ಬೆಟಗೇರಿ: ಎಲ್ಲಕ್ಕಿಂತ ಶಾಲೆಯ ಹಳೆಯ ವಿದ್ಯಾರ್ಥಿಗಳ ಪ್ರೀತಿ, ಅಭಿಮಾನ ದೊಡ್ಡದು, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಏನಾದರೂ ಮಹತ್ತರ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಧಾರವಾಡ ಕರಡಿಗುಡ್ಡದ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಕ ಪಾಂಡುರಂಗ ಎಸ್.ಅಂಕಲಿ ಹೇಳಿದರು.
ಧಾರವಾಡ ಕರಡಿಗುಡ್ಡದ ಸರ್ಕಾರಿ ಪ್ರೌಢ ಶಾಲೆ ದೈಹಿಕ ಶಿಕ್ಷಕ ಪಾಂಡುರಂಗ ಎಸ್.ಅಂಕಲಿ ಅವರು ಜನ ಮೆಚ್ಚಿದ ಶಿಕ್ಷಕ ಹಾಗೂ ಶ್ರಮಿಕ ರತ್ನ ಪ್ರಶಸ್ತಿ ವಿಜೇತರಾದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ 2010-11ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಶನಿವಾರದಂದು ಹಮ್ಮಿಕೊಂಡ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಧನೆ ಸಾಧಕನ ಸ್ವತ್ತು, ಸೋಮಾರಿಯ ಸ್ವತ್ತಲ್ಲಾ ಎಂದರು.
ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ 2010-11ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ವತಿಯಿಂದ ಪ್ರಶಸ್ತಿ ವಿಜೇತ ದೈಹಿಕ ಶಿಕ್ಷಕ ಪಾಂಡುರಂಗ ಎಸ್.ಅಂಕಲಿ ಅವರನ್ನು, ಗಣ್ಯರು, ಅತಿಥಿಗಳನ್ನು ಶಾಲು ಹೊದಿಸಿ ಸತ್ಕರಿಲಾಯಿತು. ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅಧ್ಯಕ್ಷತೆ ವಹಿಸಿದ್ದರು.
ಗಂಗಾಧರ ಕೋಣಿ, ಭೀಮಶಿ ಹೊರಟ್ಟಿ, ಶಿವು ದೇಯಣ್ಣವರ, ಬಸವರಾಜ ಬಾಣಸಿ, ಶಂಭು ಹಿರೇಮಠ, ವಿಜಯ ಹಿರೇಮಠ, ಮಹೇಶ ಕೋಣಿ, ರಾಜು ಪತ್ತಾರ, ನಾಗರಾಜ ಬೆಳಗಲಿ, ಶಾಲೆಯ ಶಿಕ್ಷಕರು, ಸಿಬ್ಬಂದಿ, ಎಸ್‍ಡಿಎಂಸಿ ಅಧ್ಯಕ್ಷ-ಸದಸ್ಯರು, ಶಿಕ್ಷಣಪ್ರೇಮಿಗಳು, ಗಣ್ಯರು, ಇದ್ದರು.
