Breaking News
Home / Recent Posts / ಕಲಾವಿದರಿಗೆ ಬೆಳಕಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

ಕಲಾವಿದರಿಗೆ ಬೆಳಕಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

ಕಲಾವಿದರಿಗೆ ಬೆಳಕಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಹಿಂದಿನ ಕಾಲದಲ್ಲಿ ಕವಿ, ಸಾಹಿತಿ, ಕಲಾವಿದರಿಗೆ ರಾಜರು ತಮ್ಮ ಆಸ್ಥಾನದಲ್ಲಿ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ರಾಜ ಮಹಾರಾಜರ ಕಾಲ ಹೊರಟ ಹೋದ ಮೇಲೆ ಕವಿ, ಕಲಾವಿದರಿಗೆ ಆಧುನಿಕ ಕಾಲದಲ್ಲಿ ಪ್ರೋತ್ಸಾಹ ಕಡಿಮೆ ಆಯಿತು. ಅಂತೂ ಕಷ್ಠದಲ್ಲಿ ಹೇಗೊ ಕಲಾ ಬದುಕು ಸಾಗುತ್ತಿತ್ತು, ಆದರೆ ಕಳೆದ ವರ್ಷ ವಕ್ಕರಿಸಿದ ಕರೋನಾ ರೋಗ ಕಲಾವಿದರನ್ನು ಅಕ್ಷರಶ: ಬೀದಿಪಾಲು ಮಾಡಿತು. ನಾಟಕ, ಸಂಗೀತ, ರಸ ಮಂಜರಿಗಳಿಗೆ ಅವಕಾಶ ಇಲ್ಲದೆ ಬೇರೆ ಉದ್ಯೋಗ ಮಾಡಲು ಅನುಭವ ಇಲ್ಲದೆ ವರ್ಷವಿಡಿ ಕಲಾವಿದರು ನಲುಗಿ ಹೋದರು. ಆದರೆ ಮತ್ತೆ ಹಾಡಿತು ಕೋಗಿಲೆ ಎಂಬಂತೆ ಈ ಹೊಸ ವರ್ಷದಲ್ಲಿ ಸಾವಕಾಶ ಕಲಾವಿದರ ಹೊಸ ಕಲಾಬದುಕನ್ನು ಆರಂಭಿಸುತ್ತಿದ್ದಾರೆ ಕಳೆದ ಎರಡು-ಮೂರು ದಶಕಗಳಿಂದ ತನ್ನ ನೃತ್ಯ ಕಲೆಯ ಸಾಧನೆಯಿಂದ ಮುಗಿಲಿನೆತ್ತರ ಸಾಧನೆ ಮಾಡಿ ನಾಟ್ಯ ಮಯೂರಿ, ನಾಟ್ಯ ರಾಣಿ ಎಂದು ಹೆಸರು ಪಡೆದ ಜ್ಯೋತಿ ಬಳ್ಳಾರಿಯವರು ಕೂಡ ಕರೋನಾ ಸಮಯದಲ್ಲಿ ತೀವ್ರ ಆಘಾತ ಅನುಭವಿಸಿದರು, ದಶಕಗಳಿಂದ ನೂರಾರು ಕಲಾವಿಧರಿಗೆ ಆಶ್ರಯ ನೀಡಿದ ಜ್ಯೋತಿ ಬಳ್ಳಾರಿಯವರ ದುರ್ಗಾಶಕ್ತಿ ಕಲಾತಂಡಕ್ಕೆ ಈ ವರ್ಷ 2021 ರಲ್ಲಿ ಮತ್ತೆ ಜೀವ ತುಂಬಿ ಪ್ರೋತ್ಸಾಹ ನೀಡಿ ಮತ್ತೆ ಈ ತಂಡ ವೈಭವದಿಂದ ಮೆರೆಯುವಂತೆ ಮಾಡಿದವರು ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು.
ಹೌದು, ಇದೇ ಮಾ 6 ಮತ್ತು 7 ರಂದು ಮೂಡಲಗಿ ನಗರದ ವೆಂಕಟೇಶ ಚಿತ್ರಮಂದಿರದಲ್ಲಿ ಜರುಗಿದ ಜ್ಯೋತಿ ಬಳ್ಳಾರಿಯವರ ಶ್ರೀ ದುರ್ಗಾಶಕ್ತಿ ನಾಟ್ಯ ಸಂಸ್ಥೆ ಪ್ರದರ್ಶನ ಮಾಡಿದ ಹಾಸ್ಯ ರಸಮಂಜರಿ ಕಾರ್ಯಕ್ರಮಕ್ಕೆ ಪ್ರಚಂಡ ಯಶಸ್ಸನ್ನು ತಂದು ಕೊಟ್ಟವರು ಬಾಲಚಂದ್ರ ಜಾರಕಿಹೊಳಿಯವರು ಮತ್ತು ಅವರ ಆದೇಶದ ಮೇಲೆ ಕಾರ್ಯಕ್ರಮವನ್ನು ಯಶಸ್ಸಿಗೆ ನಿಂತು ಈ ಕಲಾ ತಂಡ ನಮ್ಮದು ಎಂದು ಅಭಿಮಾನದಿಂದ ಶ್ರಮಿಸಿದವರು ಬಾಲಚಂದ್ರ ಜಾರಕಿಹೊಳಿಯವರ ಕಾರ್ಯಕರ್ತರು. ಮೂಡಲಗಿಯಲ್ಲಿ ಜರುಗಿದ ಈ ಅದ್ಧೂರಿಯ ಕಾರ್ಯಕ್ರಮಕ್ಕೆ ಜ್ಯೋತಿ ಬಳ್ಳಾರಿ ಅವರು ಹಾಗೂ ಅವರ ಮಗಳು ಪಲ್ಲವಿ ಬಳ್ಳಾರಿ ಹಾಗೂ ಜೀ ಕನ್ನಡ ವಾಹಿನಿಯ ಪಾರು ಧಾರವಾಹಿಯ ಪಾರು ಪಾತ್ರದ ಮೋಕ್ಷಿತಾ ಪೈ ಹಾಗೂ ಇನ್ನೂ ಹಲವಾರು ಕಲಾವಿದರು ಕಲಾಭಿಮಾನಿಗಳನ್ನು ರಂಜಿಸಿದರು. ಎಲ್ಲರ ಎದೆಯಲ್ಲಿ ಜ್ಯೋತಿ ಬಳ್ಳಾರಿ ಕಲಾ ತಂಡದ ಬಗ್ಗೆ ಒಂದು ಗೌರವ ಹಾಗೂ ಅಭಿಮಾನ ಉಳಿಯಿತು.
ಜನರ ಮನದಲ್ಲಿ ಈ ರೀತಿ ಈ ಕಲಾ ತಂಡದ ಮೇಲೆ ಪ್ರೀತಿ, ಅಭಿಮಾನ ಮೂಡಲು ಕಾರಣ ಬಾಲಚಂದ್ರ ಜಾರಕಿಹೊಳಿಯವರು. ಜ್ಯೋತಿ ಬಳ್ಳಾರಿಯವರ ಕಲಾ ತಂಡಕ್ಕೆ ಎಲ್ಲಾ ರೀತಿಯ ಸಹಾಯ-ಸಹಕಾರ ನೀಡಿ ಪ್ರೋತ್ಸಾಹ ನೀಡಿದ್ದೆ ಕಾರಣ ಎನ್ನಬಹುದು.
ಜಾರಕಿಹೊಳಿ ಸಹೋದರರು ಸಾಮಾಜಿಕ, ರಾಜಕೀಯ ಬದುಕಿನಲ್ಲಿ ಹೇಗೆ ತಮ್ಮ ಜನರ ನೀಲುವಿನಿಂದ, ಜನರ ಅಭಿಮಾನ ಪಡೆದಿದ್ದಾರೆ, ಅದೇ ರೀತಿ ಕಲಾವಿದರಿಗೂ ಕೂಡ ತಮ್ಮ ಪ್ರೋತ್ಸಾಹ ನೀಡಿ ಕಲಾವಿದರ ಬದುಕಿಗೆ ಜೀವ ತುಂಬಿದ್ದಾರೆ. ಇದೇ ರೀತಿ ರಾಜಕೀಯ ಕ್ಷೇತ್ರದಲ್ಲಿದ್ದರೂ ಕಲಾಭಿಮಾನ ಬೆಳೆಸಿಕೊಂಡು ಕಲಾವಿದರ ಬದುಕಿಗೆ ಬೆಳಕು ನೀಡುವ ಆದರ್ಶ ಗುಣ ಎಲ್ಲಾ ರಾಜಕೀಯ ನಾಯಕರಲ್ಲಿ ಬಂದರೆ ನಿಜಕ್ಕೂ ಕಲಾವಿದರ ಬದುಕು ಬಂಗಾರ ಆಗುತ್ತದೆ.


Spread the love

About inmudalgi

Check Also

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ಎಸ್.ಸಿ/ಎಸ್.ಟಿ ಹಾಗೂ ಅಲ್ಪ ಅಲ್ಪಸಂಖ್ಯಾತರ ಶಾಖಾ ಘಟಕ ಉದ್ಘಾಟನೆ

Spread the loveಮೂಡಲಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಸಮಜದಲ್ಲಿ ಹಿಂದುಳಿದ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ