ಬೆಟಗೇರಿ:ಸಮೀಪದ ಬಿಲಕುಂದಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಜ.23 ರಂದು ಜರುಗಿದ ಚುನಾವಣೆಯಲ್ಲಿ ಸ್ಥಳೀಯ ಮುಖಂಡ ಶಿವಲಿಂಗಪ್ಪ ಬಳಿಗಾರ ಅವರ ಗುಂಪಿನ ಎರಡು ಸ್ಥಾನಗಳ ಅಭ್ಯರ್ಥಿಗಳು ಜಯ ಸಾಧಿಸಿದ ಪ್ರಯುಕ್ತ ಅವರು, ಇತ್ತೀಚೆಗೆ ಗೋಕಾಕ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.
ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಬಿಲಕುಂದಿ ಗ್ರಾಮದ ಶ್ರೀಶಿಪಿಕೆಪಿಎಸ್ ಸಂಘದ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸ್ಥಳೀಯ ಸಂಘಕ್ಕೆ ಆಯ್ಕೆಗೊಂಡಿರುವ ನೂತನ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು ಎಲ್ಲರೂ ಒಂದಾಗಿ, ಈ ಸಂಘದ ಸಮಗ್ರ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಹೇಳಿದರು.
ಸಂಘದ ನೂತನ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಉಪಾಧ್ಯಕ್ಷ ಗೋವಿಂದಪ್ಪ ಜೊತೆನ್ನವರ, ಗ್ರಾಪಂ ಸದಸ್ಯ ಪ್ರಕಾಶ ಜೋತೆನ್ನವರ, ಶಿವಯ್ಯ ಹಿರೇಮಠ, ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ ಕಪರಟ್ಟಿ, ಚಂದ್ರಯ್ಯ ಹಿರೇಮಠ, ಬಾಳಯ್ಯ ಹಿರೇಮಠ, ಭೀಮಶಿ ಹೊಸಟ್ಟಿ, ಯಲ್ಲಪ್ಪ ಭಂಗಿ, ಪ್ರಭು ಇಟ್ನಾಳ, ಮಹಾದೇವ ಕಳ್ಳಗುದ್ದಿ, ನಿಂಗಪ್ಪ ಹೊಸತೋಟ, ಸ್ಥಳೀಯ ಮುಖಂಡ ಶಿವಲಿಂಗಪ್ಪ ಬಳಿಗಾರ ಅವರ ಗುಂಪಿನ ಬೆಂಬಲಿಗರು, ಇತರರು ಇದ್ದರು.
