Breaking News
Home / Recent Posts / ಬೆಳಗಾವಿ ನಗರದ ತರಕಾರಿ ಮಾರುಕಟ್ಟೆಗಳಿಗೆ ಭೇಟಿ ಮಾಡಿದ ಈರಣ್ಣ ಕಡಾಡಿ

ಬೆಳಗಾವಿ ನಗರದ ತರಕಾರಿ ಮಾರುಕಟ್ಟೆಗಳಿಗೆ ಭೇಟಿ ಮಾಡಿದ ಈರಣ್ಣ ಕಡಾಡಿ

Spread the love

ಬೆಳಗಾವಿ: ಕೋವಿಡ್ 19 ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ಕಾರಣದಿಂದ ಎ.ಪಿ.ಎಂ.ಸಿ ಮಾರ್ಕೆಡ್‍ನಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಬೆಳಗಾವಿ ನಗರದ ಸಿ.ಪಿ.ಎಡ್ ಮೈದಾನ ಮತ್ತು ಆರ್.ಟಿ.ಒ ಮೈದಾನಗಳಿಗೆ ಸ್ಥಳಾಂತರಿಸಿರುವದು, ಅವೈಜ್ಞಾನಿಕ ಕ್ರಮವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.


ಶುಕ್ರವಾರ ಜೂನ್ 11 ರಂದು ನಗರದ ತರಕಾರಿ ಮಾರುಕಟ್ಟೆಗಳಿಗೆ ಭೇಟಿ ಮಾಡಿ ಮಾತನಾಡಿದ ಈರಣ್ಣ ಕಡಾಡಿ ಅವರು ಎ.ಪಿ.ಎಂ.ಸಿ ಆವರಣದಲ್ಲಿ ಸುಮಾರು 13 ಎಕರೆಗಳ ವಿಶಾಲ ಪ್ರದೇಶದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆಗಳ ಪ್ರಾಂಗಣ ರಚನೆಯಾಗಿದ್ದು, ಅದನ್ನು ಕೋವಿಡ್ ನಿಯಮಾವಳಿಗಳ ಪ್ರಕಾರ ಸಾಮಾಜಿಕ ಅಂತರವನ್ನು ಕಾಪಾಡಿ ಉಪಯೋಗಿಸಿಕೊಳ್ಳಬೇಕಾಗಿತ್ತು, ಬದಲಾಗಿ ಇದಕ್ಕಿಂತ ಕಡಿಮೆ ಪ್ರದೇಶದ ಸ್ಥಳಗಳಿಗೆ ವರ್ಗಾವಣೆ ಮಾಡಿದ್ದು ಸರಿಯಾದ ಕ್ರಮವಲ್ಲ ಮತ್ತು ಸರಕಾರದ ನಿಯಮಾನುಸಾರ ಬೆಳಿಗ್ಗೆ 6 ರಿಂದ 10 ರವರೆಗೆ ಸಮಯ ನಿಗದಿ ಮಾಡಿದ ಕಾರಣ ಕಡಿಮೆ ಸಮಯದಲ್ಲಿ ಹೆಚ್ಚು ಖರೀದಿದಾರರಿಲ್ಲದೇ ರೈತರು ಕಡಿಮೆ ಬೆಲೆಗೆ ತರಕಾರಿ ಮಾರಬೇಕಾದ ಅನಿರ್ವಾತೆ ಸೃಷ್ಠಿಯಾಗಿದೆ ಎಂದು ಹೇಳಿದರು.
ಇದರಿಂದ ತರಕಾರಿ ಬೆಳೆದ ರೈತನಿಗೆ ಹಾನಿಯಾಗಿದೆ ಹಾಗೂ ಸದ್ಯ ಮಳೆಗಾಲ ಪ್ರಾರಂಭವಾದ ಕಾರಣ ಮೈದಾನಗಳಲ್ಲಿ ವ್ಯಾಪಾರ ವಹಿವಾಟು ಮಾಡುವಲ್ಲಿ ಸಾಕಷ್ಟು ತೊಂದರೆಯಾಗುತ್ತದೆ. ಎ.ಪಿ.ಎಂ.ಸಿಯಲ್ಲಿ ಇರುವ ವ್ಯವಸ್ಥೆಯನ್ನು ಬಿಟ್ಟು ಹೊರಾಂಗಣದಲ್ಲಿ ತಾತ್ಪೂರ್ತಿಕ ಶೆಡ್‍ಗಳ ನಿರ್ಮಾಣಕ್ಕೆ ಕೂಡ ಅನಗತ್ಯ ಖರ್ಚಿನ ಹೊರೆಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಸುಸಜ್ಜಿತವಾದ ಎ.ಪಿ.ಎಂ.ಸಿ ಪ್ರಾಂಗಣವನ್ನು ಉಪಯೋಗಿಸಿಕೊಳ್ಳಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.
ಎ.ಪಿ.ಎಂ.ಸಿ ಅಧ್ಯಕ್ಷ ಯುವರಾಜ ಕದಮ್, ನಿರ್ದೇಶಕರಾದ ಮನೋಜ್ ಮಸ್ತಿಕೊಪ್ಪ, ಎ.ಪಿ.ಎಂ.ಸಿ ಅಧೀಕ್ಷಕರಾದ ನವೀನ್ ಪಾಟೀಲ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ದುಂಡಪ್ಪ ಬೆಂಡವಾಡ, ಬೆಳಗಾವಿ ಮಹಾನಗರ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕಲ್ಲಪ್ಪ ಶಹಪೂರಕರ, ಬೆಳಗಾವಿ ಗ್ರಾಮೀಣ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಬಾಹುಬಲಿ ದೊಡ್ಡನ್ನವರ, ಮಹಾವೀರ ನಾಶಿಪುಡಿ, ಉಪಾಧ್ಯಕ್ಷ ಶೇಖರಗೌಡ ಮೊದಗಿ, ರೈತ ಮುಖಂಡ ಪ್ರಕಾಶ ನಾಯಕ ಸೇರಿದಂತೆ ಎಪಿಎಂಸಿ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.


Spread the love

About inmudalgi

Check Also

‘ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ’- ರಾಜಶೇಖರ ಹಿರೇಮಠ

Spread the loveಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 2025-26ನೇ ಸಾಲಿನ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ವಿಶಾಲ ಶೀಲವಂತ ಅವರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ