಯ ಹೊಂದಬೇಕೆಂದು ಸರಕಾರ ನಿಮ್ಮ ಆರೋಗ್ಯದ ಯೋಗಕ್ಷೇಮಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಕೊರೋನಾ ವಾರಿಯರ್ಸಗೆ ತಾವೆಲ್ಲರೂ ಸಹಕಾರ ನೀಡಿ ಕೊರೋನಾ ಮುಕ್ತ ಸಮಾಜ ನಿರ್ಮಾಣವಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಹೇಳಿದರು..
ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇವಾ ಸಂಘದ ಅಧ್ಯಕ್ಷೆ ಅಕ್ಕಮಾಹಾದೇವಿ ಗೋಡ್ಯಾಗೋಳ ಮಾತನಾಡಿ,ಬೆಳಗಾವಿ ನೇಹರು ಯುವ ಕೇಂದ್ರದವರು ಜಿಲ್ಲಾಧ್ಯಂತ ಯುವಕ ಸಂಘಗಳ ಮುಖಾಂತರ ಕೊರೋನಾ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಮಹರ್ಷಿ ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಯಲ್ಲಾಲಿಂಗ ವಾಳದ ಮಾತನಾಡಿ, ಸರಿಯಾದ ಜಾಗೃತಿಯೊಂದಿಗೆ ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ಇನ್ನೂ ಹೆಚ್ಚಿಗೆ ಆಗಬೇಕೆಂದು ಹೇಳಿದರು
ಗಾರ್ಡನ ಯುವ ಸಂಘದ ಕಾರ್ಯದರ್ಶಿ ಸುಭಾಸ ಗೋಡ್ಯಾಗೋಳ, ಮಾತನಾಡಿದರು. ಎನ್.ವಾಯ್.ಸಿ.ಲಕ್ಷ್ಮೀಬಾಯಿ ಮಾದರ, ಮಂಜನಾಥ ರೇಳೆಕರ, ಸರಸ್ವತಿ ದುರದುಂಡಿ,ಮಹಾಲಿಂಗ ಗೊಡ್ಯಾಗೋಳ, ರಾಘವೇಂದ್ರ ಮುನ್ಯಾಳ, ಸಂತೋಷ ಹಂಜಿ,ಶಿವು ಮರಡಿ,ರೇವಣ್ಣ ಬಾಳಿಕಾಯಿ ಹಾಗೂ ಸಂಘದ ಪದಾದಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
