Breaking News
Home / Recent Posts / ಸತೀಶ ಶುಗರ್ಸ್‍ಗೆ ಹೆಚ್ಚು ಕಬ್ಬು ಪೂರೈಕೆ ಮಾಡಿದ ರೈತರಿಗೆ ಸತ್ಕಾರ

ಸತೀಶ ಶುಗರ್ಸ್‍ಗೆ ಹೆಚ್ಚು ಕಬ್ಬು ಪೂರೈಕೆ ಮಾಡಿದ ರೈತರಿಗೆ ಸತ್ಕಾರ

Spread the love

ಸತೀಶ ಶುಗರ್ಸ್‍ಗೆ ಹೆಚ್ಚು ಕಬ್ಬು ಪೂರೈಕೆ ಮಾಡಿದ ರೈತರಿಗೆ ಸತ್ಕಾರ

ಮೂಡಲಗಿ: ತಾಲೂಕಿನಲ್ಲಿನ ಹುಣಶ್ಯಾಳ ಪಿಜಿ ಹತ್ತಿರದ ಸತೀಶ ಶುಗರ್ಸ್ ಕಾರ್ಖಾನೆಯ ಆವರಣದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹನ್ನು ಕಾರ್ಖಾನೆಗೆ ಅತೀ ಹೆಚ್ಚು ಕಬ್ಬು ಪೂರೈಕೆ ಮಾಡಿದ ಪ್ರಗತಿಪರ ರೈತ ಹುಕ್ಕೇರಿ ತಾಲೂಕಿನ ಝಾಂಗಟಿಹಾಳ ಗ್ರಾಮದ ಶ್ರೀಮತಿ. ಭೂದೇವಿ ಗುರುಶಿದ್ದೇಶ್ವರ ಕಾಡದೇವರ ಹಾಗೂ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಅರ್ಜುನ ತಮ್ಮಣ್ಣ ನಾಯಕವಾಡಿ ಇವರುಗಳು ದ್ವಜಾರೋಹಣನ್ನು ನೆರವೇರಿಸಿದರು.

ದ್ವಜಾರೋಹಣ ನೆರವೇರಿಸಿದ ಅರ್ಜುನ ನಾಯಕವಾಡಿ ಮಾತನಾಡಿ, ಮಹಾತ್ಮಾ ಗಾಂಧಿಜೀ, ಮಂಗಲ ಪಾಂಡೆ, ಬಾಲಗಂಗಾಧರನಾಥ ತಿಲಕ, ಭಗತಸಿಂಗ, ಹೀಗೆ ಹಲವು ನಾಯಕರ ಹೋರಾಟ ಮತ್ತು ತ್ಯಾಗ ಬಲಿದಾನದ ಸಂಕೇತವಾಗಿ ನಮ್ಮ ದೇಶ ಸ್ವಾತಂತ್ರ್ಯಗೊಂಡು 75ವರ್ಷಗಳು ಗತಿಸಿದವು, ಸಂಸ್ಥೆಯ ಸಂಸ್ಥಾಪಕ ಚೇರಮನರಾದ ಸತೀಶ ಜಾರಕಿಹೊಳಿ ಇವರ ಸಮಾಜಮುಖಿ ಕಾರ್ಯಗಳು ಹಾಗೂ ಕಾರ್ಖಾನೆಯ ಉನ್ನತಿಯನ್ನು ಶ್ಲಾಘಿಸಿದರು.
ಅತಿಥಿ ಶ್ರೀಮತಿ ಭೂದೇವಿ ಗುರುಶಿದ್ದೇಶ್ವರ ಕಾಡದೇವರ ಮಾತನಾಡಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ನಾವೆಲ್ಲ ಇಂದು ಸ್ವಾತಂತ್ರ್ಯ ಹೊಂದುವಂತಾಗಿದೆ ಎಂದ ಅವರು ಕಾರ್ಖಾನೆಯ ಬೆಳವಣಿಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಅಧಿಕಾರಿಗಳು ಹಾಗೂ ಕಾರ್ಮಿಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.


Spread the love

About inmudalgi

Check Also

ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ

Spread the loveSpread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ