ಉತ್ತರ ಕರ್ನಾಟಕದ ಜನರ ಕಲೆಯ ಪ್ರೋತ್ಸಾಹ ಅನನ್ಯವಾಗಿದೆ
ಮೂಡಲಗಿ: ‘ಕಲಾಭೀಮಾನಿಗಳ ಪ್ರೀತಿ, ಪ್ರೋತ್ಸಾಹ ಇರುವವರೆಗೆ ಕಲಾವಿದರು ಬೆಳೆಯುತ್ತಾರೆ. ಉತ್ತರ ಕರ್ನಾಟಕದ ಜನರು ಕಲೆಗೆ ಕೊಡುವ ಪ್ರೋತ್ಸಾಹವು ಅನನ್ಯವಾಗಿದೆ’ ಎಂದು ಧಾರಾವಾಹಿ ನಟಿ ಮೋಕ್ಷಿತಾಗ ಪೈ (ಪಾರು) ಹೇಳಿದರು.
ಅವರು ಮೂಡಲಗಿ ಪಟ್ಟಣದ ಶ್ರೀ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಶನಿವಾರ ರಾತ್ರಿ ಜರುಗಿದ ನಾಟ್ಯ ರಾಣಿ ಜ್ಯೋತಿ ಬಳ್ಳಾರಿಯವರ ಶ್ರೀ ದುರ್ಗಾಶಕ್ತಿ ನಾಟ್ಯ ಸಂಸ್ಥೆ ಕಲಾವಿದರ ಸಹಾಯಾರ್ಥವಾಗಿ ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೂಡಲಗಿ ಜನತೆ ಇಷ್ಟೊಂದು ಪ್ರೀತಿ ವಿಶ್ವಾಸ ತೋರಿಸದಕ್ಕೆ ನಾನು ಚೀರಋಣಿಯಾಗಿದ್ದೆನೆ ಎಂದ ಅವರು ಕೊರೋನಾ ಮಾಹಾರಿಯಿಂದ ಕಳೆದ ಒಂದು ವರ್ಷದಿಂದ ಕಲಾವಿದರ ಬಾಳು ಸಂಕಷ್ಟದಲ್ಲಿ ಸಿಲುಕಿತ್ತು. ಆದ್ದರಿಂದ ಯಲ್ಲಿಯೂ ಯಾವುದೇ ಕಾರ್ಯಕ್ರಮ ನಡೆಸಿಕೊಡಲಿಕ್ಕೆ ಆಗಲಿಲ್ಲ ಇದೀಗ ಮೂಡಲಗಿ ಪಟ್ಟಣದಲ್ಲಿ ಪ್ರಥಮವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಿದ್ದು ಇದು ನನ್ನ ಸೌಭಾಗ್ಯ ಎಂದರು
ಕಾರ್ಯಕ್ರಮದಲ್ಲಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಜ್ಯೋತಿ ಬಳ್ಳಾರಿಯವರು ಈ ಕಲಾವಿದರ ಗುಂಪು ಕಟ್ಟಿಕೊಂಡು ಕರ್ನಾಟಕದ ಜನತೆಗೆ ಮನರಂಜನೆ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ, ಮೂಡಲಗಿ ಪಟ್ಟಣದಲ್ಲಿ ಒಂದು ವರ್ಷದ ನಂತರ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಕಲಾಪೇಕ್ಷರು ವಿಕ್ಷಿಸುವ ಮೂಲಕ ಕಲಾವಿದರರಿಗೆ ಸಹಾಯ ಸಹಕಾರ ನೀಡಿ ಅವರನ್ನು ಪ್ರೋತ್ಸಾಹಿಸಬೇಕು ಎಂದರು.
ಕೌಲಜಗಿಯ ಮಾಜಿ ಜಿಪಂ ಸದಸ್ಯ ಪರಮೇಶ್ವರ ಹೊಸಮನಿ ಮಾತನಾಡಿ, ಗಂಡು ಮೆಟ್ಟಿನ ನಾಡಾದ ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಶಿಕ್ಷಣ, ಸಾಹಿತ್ಯ, ಸಂಗೀತ ಕ್ಷೇತ್ರದ ತವರೂರು ಇದ್ದಂತೆ ಇಲ್ಲಿಯ ಸಾಧಕರು ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿ ಪ್ರಖ್ಯಾತಿ ಪಡೆದಿದ್ದಾರೆ ಎಂದರು
ಸಮಾರಂಭದ ಅಧ್ಯಕ್ಷತೆಯನ್ನು ಸನಿತ್ ಸೋನವಾಲ್ಕರ ವಹಿಸಿದ್ದರು, ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಖಾ ಹಾದಿಮನಿ, ಮುಖ್ಯಾಧಿಕಾರಿ ದೀಪಕ್ ಹರ್ದಿ, ಪಿಎಸ್‍ಐ ಹಾಲಪ್ಪ ಬಾಲದಂಡಿ, ಸಾಹಿತಿ ಬಾಲಶೇಖರ ಬಂದಿ, ಹನಮಂತ ತೇರದಾಳ, ಕರುನಾಡು ಸೈನಿಕ ಕೇಂದ್ರದ ಅಧ್ಯಕ್ಷೆ ಸವಿತಾ ತುಕ್ಕನ್ನವರ, ಕಲಾವಿದೆ ಜ್ಯೋತಿ ಬಳ್ಳಾರಿ ಹಾಗೂ ಪುರಸಭೆ ಸದಸ್ಯರು ಮತ್ತು ಸ್ಥಳೀಯ ಹಾಗೂ ವಿವಿಧ ಗ್ರಾಮಗಳ ಮುಖಂಡರ ಇದ್ದರು.