Breaking News
Home / Recent Posts /  ಮಾ. 14ರಂದು ಲಯನ್ಸ್ ಕ್ಲಬ್ ರೀಜನ್ ಮೀಟ್ 

 ಮಾ. 14ರಂದು ಲಯನ್ಸ್ ಕ್ಲಬ್ ರೀಜನ್ ಮೀಟ್ 

Spread the love

 ಮಾ. 14ರಂದು ಲಯನ್ಸ್ ಕ್ಲಬ್ ರೀಜನ್ ಮೀಟ್ 

ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಆತಿಥ್ಯದಲ್ಲಿ ಲಯನ್ಸ್ ಕ್ಲಬ್‍ನ ಜಿಲ್ಲಾ 317-ಬಿ ಅಡಿಯ, ರೀಜನ್ 5ರ ವ್ಯಾಪ್ತಿಯಲ್ಲಿ ಬರುವ ಲಯನ್ಸ್ ಕ್ಲಬ್‍ಗಳ ‘ರೀಜನ್ ಮೀಟ್ 2020-21’ ಕಾರ್ಯಕ್ರಮವನ್ನು ಮಾ. 14ರಂದು ಸಂಜೆ 4ಕ್ಕೆ ಸ್ಥಳೀಯ ಸಾಯಿ ಹಾಸ್ಟೇಲ್ ಆವರಣದಲ್ಲಿ ಆಯೋಜಿಸಿರುವರು.
ಸಮಾವೇಶದ ನೇತೃತ್ವವನ್ನು ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ವಹಿಸಿದ್ದು, ಉದ್ಘಾಟನೆಯನ್ನು ಜಿಲ್ಲಾ ಎರಡನೇ ವೈಸ್ ಗವರ್ನರ್ ಗದಗದ ಸುಗ್ಗಲಾ ಯಲಮಾಳಿ ನೆರವೇರಿಸುವರು, ಮುಖ್ಯ ಅತಿಥಿಯಾಗಿ ನೇಜ್‍ದ ಚಿಂತಕ ವಿರೇಶ ಜಿ. ಪಾಟೀಲ ಭಾಗವಹಿಸುವರು. ಲಯನ್ಸ್ ಕ್ಲಬ್‍ಗಳ ವಿಭಾಗೀಯ ಅಧ್ಯಕ್ಷರಾದ ಜಮಖಂಡಿಯ ರಾಜೇಂದ್ರ ನಾಯಿಕ, ವಿಜಯಪುರದ ಸಿದ್ರಾಮಪ್ಪ ರಾಜಮಂಜಾ, ಬಾಗಲಕೋಟದ ವಿಕಾಸ ದೊಡ್ಡನ್ನವರ ಅತಿಥಿಯಾಗಿ ಭಾಗವಹಿಸುವರು.
ಸಮಾವೇಶದಲ್ಲಿ ಮೂಡಲಗಿ ಲಯನ್ಸ್ ಪರಿವಾರ ಸೇರಿದಂತೆ ಜಮಖಂಡಿ, ಮುಧೋಳ, ಮಹಾಲಿಂಗಪೂರ, ವಿಜಯಪುರ, ವಿಜಯಪುರ ಪರಿವಾರ, ಸಿಂದಗಿ, ಇಂಡಿ, ಬಾಗಲಕೋಟ, ಇಲಕಲ್, ಮುದ್ದೇಬಿಹಾಳ, ನರಗುಂದ ಕ್ಲಬ್‍ಗಳ ಸದಸ್ಯರು ಭಾಗವಹಿಸುವರು ಎಂದು ಸಮಾವೇಶದ ಸಂಘಟನಾ ಅಧ್ಯಕ್ಷ ಬಾಲಶೇಖರ ಬಂದಿ ಹಾಗೂ ಮೂಡಲಗಿ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About inmudalgi

Check Also

ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ

Spread the loveSpread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ