ಶಿವಶರಣ ನೂಲಿ ಚಂದಯ್ಯನವರ ಜಯಂತಿ ಆಚರಣೆ
ಮೂಡಲಗಿ: 12ನೇ ಶತಮಾನದಲ್ಲಿ ಅತ್ಯಂತ ಸರ್ವಶ್ರೇಷ್ಠ ಶಿವ ಶರಣರೆನಿಸಿ ಸಾಕ್ಷಾತ ಪರಶಿವನನ್ನೆ ತನ್ನ ಸತ್ಯ, ನಿಷ್ಠೆ ಕಾಯಕದಿಂದ ಒಲಿಸಿಕೊಂಡ ಮಹಾನ ಶಿವಶರಣರು ತಾವು ಮಾಡಿದ ಕಾಯಕದಿಂದ ಜಂಗಮ ದಾಸೋಹದಂತ ಸೇವೆಗಳನ್ನು ಈ ನಾಡಿಗೆ ಪರಿಚಯಸಿದ ಸರ್ವ ಶ್ರೇಷ್ಠ ಶಿವಶರಣ ವಚನಕಾರ ಕಾಯಕಯೋಗಿ ಕೊರಮ ಸಮುದಾಯದ ಕುಲತಿಲಕರು ಹಾಗೂ ಕುಲಗುರುಗಳಾದ ಕಾಯಕಯೋಗಿ ಶ್ರೀ ಶಿವ ಶರಣ ನೂಲಿ ಚಂದಯ್ಯನವರ 914ನೇ ಜಯಂತಿಯನ್ನು ಪಟ್ಟಣದ ಕೊರಮ ಸಮುದಾಯದಿಂದ ಯಲ್ಲಮ್ಮಾ ದೇವಸ್ಥಾನ ಹತ್ತಿರದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ರವಿವಾರ ಜರುಗಿತು.
ಜಯಂತಿಯ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸದಸ್ಯರಾದ ಸಂತೋಷ ಸೋನವಾಲ್ಕರ, ಆನಂದ ಟಪಾಲದಾರ, ಮಾಜಿ ಪುರಸಭೆ ಉಪಾಧ್ಯಕ್ಷ ಆರ್.ಪಿ.ಸೋನವಾಲ್ಕರ, ಅನ್ವರ ನಧಾಪ್, ಬಸು ಝಂಡೇಕುರಬರ, ರಾಜು ಭಂಜತ್ರಿ, ಹಣಮಂತ ಭಜಂತ್ರಿ, ಶ್ರೀಕಾಂತ ಭಜಂತ್ರಿ, ಕೃಷ್ಣಾ ಗಾಡಿವಡ್ಡರ, ಮಾರುತಿ ಭಜಂತ್ರಿ, ಸುರೇಶ ಭಜಂತ್ರಿ, ಸಂಜಯ ಭಜಂತ್ರಿ, ರಾಯಪ್ಪ ಭಜಂತ್ರಿ, ಕಲ್ಲಪ್ಪ ಭಜಂತ್ರಿ, ವಿಠ್ಠಲ ಭಜಂತ್ರಿ, ಬಸವರಾಜ ಭಜಂತ್ರಿ ಬಹದ್ದೂರ ಭಜಂತ್ರಿ, ಯಲ್ಲಪ್ಪ ಭಜಂತ್ರಿ ಹಾಗೂ ಕೊರಮ ಸಮುದಾಯದವರು ಭಾಗವಹಿಸಿದರು.