ಬನವಾಸಿ ಗ್ರಾಮ ಪಂಚಾಯಿತಿ ಚುನಾವಣೆಗೆ 80 ನಾಮಪತ್ರ ಸಲ್ಲಿಕೆ
ಬನವಾಸಿ: ಬನವಾಸಿ ಗ್ರಾಮ ಪಂಚಾಯಿತಿಯ 5ವಾರ್ಡ್‍ಗಳ 18ಸ್ಥಾನಕ್ಕೆ 80 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಬನವಾಸಿ ಗ್ರಾಮ ಪಂಚಾಯಿತಿಯ ಚುನಾವಣಾ ಅಧಿಕಾರಿ ದತ್ತತ್ರೇ ಭಟ್ಟ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರದಂದು 34 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬನವಾಸಿ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 1ರಲ್ಲಿ 17 ಅಭ್ಯರ್ಥಿಗಳು, ವಾರ್ಡ್ ಸಂಖ್ಯೆ 2ರಲ್ಲಿ 10 ಅಭ್ಯರ್ಥಿಗಳು, ವಾರ್ಡ್ ಸಂಖ್ಯೆ 3ರಲ್ಲಿ 21 ಅಭ್ಯರ್ಥಿಗಳು, ವಾರ್ಡ್ ಸಂಖ್ಯೆ 4ರಲ್ಲಿ 11 ಅಭ್ಯರ್ಥಿಗಳು, ವಾರ್ಡ್ ಸಂಖ್ಯೆ 5ರಲ್ಲಿ 21 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಳೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಾಮಪತ್ರ ಪರಿಶೀಲನೆ ನಡೆಯಲಿದೆ ಎಂದು ತಿಳಿಸಿದರು. ಬನವಾಸಿ ಗ್ರಾಮ ಪಂಚಾಯಿತಿಯ ಚುನಾವಣಾ ಅಧಿಕಾರಿಯಾಗಿ ದತ್ತತ್ರೇ ಭಟ್ಟ ಕಾರ್ಯ ನಿರ್ವಹಿಸುತ್ತಿದ್ದು ಸಹಾಯಕರಾಗಿ ಮಹೇಶ ಕುಮಾರ ಹಾಗೂ ಪಿಡಿಓ ಮಮತಾ ನಾಯ್ಕ್ ಕಾರ್ಯ ನಿರ್ವಹಿಸುತ್ತಿದ್ದಾರೆ.
IN MUDALGI Latest Kannada News