Breaking News
Home / Recent Posts / ತರಗತಿ ಪ್ರಾರಂಭವಾಗಿರುವದರಿಂದ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಖುಷಿ ನೀಡಿದೆ – ಬಿಇಒ ಅಜಿತ ಮನ್ನಿಕೇರಿ

ತರಗತಿ ಪ್ರಾರಂಭವಾಗಿರುವದರಿಂದ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಖುಷಿ ನೀಡಿದೆ – ಬಿಇಒ ಅಜಿತ ಮನ್ನಿಕೇರಿ

Spread the love

ಮೂಡಲಗಿ: ಕೊರೋನಾ ಮಹಾಮಾರಿಯ ದುಷ್ಪರಿಣಾಮದಿಂದಾಗಿ ಕೇಲವು ತಿಂಗಳುಗಳಿಂದ ಶೈಕ್ಷಣಿಕ ಚಟುವಟಿಕೆಗಳು ಭೌತಿಕವಾಗಿ ನಡೆಯದೆ ಸಾಮಾಜಿಕ ಜಾಲತಾಣಗಳ ಮೂಲಕ ನಡೆದಿವೆ. ಸದ್ಯ ಸರಕಾರ, ಇಲಾಖೆಯು ಕೋವಿಡ್-19 ನಿಯಮಾವಳಿಗಳ ಪ್ರಕಾರ ತರಗತಿ ಪ್ರಾರಂಭವಾಗಿರುವದರಿಂದ ಪಾಲಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಖುಷಿ ನೀಡಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.


ಅವರು ಸೋಮವಾರ ಪಟ್ಟಣದ 9 ನೇ ಮತ್ತು 10 ನೇ ತರಗತಿಗಳ ಪ್ರಾರಂಭೋತ್ಸವದಲ್ಲಿ ಸ್ಥಳೀಯ ಕೆ.ಎಚ್.ಎಸ್ ಸರಕಾರಿ ಪ್ರೌಢ ಶಾಲೆಯಲ್ಲಿ ಭಾಗವಹಿಸಿ, ಪ್ರಪಂಚದಾಂದ್ಯಂತ ಅಪ್ಪಳಿಸಿರುವ ಕೊರೋನಾ ಮಹಾಮಾರಿಯಿಂದ ನಲೂಗಿ ಹೋಗಿವೆ. ಸದ್ಯ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವದರಿಂದ ಸರಕಾರ ಮತ್ತು ಇಲಾಖೆಯು ನುರಿತ ತಜ್ಞರ ಅಭಿಪ್ರಾಯದ ಮೇರಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲೆಗಳನ್ನು ಪ್ರಾರಂಭಿಸುತ್ತಿದ್ದಾರೆ. ವಲಯ ವ್ಯಾಪ್ತಿಯಲ್ಲಿ 80 ಪ್ರೌಢ ಶಾಲೆಗಳ ಮುಖ್ಯೋಪಾಧ್ಯಯರ ಸಭೆಯನ್ನು ವಡೇರಹಟ್ಟಿಯಲ್ಲಿ ಜರುಗಿಸಿ ಪ್ರಾರಂಭಕ್ಕೂ ಮುನ್ನ ಹಾಗೂ ನಂತರ ಕೈಗೋಳ್ಳ ಬೇಕಾದ ಕ್ರಮಗಳ ಕುರಿತು ವಿವರಿಸಿದೆ. ಆಯಾ ಶಾಲಾ ವ್ಯಾಪ್ತಿಯ ಆರೋಗ್ಯ ಇಲಾಖೆ, ಪಂಚಾಯತಿ, ಅಂಗನವಾಡಿ, ಆಶಾಕಾರ್ಯಕರ್ತೆಯರು ಕ್ರಮ ಕೈಗೋಳ್ಳಲು ಸೂಚಿಸಲಾಗಿದೆ ಎಂದರು.
ಶೃಂಗಾರಗೊಂಡ ಶಾಲೆಗಳು: ಶಾಲೆಗಳು ಪ್ರಾರಂಭವಾಗಿರುವದರಿಂದ ವಿದ್ಯಾರ್ಥಿಗಳು ಶಿಕ್ಷಕರು ಉತ್ಸುಕರಾಗಿ ಭಾಗವಹಿಸಿದ್ದಾರೆ. ಶಾಲೆಗಳು ಶೃಂಗಾರಗೊಂಡು ಕಲಿಕಾ ವಾತಾವರಣ ನಿರ್ಮಾಣಗೊಳ್ಳುವಲ್ಲಿ ಸಜ್ಜಾಗಿವೆ. ಸಂಬಂಧಿಸಿದ ಪಂಚಾಯತ ಸಿಬ್ಬಂದಿಯಿಂದ ಸ್ಯಾನಿಟೈಜ್, ಶೌಚಾಲಯ ಸ್ವಚ್ಚತೆ, ಕೈತೊಳೆಯಲು ನೀರು, ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಗಳಿಂದ ಉಷ್ಣಾಂಶ ಪರೀಕ್ಷೆ, ಹ್ಯಾಂಡ್ ಸ್ಯಾನಿಟೈಜರ್, ಅವರ ಸ್ವಂತ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿ ತರಗತಿ ಕೊಠಡಿಯೊಳಗೆ ಬಿಟ್ಟಿರುತ್ತಾರೆ. ಸಾಮಾಜಿಕ ಅಂತರ, ಮಾಸ್ಕ, ಸ್ಯಾನಿಟೈಜರ್, ಪದೆ ಪದೆ ಕೈತೊಳೆದುಕೊಳ್ಳೂವಿಕೆ ಬಗ್ಗೆ ಖಾತ್ರಿಪಡಿಸಿಕೊಂಡಿರುವದಾಗಿ ತಿಳಿಸಿದ್ದಾರೆ.
ಮೂಡಲಗಿ ನಗರದ ಕೆ.ಎಸ್.ಎಸ್ ಸರಕಾರಿ ಪ್ರೌಢ ಶಾಲೆ ಹಾಗೂ ನಾಗನೂರಿನ ಮೇಘಾ ಪ್ರೌಢ ಶಾಲೆಗಳಿಗೆ ಭೇಟಿ ನೀಡಿದ ಬಿಇಒ ಎ.ಸಿ ಮನ್ನಿಕೇರಿ ಪ್ರಾರಂಬಿಕ ದಿನದ ಪ್ರಾಯೋಗಿಕ ಪಾಠವನ್ನು ಮಾಡಿ, ಮಕ್ಕಳಲ್ಲಿರುವ ಸಂಶಯಗಳು, ಕಲಿಕೆಯ ಬಗ್ಗೆ, ಕ್ಲೀಷ್ಠಾಂಶಗಳ ಕುರಿತು ಅಭಿಪ್ರಾಯಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎ ಜುನೇದಿ ಪಟೇಲ್, ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್, ಮುಖ್ಯೋಪಾಧ್ಯಾಯ ಎಸ್.ಬಿ ನ್ಯಾಮಗೌಡರ, ಮೇಘಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಹಾಜರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ