ಎಮ್.ಇ.ಎಸ್ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಮೂಡಲಗಿ: ಮಹಿಳಾ ದಿನಾಚರಣೆ ಕೇವಲ ಒಂದು ದಿವಸಕ್ಕೆ ಮಾತ್ರ ಸಿಮೀತವಾಗಿರಬಾರದು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ ಆದರೆ ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಇಂದಿಗೂ ಮಹಿಳಾ ದಿನಾಚರಣೆಯ ಅರಿವು-ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ಮೂಡಲಗಿ ಆರ್.ಡಿ.ಎಸ್ ಕಾಲೇಜಿನ ಉಪನ್ಯಾಸಕಿ ಗೀತಾ ಹಿರೇಮಠ ಹೇಳಿದರು.
ಅವರು ಸ್ಥಳೀಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಸ್ಥಾನದಿಂದ ಮಾತನಾಡಿ, ಸ್ತ್ರೀ ಎಂದರೆ ಅವಿನಾಶಿ ಎಂದ ಅವರು ಮಹಿಳೆಗೆ ಕೇವಲ ಆಸರೆ ಇದ್ದರೆ ಸಾಲದು ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು ಸಿಗುವಂತಾಗಬೇಕು ಅಂದಾಗ ಮಾತ್ರ ಸ್ತ್ರೀ ಸಬಲೀಕರಣವಾಗಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ: ಆರ್.ಎ.ಶಾಸ್ತ್ರೀಮಠ ಮಾತನಾಡಿ, ಪುರುಷ-ಸ್ರೀಯರು ಸಮಾಜದ ಎರಡು ಕಣ್ಣುಗಳು , ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಸ್ತ್ರೀಯರು ಸಮಾನ ಅವಕಾಶ ನೀಡಬೇಕೆಂದರು.
ಪ್ರೊ. ಎಸ್.ಜಿ.ನಾಯಿಕ ಅವರು ಮಹಿಳಾ ದಿನಾಚರಣೆ ಹಾಗೂ ಪರಂಪರೆ ಕೂಟದ ಮಹತ್ವ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳಾದ ಲಕ್ಷ್ಮೀ ಮಾಲಗಾರ, ಲತಾ ತಳವಾರ, ಅರ್ಪಿತಾ ಜೀನಕಟ್ಟಿ, ಆರತಿ ನೂಲಿ ಮತ್ತಿತರರು ಮಹಿಳಾ ದಿನಾಚರಣೆ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಪ್ರೊ.ಎಸ್.ಎ.ಶಾಸ್ತ್ರೀಮಠ, ಪ್ರೊ. ಜಿ.ಸಿದ್ರಾಮರಡ್ಡಿ, ಡಾ: ಬಿ.ಸಿ.ಪಾಟೀಲ, ಪ್ರೊ.ಎಸ್.ಸಿ.ಮಂಟೂರ, ಪ್ರೊ.ಜಿ.ವ್ಹಿ.ನಾಗರಾಜ, ಪ್ರೊ.ವಿ.ಆರ್.ದೇವರಡ್ಡಿ, ಪ್ರೊ.ಎ.ಎಸ್.ಮೀಸಿನಾಯಿಕ, ಭಾರತಿ ತಳವಾರಮತ್ತಿತರರು ಇದ್ದರು.
ಸ್ವಾತಿ ಅವಟೆ ಸ್ವಾಗತಿಸಿದರು. ಸುಜಾತಾ ತುಪ್ಪದ ರುಕ್ಮೀಣಿ ಯಡವನ್ನವರ ವಂದಿಸಿದರು, ಅಕ್ಷತಾ ಹೊಸಮನಿ ಮತ್ತು ಗಾಯತ್ರಿ ಪಾಟೀಲ ನಿರೂಪಿಸಿದರು.
