Breaking News
Home / Recent Posts / ಶ್ರೀ ಶಿವಬೋಧರಂಗ ಚಿಕ್ಕ ಮಕ್ಕಳ ಆಸ್ಪತ್ರೆಯ ಉದ್ಘಾಟಣೆ ಸಮಾರಂಭ

ಶ್ರೀ ಶಿವಬೋಧರಂಗ ಚಿಕ್ಕ ಮಕ್ಕಳ ಆಸ್ಪತ್ರೆಯ ಉದ್ಘಾಟಣೆ ಸಮಾರಂಭ

Spread the love

ಮೂಡಲಗಿ: ನಗರದಲ್ಲಿ ಮಾ. 15 ಸೋಮವಾರದಂದು ಮುಂಜಾನೆ 10-30 ಕ್ಕೆ ಬಿಎಸ್.ಎನ್.ಎಲ್ ಆಫೀಸ್ ಹತ್ತಿರ, ಕುರಣಗಿ ಬಿಲ್ಡಿಂಗ್‍ನಲ್ಲಿ ಶ್ರೀ ಶಿವಬೋಧರಂಗ ಚಿಕ್ಕ ಮಕ್ಕಳ ಆಸ್ಪತ್ರೆಯ ಉದ್ಘಾಟಣೆ ಸಮಾರಂಭ ಜರುಗುವದಾಗಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ. ಮನೋಹರ. ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾರಂಭದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಸಿದ್ಧ ಸಂಸ್ಥಾನ ಮಠದ ಪೀಠಾಧಿಪಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಗಳು ವಹಿಸುವರು. ಸಾನಿಧ್ಯವನ್ನು ಭಾಗೋಜಿಕೊಪ್ಪ, ಮುನ್ಯಾಳ, ರಂಗಾಪೂರದ ಶಿವಯೋಗಿಶ್ವರ ಹಿರೇಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಉದ್ಘಾಟಕರಾಗಿ ಅರಭಾಂವಿ ಶಾಸಕರು, ಕೆ.ಎಮ್.ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರು ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ,ಮುಖ್ಯ ಅತಿಥಿಗಳಾಗಿ ನಿವೃತ್ತ ತಾಲೂಕಾ ವೈದ್ಯಾಧಿಕಾರಿ ಡಾ. ಆರ್ ಎಸ್ ಬೆಣಚಿಣಮರಡಿ, ತಾಲೂಕಾ ವೈದ್ಯಾಧಿಕಾರಿ ಡಾ. ಎಮ್ ಎಸ್ ಕೊಪ್ಪದ, ಅತಿಥಿಗಳಾಗಿ ಶಸ್ತ್ರಚಿಕಿತ್ಸಾ ತಜ್ಞ ಡಾ. ಎಮ್.ಎಮ್ ಮೇದಾರ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ತಹಶೀಲ್ದಾರ ಡಿ.ಜೆ ಮಹಾತ, ಸಿಪಿಐ ವೆಂಕಟೇಶ ಮುರನಾಳ, ಬಿಇಒ ಅಜಿತ ಮನ್ನಿಕೇರಿ ಭಾಗವಹಿಸುವರು.


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ