ಬೆಳಗಾವಿ ಜಿಲ್ಲೆಗೆ 25 ಮೆ. ಟನ್ ವಿದೇಶದ ಆಕ್ಸಿಜನ್ -ಸಂಸದ ಈರಣ್ಣ ಕಡಾಡಿ ಸ್ವಾಗತ
ಮೂಡಲಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ ಆಕ್ಸಿಜನ ಕೊರತೆಯನ್ನು ನೀಗಿಸಲು ರಾಜ್ಯಕ್ಕೆ 75 ಮೆ.ಟನ್ ಸಾಮಥ್ರ್ಯದ ವಿದೇಶದ ಆಕ್ಸಿಜನ್ ಟ್ಯಾಂಕರಗಳು ಬರುತ್ತಿದ್ದು, ಅದರಲ್ಲಿ ಬೆಳಗಾವಿಗೆ ಜಿಲ್ಲೆ 25 ಮೆ.ಟನ್ ಆಕ್ಸಿಜನ್ ದೊರೆತ್ತಿರುವುದು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತೇವೆ. ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಶನಿವಾರ ಮೇ 15 ರಂದು ಪತ್ರಿಕಾ ಹೇಳಿಕೆ ನೀಡಿರುವ ಮುಂಬೈಯಿಂದ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ಬರಲಿದೆ. ಧಾರವಾಡ ಆಸ್ಪತ್ರೆಗಳಿಗೆ 25 ಮೆ.ಟನ್, ಹಾವೇರಿ ಗದಗ ಆಸ್ಪತ್ರೆಗಳಿಗೆ 25 ಮೆ.ಟನ್, ಆಕ್ಸಿಜನ್ ಉಪಯೋಗಿಸಬಹುದಾಗಿದೆ. ಸಕಾಲಕ್ಕೆ ನೆರವಿಗಾಗಿ ಶೀಘ್ರವಾಗಿ ಸ್ಪಂಧಿಸಿದ ವಿದೇಶದಿಂದ ವ್ಯವಸ್ಥೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ, ಸಚಿವ ಪಿಯೂಷ ಗೊಯಲ್, ಈ ಭಾಗದ ಜನರ ನೋವಿಗೆ ಸ್ಪಂದಿಸುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ನಾವೆಲ್ಲರೂ ಅಭಿನಂದಿಸಬೇಕಾಗುತ್ತದೆ ಎಂದರು.