ಸದೃಢ ಭಾರತ ಕಟ್ಟುವಲ್ಲಿ ಮಹಿಳೆಯರ ಪಾತ್ರ ಪ್ರಮುಖ
ಮೂಡಲಗಿ: ನಮ್ಮ ನಾಡಿನ ಪ್ರತಿಯೊಬ್ಬ ಮಹಿಳೆಯರು ಸಾಕ್ಷರರಾಗುವದರ ಜೊತೆಗೆ ಸ್ವಾವಲಂಬಿಗಳಾಗಿ ಬದುಕಬೇಕು. ಕುಟುಂಬವನ್ನು ಬೆಳೆಸುವದರ ಜೊತೆಗೆ ಜಗತ್ತಿನ ತೂಗುವ ಶಕ್ತಿಯಾಗಿ, ಸಭಲೆಯಾಗಿ ಬೆಳೆಯಬೇಕೆಂದು ಮುಖ್ಯ ಶಿಕ್ಷಕ ಎ.ವ್ಹಿ ಗಿರೆಣ್ಣವರ ಹೇಳಿದರು.
ಅವರು ತುಕ್ಕಾನಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಇಂದು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿರುವುದು ಹಾಗೂ ಸದೃಢ ಭಾರತ ಕಟ್ಟುವಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷ ಕುಮಾರ ಮರ್ದಿ ಮಾತನಾಡಿ ನಮ್ಮ ಅಧಿಕಾರಾವಧಿಯಲಿ ್ಲಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುವದು. ಪ್ರತಿಯೊಬ್ಬ ಗ್ರಾಮಸ್ಥರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕಲ್ಲದೆ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಯಾರೂ ಇರಬಾರದು ಎಂದರು.
ಗ್ರ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಹಾದೇವಿ ಗದಾಡಿ ಮಾತನಾಡಿ ನಮ್ಮ ಗ್ರಾಮದ ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತವಾಗದೆ, ಗ್ರಾಮ ಪಂಚಾಯತ ಸದಸ್ಯರಾಗಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಕೂಡಾ ಸ್ತ್ರೀ ಕುಲದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗುರುಮಾತೆಯರಾದ ಕುಸುಮಾ ಚಿಗರಿ ಹಾಗೂ ವಿಮಲಾಕ್ಷಿ ತೋರಗಲ್ಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾ.ಪಂ. ಮಹಿಳಾ ಸದಸ್ಯರು ಈ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆ ಮಾಡುವಂತೆ ಶಾಸಕರ ನೇತೃತ್ವದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಪ್ರತೀಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಮಹಿಳಾ ಸದಸ್ಯರಾದ ಮಹಾದೇವಿ ಗದಾಡಿ, ಲಕ್ಕವ್ವ ನಾಗನ್ನವರ, ರತ್ನವ್ವ ನಾವಿ, ಅಕ್ಕವ್ವ ಅರಬಾಂವಿ, ಲಕ್ಕವ್ವ ಕೊಣ್ಣೂರ, ಗಾಯತ್ರಿ ಬಾಗೇವಾಡಿ, ಯಲ್ಲವ್ವ ಬಿಳಿಗೌಡ್ರ, ಶಿಕ್ಷಕಿಯಾದ ಕುಸುಮಾ ಚಿಗರಿ ವಿಮಲಾಕ್ಷಿ ತೋರಗಲ್ಲ, ಶೀಲಾ ಕುಲಕರ್ಣಿ ಲಕ್ಷ್ಮೀ ಕುಲಕರ್ಣಿ, ಪಷ್ಪಾ ಭರಮದೆ, ಸಂಗೀತಾ ತಳವಾರ, ಸೀಮಾ ನದಾಫ, ಅಡುಗೆ ಸಿಬ್ಬಂದಿಗಳಾದ ಸೇವಂತಿ ಅರಬಾಂವಿ, ಶಕುಂತಲಾ ಹುಲಕುಂದ, ಸುರೇಖಾ ಹೆಗೆದಾಳ, ಮಹಾದೇವಿ ಉಪ್ಪಾರ, ಸಾಂವಕ್ಕಾ ಹರಿಜನ ಭಾಗವಹಿಸಿದ್ದರು. ಶಿಕ್ಷಕರಾದ ಮಹಾದೇವ ಗೋಮಾಡಿ ಕಾರ್ಯಕ್ರಮ ನಿರೂಪಿಸಿದರು. ಕಿರಣ ಭಜಂತ್ರಿ ವಂದಿಸಿದರು.
ಫೋಟೋ ಕ್ಯಾಪ್ಸನ್> ಮೂಡಲಗಿ: ತುಕ್ಕಾನಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷ ಕುಮಾರ ಮರ್ದಿ ಉದ್ಘಾಟಿಸಿದರು.
ಫೋಟೊ ಫೈಲ್ ನಂ> 10ಎಮ್‍ಡಿಎಲ್‍ಜಿ6