ಮೂಡಲಗಿ: ಈ ಬಾರಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನಸಾಮಾನ್ಯರ ಆರೋಗ್ಯ, ರೈತರ ಆದಾಯ, ಗ್ರಾಮೀಣ ಜನರ ಮೂಲಸೌಕರ್ಯಗಳಿಗೆ ಆದ್ಯತೆ ನೀಡಿದ್ದು, ಜನಹಿತದ ಬಜೆಟ್ ಆಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.
ಸೋಮವಾರ ಫೆ-01 ರಂದು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಕುರಿತು ಮಾತನಾಡಿದ ಅವರು ಕರೋನಾ ಹೊಡೆತಕ್ಕೆ ಕಳೆದ ಒಂದು ವರ್ಷದಲ್ಲಿ ಆರ್ಥಿಕ ಪರಿಸ್ಥಿತಿಗೆ ಬಾರಿ ಹಿನ್ನಡೆಯಾಗಿದ್ದರು ಕೂಡಾ ಜನ ಸಾಮಾನ್ಯರ ಆರೋಗ್ಯದ ಹಿತದೃಷ್ಠಿ ಕೋವಿಡ್-19 ವ್ಯಾಕ್ಸಿನಗೆ ರೂ 35 ಸಾವಿರ ಕೋಟಿ ಮೀಸಲಿಡಲಾಗಿದೆ. ಗ್ರಾಮೀಣ ಮೂಲ ಸೌಕರ್ಯಕ್ಕೆ ರೂ. 40 ಸಾವಿರ ಕೋಟಿ ನಿಗದಿಪಡಿಸಲಾಗಿದ್ದು, ರೈತರ ಕೃಷಿ ಸಾಲಕ್ಕಾಗಿ ರೂ 16,500 ಕೋಟಿ ಮೀಸಲಿಡಲಾಗಿದೆ ಎಂದರು. ರೈತರ ಬೇಸಾಯದ ಖರ್ಚಿನ ಒಂದುವರೆ ಪಟ್ಟು ಬೆಂಬಲ ಬೆಲೆ ಆಹಾರ ಧಾನ್ಯಗಳನ್ನು ಖರೀದಿ ಮಾಡಲು ನಿರ್ಧರಿಸಲಾಗಿದ್ದು, ಕನಿಷ್ಠ ಬೆಂಬಲ ಬೆಲೆಯಲ್ಲಿ ರೂ.43 ಕೋಟಿ ರೈತರಿಗೆ ಇದರಿಂದ ಲಾಭವಾಗಲಿದೆ. ಈ ಹಿಂದಿನ ಖರೀದಿಗೆ 40 ಪಟ್ಟು ಹೆಚ್ಚಿನ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿದಂತಾಗುತ್ತದೆ ಎಂದರು.
ಒನ್ ನೇಶನ್ ಒನ್ ರೇಶನ್ ಜಾರಿ ಮಾಡಲಾಗಿದ್ದು ಇದರಿಂದ ಪ್ರತಿಯೊಬ್ಬ ವ್ಯಕ್ತಿ ತಾವು ಇರುವ ಜಾಗದಲ್ಲಿ ಖರೀದಿ ಮಾಡಲು ಅನುಕೂಲ ಮತ್ತು ಕುಟುಂಬದ ಪ್ರತಿ ವ್ಯಕ್ತಿ ಆಧಾರದಲ್ಲಿ ರೇಷನ ವಿತರಣೆಗೆ ನಿರ್ಧರಿಸಲಾಗಿದ್ದು ಇದರಿಂದಾಗಿ ಸಾಕಷ್ಟು ಆಹಾರ ಧಾನ್ಯ ಸಿಗಲಿದೆ ಎಂದರಲ್ಲದೇ ಮೊಟ್ಟ ಮೊದಲ ಬಾರಿಗೆ ಡಿಜಿಟಲ್ ಜನಗಣತಿಗೆ ನಿರ್ಧರಿಸಲಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ರೂ.3768 ಕೋಟಿ ಖರ್ಚು ಮಾಡಲಿದೆ ಎಂದರು. 75 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯತಿಯನ್ನು ನೀಡಲಾಗಿದೆ. ಅದರಂತೆ ಆತ್ಮನಿರ್ಭರ ಭಾರತ ಯೋಜನೆಗೆ ರೂ.64,184 ಕೋಟಿ ರೂ ನಿಗದಿ ಪಡಿಸಲಾಗಿದ್ದು ಇದು ಸಾವಲಂಬಿ ಭಾರತ ನಿರ್ಮಾಣಕ್ಕೆ ಸಹಾಯವಾಗಲಿದೆ ಎಂದರು.
Home / Recent Posts / ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನಸಾಮಾನ್ಯರ ಜನಹಿತದ ಬಜೆಟ್ ಆಗಿದೆ – ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …