ಮೂಡಲಗಿ: ಮಗುವಿನಲ್ಲಿರುವ ಕ್ಲಿಷ್ಠಾಂಶಗಳನ್ನು ಸರಳಿಕರಿಸಿ, ನೂರಿತ ಹಾಗೂ ಸಂಪನ್ಮೂಲ ಶಿಕ್ಷಕರುಗಳಿಂದ ಪರೀಕ್ಷೆಗಳನ್ನು ಎದುರಿಸಲು ವಿನೂತವಾಗಿ ರಾಜ್ಯದಲ್ಲಿ ಪ್ರಥಮ ಬಾರಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಫೋನ್ ಇನ್ ಸಂವಾದ ಕಾರ್ಯಕ್ರಮವನ್ನು ತಾಲೂಕಾ ಹಂತಗಳಲ್ಲಿ ಜಾರಿಗೆ ತರಲಾಗಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ಅವರು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ ಶೈಕ್ಷಣಿಕವಾಗಿ ಮಿಂಚಲು ಮೂಡಲಗಿ ವಲಯದ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಶೈಕ್ಷಣಿಕ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದೇವೆ. ಗುಂಪು ಅಧ್ಯಯನ, ಮನೆ ಮನೆ ಭೇಟಿ, ಫೋನ್ ಮೂಲಕ ಪಾಲಕರ ಹಾಗೂ ವಿದ್ಯಾರ್ಥಿಗಳ ಜೊತೆ ನಿರಂತರ ಸಂಪರ್ಕ, ವಾಟ್ಸಫ್ ಗುಂಪುಗಳ ರಚನೆ, ದೃಶ್ಯ ಹಾಗೂ ಸಮೂಹ ಮಾದ್ಯಮ ಮೂಲಕ ವಿಷಯಗಳ ಹಂಚಿಕೆ ಹಾಗೂ ಗೃಹ ಪಾಠಗಳನ್ನು ನೀಡುವದು ಹಾಗೂ ಪುನರ ಪರಿಶೀಲನೆ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತಲ್ಲಿನರಾಗುವಂತೆ ಮಾಡಲಾಗಿದೆ ಎಂದರು.
ಫೋನ್ ಇನ್ ಸಂವಾದ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಸಂಶಯಗಳನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ. ಇಂದು ಜರುಗಿದ ಫೋನ್ ಕಾರ್ಯಕ್ರಮದಲ್ಲಿ ಪ್ರತಿ ವಿಷಯದಿಂದ 3 ಜನ ಸಂಪನ್ಮೂಲ ಶಿಕ್ಷಕರಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೈಕ್ಷಣಿಕ ಚಿಕ್ಕೋಡಿ ಅಷ್ಠೇ ಅಲ್ಲದೆ ಬೇರೆ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ತಮ್ಮ ಸಂಶಯಗಳನ್ನು ಹೋಗಲಾಡಿಸಿಕೊಂಡರು. ಇನ್ನು ಮುಂದೆ ವಿದ್ಯಾರ್ಥಿಗಳು ತಮಗಿರುವ ಕ್ಲೀಷ್ಠಾಂಶಗಳನ್ನು ಸಂಬಂಧಿಸಿದ ವಿಷಯ ಸಂಪನ್ಮೂಲ ಶಿಕ್ಷಕರಿಂದ ಪರಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ ಎಂದು ಹೇಳಿದರು.
ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಮೂಡಲಗಿ ವಲಯದಲ್ಲಿ ಸಾಕಷ್ಟು ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಪರೀಕ್ಷಾ ಭಯ ಹಾಗೂ ತಮಗಿರುವ ಸಂಶಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮುಕ್ತವಾಗಿ ಸಂಪನ್ಮೂಲ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು ಎಂದು ಹೇಳಿದರು.
ಶೈಕ್ಷಣಿಕ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ನೋಡಲ್ ಅಧಿಕಾರಿ ಅರಿಹಂತ ಬಿರಾದಾರ ಪಾಟೀಲ ಮಾತನಾಡಿ, ಬ್ಲೂಪ್ರಿಂಟ್, ಮಾದರಿ ಪ್ರಶ್ನೆ ಪತ್ರಿಕೆ, ರದ್ದು ಪಡಿಸಿದ ಅಧ್ಯಾಯ, ಬಹು ಆಯ್ಕೆ ಪ್ರಶ್ನೆಗಳು, ಅನ್ವಯಿಕ ಪ್ರಶ್ನೆಗಳು, ಹೆಚ್ಚು ಅಂಕ ಗಳಿಸುವ ಬಗೆ,ಸಮಯ ನಿರ್ವಹಣೆ, ಪರೀಕ್ಷೆಯ ಖಚಿತತೆ, ನೂರರಷ್ಟು ಅಂಕ, ಪಾಸಿಂಗ್ ಪ್ಯಾಕೇಜ್, ಪರೀಕ್ಷೆ ಗೊಂದಲಗಳ ಕುರಿತು ವಿದ್ಯಾರ್ಥಿಗಳು ಫೋನ್ ಇನ್ ಸಂವಾದ ಕಾರ್ಯಕ್ರಮದಲ್ಲಿ ಪರಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಇಸಿಒ ಸತೀಶ ಬಿ.ಎಸ್, ಸಂಪನ್ಮೂಲ ಶಿಕ್ಷಕರಾದ ಎಮ್.ಟಿ ದಡ್ಡಿಮನಿ, ಮತ್ತುರಾಜ ಬಂಬಲವಾಡ, ಯು.ಬಿ ದಳವಾಯಿ, ಎಸ್.ಆರ್ ಬೆಳಗಲಿ, ಮೋಹನ ತುಪ್ಪದ, ಎನ್.ಡಿ ನಿಡೋಣಿ, ಬಿ.ಡಿ ವಗ್ಗನವರ, ಎಸ್.ಸಿ ಅರಗಿ, ಎಸ್.ಪಿ ಕಬ್ಬೂರಮಠ, ವೈ.ಎನ್ ಲಕ್ಕಿಕೊಪ್ಪ, ಸಿದ್ದು ವಾಲಿಮರದ, ಎ.ಕೆ ತರಾಳೆ, ಎಸ್.ಎಸ್ ಬಳ್ಳೂರಗಿ ಎಲ್.ಕೆ ಹೊಸಮನಿ, ಎಮ್. ಆರ್ ಕುಂಬಾರ, ಅಡವಯ್ಯ ಅಡವಿಸ್ವಾಮಿಮಠ, ಎಸ್.ಪಿ ಕಬ್ಬುರಮಠ ಮತ್ತಿತರರು ಹಾಜರಿದ್ದರು.
