ಮೂಡಲಗಿ : ರಮೇಶ ಜಾರಕಿಹೊಳಿಯವರ ನಕಲಿ ವಿಡಿಯೋ ಖಂಡಿಸಿ ಮೂಡಲಗಿ ತಾಲೂಕಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ ರಮೇಶ ಜಾರಕಿಹೊಳಿ ವಿರುದ್ಧದ ಷಡ್ಯಂತ್ರ ಖಂಡಿಸಿ ಪ್ರತಿಭಟನೆ ನಡೆಸಿದರು.
ಬಿಡುಗಡೆಗೊಳಿಸಿರುವ ಸಿಡಿ ಫೇಕ್ ತಂತ್ರಜ್ಞಾನದಿoದ ಕೂಡಿದ ರಾಸಲೀಲೆ ವಿಡಿಯೋ ಹರಿಬಿಟ್ಟಿದ್ದು, ಇದು ಜಾರಕಿಹೊಳಿ ಕುಟುಂಬದ ವಿರುದ್ಧ ಮಾಡಿರುವ ರಾಜಕೀಯ ವಿರೋಧಿಗಳ ಹುನ್ನಾರ-ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಡಿ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐ ಅಥವಾ ಸಿಓಡಿಗೆ ವಹಿಸಬೇಕೆಂದು ಆಗ್ರಹಿಸಿ ಸ್ಥಳೀಯ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಿಜೆಪಿ ಮುಖಂಡ ಪ್ರಕಾಶ ಮಾದರ ಮಾತನಾಡಿ, ಸಿಡಿ ಬಗ್ಗೆ ಸಮಗ್ರ ತನಿಖೆಗೆ ಸಿಬಿಐ ಆಥವಾ ಸಿಓಡಿಗೆ ನೇಮಿಸಬೇಕು. ರಮೇಶ ಜಾರಕಿಹೊಳಿಯವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಆ ಎರಡು ಸ್ಥಾನಗಳನ್ನು ಅರಭಾವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರಿಗೆ ನೀಡಿ ಜಾರಕಿಹೊಳಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಬಿಜೆಪಿ ಯುವ ಮುಖಂಡ ಹಣಮಂತ ಗುಡ್ಲಮನಿ ಮಾತನಾಡಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ರಮೇಶ ಜಾರಕಿಹೊಳಿಯವರ ವಿಡಿಯೋ ಸತ್ಯಕ್ಕೆ ದೂರವಾದದ್ದು, ಅದ್ದರಿಂದ ಸಮಗ್ರ ತನಿಖೆ ಬಳಿಕ ಸತ್ಯಾಸತ್ಯತೆಗಳು ಆಲಿಸಿದ ನಂತರ ದಿನೇಶ ಕಲ್ಲಹಳ್ಳಿಗೆ ಕಠಿಣ ಶಿಕ್ಷೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಿಂಗಪ್ಪ ಪಿರೋಜಿ, ಸಂತೋಷ ಸೋನವಾಲ್ಕರ, ಡಾ.ಎಸ್ ಎಸ್ ಪಾಟೀಲ, ರವೀಂದ್ರ ಸೋನವಾಲ್ಕರ, ಅಜೀಜ ಡಾಂಗೆ, ರವೀಂದ್ರ ಸಣ್ಣಕ್ಕಿ, ಮಹಾದೇವ ಶೆಕ್ಕಿ, ಸುಭಾಸ ಸಣ್ಣಕ್ಕಿ, ಅನ್ವರ ನದಾಫ್, ಗಿರೀಶ ಢವಳೇಶ್ವರ, ಜಯಾನಂದ ಪಾಟೀಲ, ಶಿವಪ್ಪ ಚಂಡಕಿ, ರಮೇಶ ಸಣ್ಣಕ್ಕಿ, ಯಲ್ಲಾಲಿಂಗ ವಾಳದ, ಚೇತನ ನಿಶಾನಿಮಠ, ಹನಮಂತ ಸತರಡ್ಡಿ, ಮಲೀಕ ಹುಣಶ್ಯಾಳ, ಹುಶೇನಸಾಬ ಶೇಖ, ಬಸು ಝಂಡೆಕುರಬರ, ಆನಂದ ಟಪಾಲ ಹಾಗೂ ಅನೇಕ ಮುಖಂಡರು ಇದ್ದರು