ವೀರಶೈವ ಲಿಂಗಾಯತ ಸಮುದಾಯಕ್ಕೆ ಓಬಿಸಿ ಮಾನ್ಯತೆ ನೀಡುಬೇಕೆಂದು ಆಗ್ರಹಿಸಿ ಮನವಿ
ಮೂಡಲಗಿ: ವೀರಶೈವ ಲಿಂಗಾಯತ ಮೂಡಲಗಿ ತಾಲೂಕ ಘಟಕದಿಂದ ವೀರಶೈವ ಲಿಂಗಾಯತ ಎಲ್ಲ ಉಪಜಾತಿಗಳಿಗೆ ಹಿಂದುಳಿದ ವರ್ಗಗಳ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಮೂಡಲಗಿ ತಹಶಿಲ್ದಾರ ಮೂಲಕ ಕೇಂದ್ರ ಸರಕಾರಕ್ಕೆ ಗುರುವಾರದಂದು ಮನವಿ ಸಲ್ಲಿಸಿದರು.
ಮನವಿಯಲ್ಲಿ ವೀರಶೈವ ಲಿಂಗಾಯತ ಸಮಸ್ತ ಉಪಪಂಗಡಗಳನ್ನು ಒಳಗೊಂಡ ಸಮುದಾಯವು ಸಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಸೂಕ್ಷ್ಮ ಮತ್ತು ಕ್ಲಿಷ್ಟಕರ, ಕಠಿನ ಪರಿಸ್ಥಿಯಲ್ಲಿದ್ದುವೀರಶೈವ ಲಿಂಗಾಯತ ಸಮುದಾಯವು ಸಮಸ್ತ 108ಕ್ಕೂ ಹೆಚ್ಚು ಉಪಪಂಗಡಗಳು ಸಮಾಜಿಕ ನ್ಯಾಯಯುತವಾಗಿ ಜೀವನ ನಡೆಸಲು ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಅತ್ಯಂತ ಅವಶ್ಯಕವಾಘಿರುವುದು, ಈ ವರೆಗೂ ನಮ್ಮ ಸಮುದಾಯದ ಶ್ರೀಗಳು ಪಂಚಾಚಾರ್ಯ ಶಿವಾಚಾರ್ಯರು, ಬಸವಾದಿ ಶಿವಶರಣರು, ಗುರುಹಿರಿಯರು ಅನೇಕ ವರ್ಷಗಳಿಂದ ಕೇಂದ್ರದ ಹಿಂದುಳಿದ ವರ್ಗಗಳ ಮಿಸಲಾತಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅನೇಕ ಬಾರಿ ಹೋರಾಟ ನಡೆಸುತ್ತಾ ಮನವಿಗಳನ್ನು ಅರ್ಪಿಸುತ್ತಾ ಬಂದಿರುವರು, ಆದರೂ ಕೂಡ ಸರ್ಕಾರ ಈವರೆಗೂ ಮಿಸಲಾತಿ ನೀಡಿರುವದಿಲ್ಲಾ.
ವೀರಶೈವ ಲಿಂಗಾಯತ ಸಮುದಾಯಕ್ಕೆ ಸಮಾಜಿಕವಾಗಿ, ಶೈಕ್ಷಣಿಕ ಹಾಗೂ ಮುಂದಿನಯುವ ಜನಾಂಗ್ ಉಜ್ವಲ ಭವಿಷ್ಯಕ್ಕಾಗಿ ವಿರಶೈವ ಸಮುದಾಯದ ಎಲ್ಲ 108 ಉಪಪಂಗಡಗಳಿಗೆ ಹಿಂದುಳಿದ ವರ್ಗಗಳ ಮಿಸಲಾತಿ ಹಕ್ಕನ್ನು ನೀಡಬೇಕೆಂದು ಮನವಿಯಲ್ಲಿ ತಿಳಿಸಲ್ಲಾಗಿದೆ.
ವೀರಶೈವ ಸಂಘನೆಯ ಪದಾಧಿಕಾರಿಗಳಾದ ಬಸವರಾಜ ಅಂಗಡಿ, ಈರಣ್ಣಾ ಅರಕೇರಿ, ಪ್ರದೀಪ ನೇಮಗೌಡ್ರ, ಶ್ರೀಶೈಲ್ ಢವಳೇಶ್ವರ, ಅಶೋಕ ಬಾಬನ್ನವರ, ಬಸವರಾಜ ಶಹಾಪೂರಮಠ, ಹನಮಂತರಾವ್ ಶೆಕ್ಕಿ, ಪ್ರವೀನಕಂಕಣವಾಡಿ, ಬಾಲರಾಜ ದಾನಶೆಟ್ಟಿ, ಮಂಜುನಾಥ ಜಿ.ಎಂ ಮತ್ತಿತರು ಇದ್ದರು.