ಮೂಡಲಗಿ : ಲಾಕ್‍ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕೊಳಗಾಗಿರುವ ರೈತರು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ರೂ 1250 ಕೋಟಿ ಮೊತ್ತದ ಪರಿಹಾರ ಘೋಷಣೆ ಮಾಡಿರುವ ರಾಜ್ಯ ಸರ್ಕಾರದ ಕಾರ್ಯವನ್ನು ಸ್ವಾಗತಿಸಿದ ಕಾಂಗ್ರೇಸ್ ಮುಖಂಡ ಲಖಣ್ಣ ಸವಸುದ್ದಿ ಹೇಳಿದರು.
ಗುರುವಾರದಂದು ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲೌಕ್‍ಡೌನ ಹಿನ್ನೆಲೆಯಲ್ಲಿ ಪರಿಹಾರ ಘೋಷಣೆ ಮಾಡಿದ್ದರು, ಆದರೆ ಘೋಷಣೆ ಮಾಡಿರುವ ಪರಿಹಾರ ಜನರಿಗೆ ಸರ್ಮಪಕವಾಗಿ ದೂರಕಿಲ್ಲ. ಈಗ ಸಿಎಂ ಅವರು ಮಾಡಿರುವ ಪ್ಯಾಕೇಜ್ ಘೋಷಣೆಯು ಒಂದು ವಾರದೊಳಗೆ ಜನರಿಗೆ ಮುಟ್ಟುವಂತ ಕಾರ್ಯವಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುದ್ರಣ ಮಾಧ್ಯಮ ಹಾಗೂ ದೃಶ್ಯಮಾಧ್ಯಮದ ಪತ್ರಕರ್ತರು ಕೊರೋನಾ ಲೆಕ್ಕಿಸದೆ ಜನರಿಗೆ ನಾಡಿನ ಮೂಲೆಮೂಲೆಗಳಲ್ಲಿನ ಸುದ್ದಿಗಳನ್ನು ಹುಡುಕಿ ತಂದು ಜನರು ಜಾಗೃತರಾಗಿ ಇರಲು ಶ್ರಮ ಪಡುತ್ತಿರುವ ಪತ್ರಕರ್ತರಿಗೆ ಫ್ರೆಂಟ್ ಲೈನ್ ಕೊರೋನಾ ವಾರಿಯರ್ಸ್ ಎಂದು ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರ ನೀಡಿರುವ ಪ್ಯಾಕೇಜ್‍ನಲ್ಲಿ ಪತ್ರಕರ್ತರಿಗೆ ಯಾವುದೇ ಪ್ಯಾಕೇಜ್ ನೀಡದೆ ಘೋಷಣೆ ಮಾಡಿದ್ದು ಸರಿ ಅಲ್ಲ. ಆದಷ್ಟು ಬೇಗಾ ಪತ್ರಕರ್ತರಿಗೆ ಪ್ಯಾಕೇಜ್ ಘೋಷಣೆ ಮಾಡಲು ಸರ್ಕಾರಕ್ಕೆ ಆಗ್ರಹಿಸಿದರು.
ತಾಲೂಕಿನಲ್ಲಿ ಇರುವ ಖಾಸಗಿ ಆಸ್ಪತ್ರೆಯ ವೈದ್ಯರು ತಮ್ಮ ಆಸ್ಪತ್ರೆಗಳಿಗೆ ಸೋಂಕಿತರು ಚಿಕಿತ್ಸೆ ಪಡೆಯಲು ಬರುವುದರಿಂದ ಪ್ರತಿ ದಿನ ಮೂರು ಸಲ ಸ್ಯಾನಿಟೈಸರ್ ಮಾಡಿಸಬೇಕು ಇದಕ್ಕೆ ತಾಲೂಕಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಾಲೂಕಾಡಳಿತಕ್ಕೆ ಮನವಿ ಮಾಡಿಕೊಂಡರು. ಸಾರ್ವಜನಿಕರು ಕೊರೋನಾಕ್ಕೆ ಭಯಭೀತರಾಗದೆ ಧೈರ್ಯದಿಂದ ಕೊರೋನಾ ವಿರುದ್ದ ಹೋರಾಟಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ ಯುವ ಮುಖಂಡ ಗುರುನಾಥ ಗಂಗನ್ನವರ ಇದ್ದರು.
