Breaking News
Home / Recent Posts / ಕುಲಗೋಡ ಕುಡಿಯುವ ನೀರಿಗಾಗಿ 1 ಕೋಟಿ 29 ಲಕ್ಷ

ಕುಲಗೋಡ ಕುಡಿಯುವ ನೀರಿಗಾಗಿ 1 ಕೋಟಿ 29 ಲಕ್ಷ

Spread the love

ಕುಲಗೋಡ ಕುಡಿಯುವ ನೀರಿಗಾಗಿ 1 ಕೋಟಿ 29 ಲಕ್ಷ

ಕುಲಗೋಡ:ಜಿಲ್ಲಾ ಪಂಚಾಯತ ಮತ್ತು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಪೈಪ್ ಲೈನ್ ಕಾಮಗಾರಿಗೆ ಇಂದು ಮುಂಜಾನೆ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಹಾಗೂ ಗ್ರಾಮೀಣ ನೀರು ಸರಬರಾಜ ಮತ್ತು ನೈರ್ಮಲ್ಯ ಇಲಾಖೆ ಐ.ಎಂ ದಪೇದಾರ ಭೂಮಿ ಪೂಜೆ ನೆರವೆರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಮಾತನಾಡಿ ಮಾನ್ಯ ಶಾಸಕರು, ಕೆ.ಎಮ್.ಎಫ್ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿ ಇವರ ಮಾರ್ಗದರ್ಶನದಂತೆ 1.29 ಕೋಟಿ ವೆಚ್ಚದ ಯೋಜನೆ ಮಂಜೂರಾಗಿದೆ. ಗ್ರಾಮದವು ದಶಕಗಳ ಕಳೆಯ ನಳದ ಪೈಪ್ ಲೈನ್ ಅಳವಡಿಸಿದ್ದು ಕೆಲವು ಕಡೆಗಳಲ್ಲಿ ಕ್ಯಾಲ್ಸಿಯಂ ತುಂಬಿ ಜನರಿಗೆ ದಿನಗಳಕೆಗೆ ನೀರಿನ ತೊಂದರೆಯಾಗಿದ್ದು ಮುಂಬರುವ ದಿನದಲ್ಲಿ 24 ಗಂಟೆಗಳ ನಿರಂತರ ನೀರು ಸಿಗಲಿದೆ. ಜನರು ನೀರು ದುರ್ಬಳಕ್ಕೆ ಮಾಡದೆ ನೀರು ಮಿತವಾಗಿ ಉಪಯೋಗಿಸಿ ಎಂದು ಸಲಹೆ ನೀಡಿದರು.
ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷತ ನೀರನ್ನು ಇದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರಕಾರ ಹೆಚ್ಚಿನ ಮಹತ್ವವನ್ನು ನೀಡಿದೆ. ಪ್ರತಿ ದಿನವು ವ್ಯಕ್ತಿಗೆ ತಲಾ 55 ಲೀಟರ ಕುಡಿಯುವ ನೀರು ಒದಗಿಸಲಾಗುತ್ತದೆ ಸಂಪೂರ್ಣ ಪೈಪ್‍ಲೈನ್‍ಗೆ ಹಾಗೂ ಪ್ರತಿ ನಳಗಳಿಗೆ ಮೀಟರಗಾಗಿ ಸೇರಿ 1 ಕೋಟಿ 29 ಲಕ್ಷ ಮಂಜೂರಾಗಿದೆ ಎಂದು ಗ್ರಾಮೀಣ ನೀರು ಸರಬರಾಜ ಮತ್ತು ನೈರ್ಮಲ್ಯ ಇಲಾಖೆ ಐ.ಎಂ ದಪೇದಾರ ಮಾತನಾಡಿದರು.

ಸಂದರ್ಭದಲ್ಲಿ ಜಿ.ಪಂ ಸದಸ್ಯ ಗೋವಿಂದ ಕೊಪ್ಪದ. ಗ್ರಾಮೀಣ ನೀರು ಸರಬರಾಜ ಮತ್ತು ನೈರ್ಮಲ್ಯ ಇಲಾಖೆ ಐ.ಎಂ ದಪೇದಾರ. ಟಿ.ಎ.ಪಿ.ಎಮ್ ಎಸ್ ಅಧ್ಯಕ್ಷ ಅಶೋಕ ನಾಯಿಕ, ಸುಭಾಶ ವಂಟಗೋಡಿ, ಬಸನಗೌಡ ಪಾಟೀಲ. ಸತೀಶ ವಂಟಗೋಡಿ. ಪಿಡಿ.ಓ ಸದಾಶಿವ ದೇವರ. ವೆಂಕಪ್ಪ ಚನ್ನಾಳ. ತಮ್ಮಣ್ಣಾ ದೇವರ. ಹಣಮಂತ ಚನ್ನಾಳ. ಶ್ರೀಪತಿ ಗಣಿ. ಬಸು ಯರಗಟ್ಟಿ. ಗೋಪಾಲ ತಿಪ್ಪಿಮನಿ. ಜಗದೀಶ ಗಿಡ್ಡಾಳಿ ಸೋಮಲಿಂಗ ಮಿಕಲಿ. ಸದಾ ಗುಡಗುಡಿ. ಮಾರುತಿ ತಿಪ್ಪಮನಿ. ರಾಜು ಯಕ್ಸಂಬಿ. ಬಸವಣ್ಣೆಪ್ಪ ತಿಪ್ಪಿಮನಿ. ಹಣಮಂತ ಲಕ್ಕಾರ. ಕಿಷ್ಟಪ್ಪ ಯರಗಟ್ಟಿ ಹಾಗೂ ನೂತನ ಗ್ರಾ.ಪಂ ಸದಸ್ಯರು ಮತ್ತು ಗ್ರಾಪಂ ಸಿಬ್ಬಂದಿ ಮತ್ತಿತರರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ