ಮೂಡಲಗಿ: ಮಧ್ಯಮ ವರ್ಗದವರ ಜೊತೆ ಒಡನಾಟ, ಸಮಾಜ ಚಿಂತಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವವರು ಸಮಾಜದಲ್ಲಿ ಬಹು ಬೇಗ ಗುರುತಿಸಲ್ಪಡುವರು ಎಂದು ತೇರದಾಳ ಮಾಜಿ ಪುರಸಭೆ ಸದಸ್ಯ ಪ್ರಭು ಗಸ್ತಿ ಹೇಳಿದರು.
ಗುರುವಾರದಂದು ಪುರಸಭೆ ಸದಸ್ಯ ಶಿವಪ್ಪ ಚಂಡಕಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಹಿತೈಷಿಗಳು ಹಾಗೂ ಜನಸೇವಾ ಗೆಳೆಯರ ಬಳಗ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಚಂಡಕಿಯವರು ಅನೇಕ ವರ್ಷಗಳಿಂದ ಜನಸೇವಾ ಬಳಗದ ಸಹಕಾರದಿಂದ ಅನೇಕ ಅಭಿವೃದ್ದಿ ಕಾರ್ಯ ಹಾಗೂ ಬಡ ಕುಟುಂಬಗಳಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯಗಳಿಂದಲೇ ಇವರು ಜನಪ್ರೀಯ ವ್ಯಕ್ತಿಯಾಗಿದ್ದಾರೆ ಎಂದರು.
ಕರ್ನಾಟಕ ಜನಸೇವಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಗದುಮ್ ಮಾತನಾಡಿ, ಯಾವುದೇ ಆಪೇಕ್ಷೆ ಇಲ್ಲದೆ ಸದಾ ತನ್ನ ಗೆಳೆಯರ ಬಳಗದ ಜೊತೆಗೂಡಿ ನಿರಂತರವಾಗಿ ಜನಸೇವೆ ಮಾಡುತ್ತ ಪುರಸಭೆ ಸದಸ್ಯರಾಗಿ ಎರಡೆ ವರ್ಷದಲ್ಲಿ 1.5ಕೋಟಿಗೂ ಅಧಿಕ ಮೊತ್ತದ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮತದಾರ ಪ್ರಭುಗಳ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಹಳ್ಳೂರ ಪಿಕೆಪಿಎಸ್ ಸದಸ್ಯ ಹನಮಂತ ತೇರದಾಳ ಮಾತನಾಡಿ, ತಮ್ಮಯ ರಾಜಕೀಯ ಜೀವನ ಆಕಾಶದೆತ್ತರಕ್ಕೆ ಬೆಳೆಯುವಂತಾಗಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ತೇರದಾಳ ಪಿ ಜಿ ಗ್ರುಪ್,ಹಣಮಂತಣ್ಣ ತೇರದಾಳ ಅಭಿಮಾನಿ ಬಳಗ,ಗಾರ್ಡನ್ ಅಭಿವೃದ್ದಿ ಸಂಸ್ಥೆ,ಯುವ ಜೀವನಸೇವಾ ಸಂಸ್ಥೆ,ಎಂ ವಾಯ್ ಎಫ್ ಕೂಟದ ಸದಸ್ಯರು ಹಾಗೂ ಮಾಧ್ಯಮ ಮಿತ್ರರು,ಗಣ್ಯರು ಹಿತೈಷಿಗಳು,ಅಭಿಮಾನಿಗಳು ಉಪಸ್ಥಿತರಿದ್ದರು.