ಬೆಟಗೇರಿ:ನಮ್ಮ ದೇಶದ ಸಂಸ್ಕøತಿ, ಸಂಪ್ರದಾಯ ಅತ್ಯಂತ ಶ್ರೇಷ್ಠವಾಗಿದೆ. ನಮ್ಮ ಜನರು ದೇವರ ಮೇಲೆ ಅಪಾರ ನಂಬಿಯುಳ್ಳವರಾಗಿದ್ದಾರೆ. ದುರ್ಗಾಮಾತೆ ದೇವರು ಇಷ್ಟಾರ್ಥಗಳನ್ನು ಪೂರೈಸುವ ಆರಾಧ್ಯ ದೇವತೆಯಾಗಿದ್ದಾಳೆ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಮಹಾಸ್ವಾಮಿಜಿ ಹೇಳಿದರು.
ಬೆಟಗೇರಿ ಗ್ರಾಮದ ಶ್ರೀ ದುರ್ಗಾದೇವಿ ಪೂರ್ವ ದೇವಾಲಯದ ನೂತನ ಗರ್ಭಗುಡಿ ಕಟ್ಟಡ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮ ಮಂಗಳವಾರ ಜೂ.15ರಂದು ನೆರವೇರಿಸಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಗೆ ಸ್ಥಳೀಯರು ನೀಡುವ ಸಹಾಯ, ಸಹಕಾರ ಶ್ಲಾಘನೀಯವಾಗಿದೆ ಎಂದರು.
ಸ್ಥಳೀಯ ವಿಜಯ ಹಿರೇಮಠ ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು, ಶ್ರೀ ದುರ್ಗಾದೇವಿ ಗದ್ಗುಗೆ ಸುಮಂಗಲೆಯರಿಂದ ಆರತಿ, ನೈವೇದ್ಯ ಸಮರ್ಪಣೆ ಹಾಗೂ ಶ್ರೀಗಳಿಂದ ಪೂಜಾ ಕಾರ್ಯಕ್ರಮ ಸರಳವಾಗಿ ನಡೆಯಿತು. ಸುಮಾರು 10ಲಕ್ಷ ರೂ.ಗಳ ವೆಚ್ಚದಲ್ಲಿ ಶ್ರೀ ದುರ್ಗಾದೇವಿ ಪೂರ್ವ ದೇವಾಲಯದ ನೂತನ ಗರ್ಭಗುಡಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಸ್ಥಳೀಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಬಸವಂತ ಕೋಣಿ, ಮಾಯಪ್ಪ ಬಾಣಸಿ, ಸುಭಾಷ ಕರೆನ್ನವರ, ಸದಾಶಿವ ಕುರಿ, ವೀರನಾಯ್ಕ ನಾಯ್ಕರ, ಮುತ್ತೆಪ್ಪ ವಡೇರ, ರಾಮಪ್ಪ ಬಳಿಗಾರ, ಲಕ್ಷ್ಮಣ ಚಂದರಗಿ, ಮುತ್ತೆಪ್ಪ ದೇಯಣ್ಣವರ, ಬೀರಸಿದ್ಧ ಧರ್ಮಟ್ಟಿ, ಗುರಪ್ಪ ಮಾಕಾಳಿ, ಬೀರಪ್ಪ ದುರ್ಗಿಪೂಜೇರಿ, ವಿಠಲ ಬ್ಯಾಗಿ, ವಿಠಲ ಚಂದರಗಿ, ಶ್ರೀ ದುರ್ಗಾದೇವಿ ದೇವಾಲಯ ಸಮಿತಿ ಸದಸ್ಯರು, ಸ್ಥಳೀಯರು ಇದ್ದರು.
