ಮೂಡಲಗಿ: ಬೆಂಗಳೂರು ಮೆಟ್ರೋ ರೈಲು ಯೋಜನೆ 2ಎ ಹಂತವನ್ನು ಕೇಂದ್ರ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಕೆ.ಆರ್. ಪುರಂ ಮತ್ತು ಹಂತ 2ಬಿ. ಕೆ.ಆರ್. ಪುರಂನಿಂದ ವಿಮಾನ ನಿಲ್ದಾಣ ಮಾರ್ಗವಾಗಿ ಹೆಬ್ಬಾಳ ಜಂಕ್ಷನ್ ಮೂಲಕ ಒಟ್ಟು 58 ಕಿ.ಮೀ. ಯೋಜನೆಯ ಪೂರ್ಣಗೊಳಿಸುವಿಕೆ ವೆಚ್ಚ 14,788 ಕೋಟಿ ರೂ.ಗಳ ಕಾಮಗಾರಿಗೆ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರೆತಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಲಹಾ ಮಂಡಳಿ ಸದಸ್ಯ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.
ಮಂಗಳವಾರ (ಏ.20) ರಂದು ಪತ್ರಿಕಾ ನೀಡಿ ಮಾತನಾಡಿದ ಈರಣ್ಣ ಕಡಾಡಿ ಅವರು ಈ ಯೋಜನೆಯ ಅನುದಾನವು ಬೆಂಗಳೂರಿಗೆ ಅಗತ್ಯವಿರುವ ಹೆಚ್ಚುವರಿ ಸಾರ್ವಜನಿಕ ಸಾರಿಗೆ ಮೂಲಸೌಕರ್ಯವನ್ನು ಒದಗಿಸುತ್ತದೆ. ಸಂಚಾರ ದಟ್ಟಣೆ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಮಾಲಿನ್ಯವನ್ನು ನಿಭಾಯಿಸಲು, ಪ್ರಯಾಣ ವೆಚ್ಚವನ್ನು ಕಡಿಮೆ ಮಾಡಲು, ಮಹಿಳೆಯರಿಗೆ ಸುರಕ್ಷಿತ ಸಾರಿಗೆಯನ್ನು ಒದಗಿಸುತ್ತದೆ. ಮೆಟ್ರೊ ಯೋಜನೆಯು ನಗರ ಸಾರಿಗೆಯ ಸಾಂಪ್ರದಾಯಿಕ ವ್ಯವಸ್ಥೆಯ ಮೇಲೆ ಒಂದು ನಾವೀನ್ಯತೆಯಾಗಿದೆ ಎಂದರು.
ಯೂರಿಯಾ: ಯೂರಿಯಾ ಗೊಬ್ಬರ ಬೆಲೆ ಹೆಚ್ಚಳದಿಂದ ರೈತರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಈ ಸಂದರ್ಭದಲ್ಲಿ ಯೂರಿಯಾಕ್ಕೆ ಸ್ವಾವಲಂಬನೆ ಸಾಧಿಸುವ ದೃಷ್ಠಿಯಿಂದ ದೇಶದ ನೆಚ್ಚಿನ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಟಾಲ್ಚರ್ ಫರ್ಟಿಲೈಜರ್ ಲಿಮಿಟೆಡ್ ಕಲ್ಲಿದ್ದಲು ಅನಿಲೀಕರಣದ ಮಾರ್ಗದ ಮೂಲಕ ಉತ್ಪಾದಿಸುವ ಯೂರಿಯಾಕ್ಕೆ ವಿಶೇಷ ಸಬ್ಸಿಡಿ ನೀತಿಗೆ ಕ್ಯಾಬಿನೆಟ್ ಅನುಮೋದನೆ ನೀಡಿ ರೈತಾಪಿ ವರ್ಗದಲ್ಲಿ ಹರ್ಷ ತಂದಿದೆ ಎಂದರು.
