Breaking News
Home / Recent Posts / ರಾಜಕೀಯ ನಿಲ್ಲಿಸಿ ಕರೋನಾ ಹಿಮ್ಮೆಟ್ಟಿಸಲು ಕೈ ಜೋಡಿಸಿ- ಸಂಸದ ಈರಣ್ಣ ಕಡಾಡಿ

ರಾಜಕೀಯ ನಿಲ್ಲಿಸಿ ಕರೋನಾ ಹಿಮ್ಮೆಟ್ಟಿಸಲು ಕೈ ಜೋಡಿಸಿ- ಸಂಸದ ಈರಣ್ಣ ಕಡಾಡಿ

Spread the love

ರಾಜಕೀಯ ನಿಲ್ಲಿಸಿ ಕರೋನಾ ಹಿಮ್ಮೆಟ್ಟಿಸಲು ಕೈ ಜೋಡಿಸಿ- ಸಂಸದ ಈರಣ್ಣ ಕಡಾಡಿ

ಮೂಡಲಗಿ: ಜಿಲ್ಲೆಯ ಕೆಲವು ಕಾಂಗ್ರೇಸ್ ಶಾಸಕರು ಕೋವಿಡ್ ನಿಯಂತ್ರಣದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ ಜನರ ಸಹಾಯಕ್ಕೆ ಬರುವ ಕಾಲದಲ್ಲಿ ಕೇವಲ ಟೀಕೆ ಟಿಪ್ಪಣಿ ಮಾಡುವುದರ ಮೂಲಕ ಅನಗತ್ಯ ಗೊಂದಲ ಸೃಷ್ಠಿಸುತ್ತಿರುವುದು ತುಂಬಾ ಕಳವಳಕಾರಿ ಸಂಗತಿಯಾಗಿದೆ. ಜಿಲ್ಲೆಯ ಜನತೆ ಗಾಳಿ ಸುದ್ದಿಗಳಿಗೆ ಕಿವಿಗೊಡದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಹಲವಾರು ಕಾರ್ಯಗಳನ್ನು ಗಮನಿಸಬೇಕಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜನತೆಯಲ್ಲಿ ವಿನಂತಿಸಿದ್ದಾರೆ.
ಶುಕ್ರವಾರ ಮೇ 21 ರಂದು ಪತ್ರಿಕಾ ಹೇಳಿಕೆ ನೀಡಿರುವ ಈರಣ್ಣ ಕಡಾಡಿ ಅವರು ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ಕರೋನಾ ಮಹಾಮಾರಿಯ ಅಲೆ ಅಪ್ಪಳಿಸಿದ್ದರೂ ಕೂಡಾ ಧೃತಿಗೆಡದೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜನರ ರಕ್ಷಣೆಗೆ ಧಾವಿಸಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಬೆಳಗಾವಿ ಜಿಲ್ಲಾಡಳಿತ ಕೂಡಾ ಕರೋನಾ ಪೀಡಿತರ ಸಹಾಯಕ್ಕಾಗಿ ಪಟ್ಟು ಹಿಡಿದು ಅಹೋರಾತ್ರಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕೇವಲ 9 ತಿಂಗಳ ಅಲ್ಪಾವಧಿಯಲ್ಲಿ ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ಎರಡು ಲಸಿಕೆಗಳನ್ನು ಅಭಿವೃದ್ಧಿ ಪಡಿಸಿ, ಪರೀಕ್ಷಿಸಿ, ಉತ್ಪಾಧಿಸಿ, ವಿತರಿಸಲು ಪ್ರಾರಂಭಿಸಲಾಗಿದೆ. ಇದುವÀರೆಗೆ ದೇಶದಲ್ಲಿ ಒಟ್ಟು 18.70 ಕೋಟಿ, ರಾಜ್ಯದಲ್ಲಿ ಒಟ್ಟು 1.15 ಕೋಟಿ, ಜಿಲ್ಲೆಯಲ್ಲಿ 6.90 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಎಂದರು.
2020ರಲ್ಲಿ ಆಮ್ಲಜನಕದ ಉತ್ಪಾಧನೆ ದಿನಕ್ಕೆ 5700 ಟನ್ ಮಾತ್ರ ಇತ್ತು, ಈಗ ಉತ್ಪಾಧನೆಯನ್ನು ದಿನಕ್ಕೆ 9446 ಟನ್‍ಗಳಿಗೆ ಹೆಚ್ಚಿಸಲಾಗಿದೆ. ಭವಿಷ್ಯದ ಅಗತ್ಯತೆಯನ್ನು ಗಮನಿಸಿ ದೇಶದಾದ್ಯಂತ 551 ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಎಂ ಕೇರ್ಸ್ ಫಂಡನಿಂದ ಆಮ್ಲಜನಕ ಉತ್ಪಾಧನಾ ಘಟಕಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲಾ ಮತ್ತು ತಾಲೂಕಾ ಕೇಂದ್ರಗಳ 28 ಆಸ್ಪತ್ರೆಗಳಲ್ಲಿ ಪ್ರತಿ ನಿಮಿಷಕ್ಕೆ 1000 ಸಾವಿರ ಲೀಟರ್ ಆಮ್ಲಜನಕ ಉತ್ಪಾಧಿಸುವ ಘಟಕಗಳು ಕಾರ್ಯಾರಂಭಗೊಳ್ಳಲಿವೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಚಿಕ್ಕೋಡಿ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿವೆ ಎಂದು ಕಡಾಡಿ ಅವರು ತಿಳಿಸಿದರು.
ಪಿಎಂ ಗರೀಬ್ ಕಲ್ಯಾಣ ಅನ್ನಯೋಜನೆಯಡಿ 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶದ 80 ಕೋಟಿ ಫಲಾನುಭವಿಗಳಿಗೆ ಎರಡು ತಿಂಗಳಿಗೆ 5 ಕೆ.ಜಿ ಪಡಿತರವನ್ನು ಉಚಿತವಾಗಿ ಪೂರೈಸಲಾಗುತ್ತಿದೆ.
ರಾಜ್ಯ ಸರ್ಕಾರ ಕೂಡಾ ಕರೋನಾ 2ನೇ ಅಲೆಯ ಸಂಕಷ್ಟಕ್ಕೆÉೂಳಗಾಗಿರುವ ಕೃಷಿಕರು, ಕಟ್ಟಡ ಕಾರ್ಮಿಕರು, ಆಟೋ ಟ್ಯಾಕ್ಸಿ ಮ್ಯಾಕ್ಸಿಕ್ಯಾಬ್ ಚಾಲಕರು, ಟೈಲರ್‍ಗಳು, ಕ್ಷೌರಿಕರು, ಕಲಾವಿದರು, ಬೀದಿ ಬದಿಯ ವ್ಯಾಪಾರಿಗಳು ಸೇರಿದಂತೆ ಶ್ರಮ ಸಂಸ್ಕøತಿ ಹೊಂದಿದ ಜನ ಸಾಮಾನ್ಯರಿಗೆ ರೂ. 1250 ಕೋಟಿಗೂ ಹೆಚ್ಚಿನ ಮೌಲ್ಯದ ಆರ್ಥಿಕ ಪರಿಹಾರ ಘೋಷಿಸಲಾಗಿದೆ.
ಕೋವಿಡ್ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಪಂಚಾಯತ ರಾಜ್ಯ ಸಂಸ್ಥೆಗಳಿಗೆ ರೂ. 475.4 ಕೋಟಿ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಎಸ್.ಡಿ.ಆರ್.ಎಫ್. ನಿಧಿಯಿಂದ ರಾಜ್ಯದ 6000 ಗ್ರಾಮ ಪಂಚಾಯತಗಳಿಗೆ ಪ್ರತಿ ಪಂಚಾಯತಗೆ 50 ಸಾವಿರ ರೂ.ನಂತೆ ಮುಂಗಡಕ್ಕೆ ಕ್ರಮ ವಹಿಸಲಾಗಿದೆ ಎಂದರು.
ಜೀವ ಇದ್ದರೇ ಜೀವನ ಎಂಬ ಪ್ರಧಾನಿಯವರ ಕಳಕಳಿಯನ್ನು ಅರ್ಥಮಾಡಿಕೊಳ್ಳಲಾರದೇ ಅಹೋ ರಾತ್ರಿ ಶ್ರಮಿಸುತ್ತಿರುವ ಮುಖ್ಯಮಂತ್ರಿಗಳ ಕಾರ್ಯ ವ್ಯರ್ಥ ಟೀಕೆ ಮಾಡುವುದನ್ನು ನಿಲ್ಲಿಸಿ, ಸಂಘಟಿತ ಪ್ರಯತ್ನದ ಮೂಲಕ ನಾವೆಲ್ಲರೂ ಕರೋನಾವನ್ನು ಹಿಮ್ಮೆಟ್ಟಿಸಬೇಕಾಗಿದೆ. ರಾಜಕೀಯ ಕೆಸರು ಏರಚಾಟವನ್ನು ನಿಲ್ಲಿಸಿ ಕರೋನಾ ಪೀಡಿತ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದ್ದಾರೆ.


Spread the love

About inmudalgi

Check Also

ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ

Spread the loveSpread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ