ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ, ಮನವಿ
ಮೂಡಲಗಿ: ಪೆಟ್ರೋಲ್, ಡೀಸೈಲ್, ಅಡುಗೆ ಅನಿಲ, ರಸಗೊಬ್ಬರ, ಸಿಮೆಂಟ್ ಹಾಗೂ ಕಬ್ಬಿಣ ಮತ್ತು ದಿನಸಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚುತ್ತಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ಅರಭಾಂವಿ ಮತಕ್ಷೇತ್ರದ ಜೆಡಿಎಸ್ ಪಕ್ಷದಿಂದ ಮೂಡಲಗಿ ಪಟ್ಟಣ ಕಲ್ಮೇಶ್ವರ ವೃತ್ತದಲ್ಲಿ ಮಹಿಳೆಯರು ತಲೆ ಮೇಲೆ ಗ್ಯಾಸ್ ಸಿಲೆಂಡರ ಹೊತ್ತು ಪ್ರತಿಭಟಿಸಿ ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ ಅವರ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೆ.ಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ವಿಫಲಾಗಿದೆ, ಕೇಂದ್ರ ಸರಕಾರ ಗ್ಯಾಸ ನೀಡಿ ಕಟ್ಟಿಗೆ ಉಪಯೋಗಿಸುವ ವಲೆ ಕಿತ್ತುಹಾಕುವಂತೆ ಮಾಡಿ ಗ್ಯಾಸ ಸಿಲೆಂಡರ ಬೆಲೆಯನ್ನು ಏರಿಸುತ್ತಿದ್ದು ಬಡ ಜನರು ಬದುಕುವದಕ್ಕೆ ಆಗುತ್ತಿಲ್ಲ, ಶೀಘ್ರವಾಗಿ ಬೆಲೆ ಕಡಿಮೇ ಮಾಡದೇ ಹೋದರೆ ಬಿಜೆಪಿ ಸರಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಸಮಾಜ ಸೇವಾ ಕಾರ್ಯಕರ್ತ ಹಾಗೂ ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ಮಾತನಾಡಿ, ಜನಸಾಮಾನ್ಯರು ಬಳಸುವಂತ ವಸ್ತುಗಳ ಬೆಲೆ ಗಗನಕ್ಕೆ ಏರಿವೆ ಸರಕಾರ ಕಣ್ನು ಮುಚ್ಚಿ ಕುಳಿತಿರುವಾಗ ಇತ್ತ ಬಡ ಕುಟುಂಬಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ, ಸರಕಾರ ಬಡ ಜನರಿಗೆ ಉಚಿತಚಾಗಿ ಗ್ಯಾಸ್ ನೀಡಿದಂತೆ ಮಾಡಿ ಗ್ಯಾಸ ದರ ಏರಿಕೆ ಮಾಡುತ್ತಿರುವುದು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಕಾರಣ ಎಲ್ಲ ದರಗಳನ್ನು ಕಡೆಮೆ ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಕಾಕದ ಅಶೋಕ ಪೂಜಾರಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ಜನ ಸಮಾನ್ಯರ ಪರವಾಗಿ ನಿಂತು ಕೂಡಲೇ ದಿನನಿತ್ಯ ಬಳಕೆಯಾಗುವ ವಸ್ತುಗಳ ಬೆಲೆ ಕಡಿಮೆ ಮಾಡಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.
ಚನ್ನಪ್ಪ ಅಥಣಿ ಮಾತನಾಡಿ, ಪೆಟ್ರೋಲ್, ಡೀಸೈಲ್, ಅಡುಗೆ ಅನಿಲ, ರಸಗೊಬ್ಬರ, ಸಿಮೆಂಟ್ ಹಾಗೂ ಕಬ್ಬಿಣ ಮತ್ತು ದಿನಸಿ ವಸ್ತುಗಳು ಸೇರಿದಂತೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆಗಳು ಅದರಲ್ಲೂ ಪ್ರಮುಖವಾಗಿ ಕೃಷಿಕರಿಗೆ ಬೆಳೆ ಬೆಳೆಯಲು ಅವಶ್ಯವಿರುವ ರಸಗೊಬ್ಬರ ಲೆಕ್ಕವಿಲ್ಲದಷ್ಟು ಹೆಚ್ಚಾಗಿರುವುದರಿಂದ ಸಾಮಾನ್ಯ ಕುಟುಂಬಗಳು ತತ್ತರಿಸಿ ಹೋಗುತ್ತಿವೆ ಎಂದರು.
ಪ್ರತಿಭಟನೆಯಲ್ಲಿ, ಉಚಿತವಾಗಿ ಗ್ಯಾಸ್ ನೀಡಿಕೆಯಿಂದ ನಾವು ಮೊದಲು ಉಪಯೋಗ ಮಾಡುತ್ತಿದ್ದ ಕಟ್ಟಿಗೆ ವಲೆಯನ್ನು ಕಿತ್ತಕಾಕಿದ್ದರಿಂದ ಈಗ ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ತತ್ತರಿಸಿದ್ದೇವೆ ನಾವು ದುಡಿಯುವದು ಎರಡು ನೂರು ರೂಪಾಯಿ ಮಾತ್ರ ಈ ಹಣದಲ್ಲಿ ಗಾಣದ ಎಣ್ಣೆ ಮಾತ್ರ ಕೊಂಡಕೋಳ್ಳಬಹುದು. ಇನ್ನೂಳಿದ ವಸ್ತುಗಳನ್ನು ನಾವು ಖರೀದಿ ಮಾಡಬೇಕಾದರೆ ಎಲ್ಲಿಂದ ಹಣ ತರುವುದು ಎಂದ ಮಹಿಳೆಯರು ಹಿಗೇ ಬೆಲೆ ಏರಿಕೆ ಮುಂದುವರೆದರೆ ನಾವು ಜೀವನ ಸಾಗಿಸುವದಕ್ಕೆ ಕಷ್ಟವಾಗಿ ಆತ್ಮಹತ್ಯೆ ಮಾಡಿಕೊಳ್ಳು ಪರಿಸ್ಥಿ ಬಂದಹೊದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗುರು ಗಂಗಣ್ಣವರ, ಮಲ್ಲಪ್ಪ ಮದಗುಣಕಿ, ಶ್ರೀಕಾಂತ ಪರುಶೆಟ್ಟಿ, ಗಂಗಾಧರ ಮಠಪತಿ, ಚಿದಾನಂದ ಶೆಟ್ಟರ, ರಾಚಪ್ಪ ಅಂಗಡಿ, ಮಾರುತಿ ಸುಂಕದ, ಸಂಗಪ್ಪ ಕಳ್ಳಿಗುದ್ದಿ, ಐ.ಎಸ್.ಕೊಣ್ಣುರ ಮತ್ತಿತರು ಮಾತನಾಡಿ ಬೆಲೆ ಏರಿಕೆ ಖಂಡಿಸಿ ಸರಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹಿಳೆಯರು ತಲೆ ಮೇಲೆ ಗ್ಯಾಸ್ ಹೊತ್ತಕೊಂಡು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಆದಮ್ ತಾಂಬೋಳಿ, ಪರಪ್ಪ ಮುನ್ಯಾಳ, ಶಿವು ಸಣ್ಣಕ್ಕಿ, ಬಸವರಾಜ ಗುಲಗಾಜಂಬಗಿ, ಸೂರಜ ಸೋನವಾಲ್ಕರ, ಶಿವಲಿಂಗ ಹಾದಿಮನಿ, ಪಾರೀಸ್ ಉಪ್ಪಿನ, ದರೇಪ್ಪ ಖಾನಗೌಡರ, ಮಲ್ಲಿಕಾರ್ಜುನ ಅರಭಾವಿ, ಸುರೇಶ ಗೊಂದಿ ಮತ್ತು ಮಹಿಳೆಯರು ಹಾಗೂ ವಿವಿಧ ಗ್ರಾಮಗಳ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.