ಆ.20 ರಂದು ಹೇಮರಡ್ಡಿ ಮಲ್ಲಮ್ಮ ಮೂರ್ತಿ ಪ್ರತಿಷ್ಠಾಪಣೆ ಹಾಗೂ ದೇವಸ್ಥಾನ ಉದ್ಘಾಟನೆ
ಮೂಡಲಗಿ: ತಾಲೂಕಿನ ಹಳೇಯರಗುದ್ರಿ ಗ್ರಾಮದ ನೂತನವಾಗಿ ನಿರ್ಮಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಾ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪಣೆ ಹಾಗೂ ಕಳಸಾರೋಹಣ ಸಮಾರಂಭ ಹಾಗೂ ಶ್ರೀ ಬಿಂದಿಗೆಮ್ಮಾದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪಣೆ ಕಾರ್ಯಕ್ರಮ ಹಳೇಯರಗುದ್ರಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಮತ್ತು ಶ್ರೀ ವೇಮನ್ ಸೇವಾ ಸಮಿತಿ ಆಶ್ರಯದಲ್ಲಿ ಆ.19 ಮತ್ತು 20 ರಂದು ಜರುಗಲಿದೆ.
ಆ.19 ರಂದು ಮುಂಜಾನೆ 10ಕ್ಕೆ ಗ್ರಾಮದ ಮಾರುತಿ ದೇವಸ್ಥಾನದಿಂದ ಶ್ರೀ ಶಿವಶರಣೆ ಹೇಮರಡ್ಡಿ ಮ ಮಲ್ಲ್ಲಮ್ಮಾಂಬೆ ಮೂರ್ತಿ ಹಾಗೂ ಗ್ರಾಮದೇವತೆ ಬಿಂದಿಗೆಮ್ಮಾ ದೇವಿಯ ಮೂರ್ತಿಯನ್ನು ಕುಂಭಮೇಳ ಹಾಗೂ ಸಕಲ ವಾದ್ಯಗಳೊಂದಿಗೆ ಬೃಹತ ಮೆರವಣಿಯೊಂದಿಗೆ ಹೊಸ ದೇವಸ್ಥಾನಗಳವರಿಗೆ ಜರುಗಲಿದೆ.
ಆ.20 ರಂದು ಮುಂಜಾಣೆ ಶ್ರೀ ಶಿವಶರಣೆ ಮಲ್ಲಮ್ಮಾಂಬೆ ಹಾಗೂ ಬಿಂದಿಗೆಮ್ಮಾ ದೇವಿಯ ಮೂರ್ತಿ ಪ್ರತಿಷ್ಠಾಪಣೆ ಹಾಗೂ ರುದ್ರಾಭಿಷೇಕ ಜರುಗುವುದು. 10 ಗಂಟೆಗೆ ಜರುಗುವ ಸಮಾರಂಭವನ್ನು ಗದಗದ ಶಿರಂಜು ಜ್ಞಾನ ಯೋಗಾಶ್ರಮದ ಶ್ರೀ ಬಸವ ಸಮರ್ಥ ಸ್ವಾಮಿಜಿ ಜ್ಯೋತಿ ಬೆಳಗಿಸುವರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಎರೆಹೊಸಹಳ್ಳಿಯ ಮಹಾಯೋಗಿ ವೇಮನ ಸಂಸ್ಥಾನಮಠದ ಶ್ರೀ ವೇಮನಾನಂದ ಸ್ವಾಮಿಜಿ, ಮರೆಗುದ್ದಿಯ ಡಾ.ನಿರುಪಾದೀಶ್ವರ ಶ್ರೀಗಳು, ಶ್ರೀ ಗುರುಪಾದೀಶ್ವರ ಸ್ವಾಮೀಜಿ, ಕೊಣ್ಣುರದ ಶ್ರೀ ಡಾ.ವಿಶ್ವಪ್ರಭುದೇವಾ ಶಿವಾಚಾರ್ಯ ಶ್ರೀಗಳು, ಹೊಸಯರಗುದ್ರಿ-ಕೆ.ಕೆ.ಕೊಪ್ಪದ ಶ್ರೀ ಸಿದ್ಧಪ್ರಭು ಶಿವಾಚಾರ್ಯ ಶ್ರೀಗಳು, ತೊಂಡಿಕಟ್ಟಿಯ ಶ್ರೀ ಅಭಿನವ ವೆಂಕಟೇಶ್ವರ ಶ್ರೀಗಳು, ನಾವಲಗಿಯ ಶ್ರೀ ವೇದಮೂರ್ತಿ ಶ್ರೀಶೈಲ ಮಹಾರಾಜರು ಮತ್ತು ಅವರಾದಿಯ ಶ್ರೀ ಗಂಗಾಧರ ಹಿರೇಮಠ ವಹಿಸುವರು.
ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜನಾರ್ಧನ ರಡ್ಡಿ, ಸಂಸದೆ ಮಂಗಳಾ ಅಂಗಡಿ, ಜಿಲ್ಲಾ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಗೋಕಾಕ ತಾಲೂಕಾ ರಡ್ಡಿ ಸಂಘ ಅಧ್ಯಕ್ಷ ಶಿವನಗೌಡ ಪಾಟೀಲ, ರಡ್ಡಿ ಸಂಘಟಕ ಎಮ್.ಎ.ಒಂಟಗೋಡಿ, ಬೆಳಗಾವಿ ಲೋಕಾಯುಕ್ತ ಎಸ್.ಪಿ ಯಶೋಧಾ ಒಂಟಗೋಡಿ, ಬೆಳಗಾವಿ ಹೆಚ್ಚುವರಿ ಎಪಿ ಅಮರನಾಥ ರಡ್ಡಿ, ಎಸಿಪಿ ನಾರಾಯಣ ಭರಮಣಿ, ನೀರಾವರಿ ಇಲಾಖೆಯ ಅಭಿಯಂತರ ಶ್ರೀಕಾಂತ ಜಾಲಿಬೇರಿ, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯ್ಕ, ಮಹಾಲಿಂಗಪೂರ ಮಹಾಲಿಂಗಪ್ಪ ತಟ್ಟಿಮನಿ ಮತ್ತಿತರು ಭಾಗವಹಿಸುವರು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.