ವಿಜೃಂಭಣೆಯಿಂದ ನೆರವೇರಿದ ಶ್ರೀ ಬಂಗಾರೇಶ್ವರ ರಥೋತ್ಸವ
ಬನವಾಸಿ: ಸಮೀಪದ ಗುಡ್ನಾಪೂರ ಗ್ರಾಮದಲ್ಲಿನ ಶ್ರೀ ಬಂಗಾರೇಶ್ವರ ಸ್ವಾಮಿಯ ರಥೋತ್ಸವ ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಶ್ರೀ ಕೆರಿಯಮ್ಮ ದೇವರಿಗೆ ಗಂಗಾರಾಧನೆ, ನಂದಿ ಧ್ವಜರೋಹಣ, ಶ್ರೀ ಬಂಗಾರೇಶ್ವರ ಪೂಜಾಕಲಶಸ್ಥಾಪನೆ, ರುದ್ರಹವನ ಬಿಲ್ವಪತ್ರಾಸಹಸ್ರನಾಮ ಪೂಜೆ, ನೈವೇದ್ಯ, ಮಹಾಮಂಗಳಾರತಿ, ರಥಗ್ರಹಣ, ಪ್ರಸಾದ ವಿತರಣೆ ನಡೆಯಿತು.
ಸಂಜೆ ಶ್ರೀ ಬಂಗಾರೇಶ್ವರ ದೇವರ ಪಲ್ಲಕಿಯನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಾತ್ರಿ 12.37ಕ್ಕೆ ತುಲಾ ಲಗ್ನದ ಶುಭಗಳಿಗೆಯಲ್ಲಿ ಉತ್ಸವ ಮೂರ್ತಿಯನ್ನು ಪುಷ್ಪಾಲಂಕಾರದಿಂದ ಸಿಂಗರಿಸಲಾಗಿದ್ದ ರಥದಲ್ಲಿ ಇಟ್ಟು ವಿವಿಧ ವಾದ್ಯ ಮೇಳದೊಂದಿಗೆ ಬಾನಂಗಳದಲ್ಲಿ ಸಿಡಿಮದ್ದಿ ಬಣ್ಣ ಬಣ್ಣದ ಚಿತ್ತಾgದಲ್ಲಿÀ ಅದ್ದೂರಿಯಾಗಿ ರಥೋತ್ಸವ ಜರುಗಿತು. ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತಾಧಿಗಳು ಆಗಮಿಸಿ ಹಣ್ಣುಕಾಯಿ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
ಮಾ. 16ರಂದು ಬೆಳ್ಳಿಗ್ಗೆ 8 ಘಂಟೆಗೆ ಅಷ್ಟೋತ್ತರ ಶತಾಧಿಕ ಸಾಮೂಹಿಕ ಸತ್ಯನಾರಾಯಣ ಮತ್ತು ಶನೇಶ್ವರ ರ್ವತಗಳು ಹಾಗೂ ಶ್ರೀ ಕಲ್ಲೇಶ್ವರಸದ್ಗುರು ಮುಕುಟ, ಪಾದುಕಾ ಪೂಜೆ, ಮಂಗಳಾರತಿ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹನ 1.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ ಶ್ರೀ ದೇವರಿಗೆ ಮಹಾಪೂಜೆ, ನೌಕರೋಹಣ, ಭಕ್ತರಿಂದ ಸಾರ್ವರ್ತಿಕ ಹಣ್ಣುಕಾಯಿ ಸಮರ್ಪಣೆಯ ನಂತರ ಶ್ರೀ ಬಂಗಾರೇಶ್ವರ ಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ.