ಬೆಟಗೇರಿ:ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಪದಕ ಪಡೆದ ಹಾಗೂ ರಾಷ್ಟ್ರಪತಿಯವರಿಂದ ಕೊಡಲಾಗುವ ಶೌರ್ಯ ಪ್ರಶಸ್ತಿಗೆ ಭಾಜನರಾದ ಸವದತ್ತಿ ಅಗ್ನಿ ಶಾಮಕ ಠಾಣೆಯ ಅಗ್ನಿಶಾಮಕ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಅಶೋಕ ಕೆಂಚಪ್ಪ ವಡೇರ ಅವರನ್ನು ಸೋಮವಾರ ಆ.9 ರಂದು ಸ್ಥಳೀಯ ಎಸ್‍ವೈಸಿ ಶಿಕ್ಷಣ ಸಂಸ್ಥೆ ಹಾಗೂ ಕನಕಶ್ರೀ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಶಾಲು ಹೊದಿಸಿ ಸತ್ಕರಿಸಿದರು.
ಕನಕಶ್ರೀ ಸಹಕಾರಿ ಅಧ್ಯಕ್ಷ ಹನುಮಂತ ವಡೇರ, ಶಂಕರ ಕೋಣಿ, ಬನಪ್ಪ ಚಂದರಗಿ, ವಿಠಲ ನೇಮಗೌಡ್ರ, ಮುಖ್ಯ ಕಾರ್ಯನಿರ್ವಾಹಕ ರಮೇಶ ಹಾಲಣ್ಣವರ, ಸುರೇಶ ವಡೇರ, ವಿರುಪಾಕ್ಷಯ್ಯ ಮಠಪತಿ, ಸುರೇಶ ಮಠದ, ಬಸವರಾಜ ಹುಚ್ಚಾಡಿ, ವಿಠಲ ನಾಯ್ಕ, ಎಸ್‍ವೈಸಿ ಶಿಕ್ಷಣ ಸಂಸ್ಥೆ ಹಾಗೂ ಕನಕಶ್ರೀ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.
