ಮೂಡಲಗಿ: ಪಟ್ಟಣ ಸೌಹಾರ್ಧತೆಗೆ ಹೆಸರುವಾಸಿಯಾಗಿದ್ದು ಸರ್ವ ಜನಾಂಗದ ಹಿತ ಚಿಂತನೆ ಕಮೀಟಿಯ ದ್ಯೇಯವಾಗಿ, ಸದೃಡ ಸಮಾಜ ನಿರ್ಮಾಣದ ಗುರಿ ಹೊಂದಬೇಂದು ಸಿ.ಪಿ.ಐ.ಆಗಿ ಬಡ್ತಿ ಹೊಂದಿದ ಮಲ್ಲಿಕಾರ್ಜುನ ಸಿಂಧೂರ ಹೇಳಿದರು.
ಸೋಮವಾರ ಇಲ್ಲಿನ ಅಂಜುಮನ ಏ ಇಸ್ಲಾಂ ಏಜುಕೇಷನ್ ಮತ್ತು ಸೋಶಿಯಲ್ ಸೊಸೈಟಿಯ ನೂತನ ಕಾರ್ಯಾಲಯದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಆರ್ಥಿಕ,ಸಾಮಾಜಿಕ,ಶೈಕ್ಷಣಿಕವಾಗಿ ಸದೃಡ ಹೊಂದಿ ಬಡ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಒಳ್ಳೆಯ ಶಿಕ್ಷಣ ಒದಗಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಸೊಸಾಯಿಟಿಯ ಪ್ರಯತ್ನವಾಗಲಿ ವಿವಿಧ ಸಮಾಜಮುಖಿ, ಜನಪರ ಕಾರ್ಯಗಳನ್ನು ಒಗ್ಗಟ್ಟಿನಿಂದ ಮಾಡಿ ದೇಶದ ಪ್ರಗತಿಗೆ ಶ್ರಮಿಸಿ ಎಂದರು.
ಸಂಸ್ಥೆಯ ಸದಸ್ಯ ಲಾಲಸಾಬ ಸಿದ್ದಾಪೂರ ಸ್ವಾಗತಿಸಿ ವಂದಿಸಿದರು
ಸಂಸ್ಥೆಯ ಅಧ್ಯಕ್ಷ ಮಲೀಕ ಹುಣಶ್ಯಾಳ,ಉಪಾಧ್ಯಕ್ಷ ಮೌಲಾಸಾಬ ಮೊಗಲ,ಕಾರ್ಯದರ್ಶಿ ಶಕೀಲ ಬೇಪಾರಿ ಖಜಾಂಚಿ ಅಕ್ಬರಸಾಬ ಪಾಶ್ಚಾಪೂರ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
