Breaking News
Home / Recent Posts / ಜಾನುವಾರ ಸಂತೆ ಭಾನುವಾರದ ಬದಲು ಬುಧವಾರ ಅನುಮತಿಗೆ ಮನವಿ

ಜಾನುವಾರ ಸಂತೆ ಭಾನುವಾರದ ಬದಲು ಬುಧವಾರ ಅನುಮತಿಗೆ ಮನವಿ

Spread the love

ಜಾನುವಾರ ಸಂತೆ ಭಾನುವಾರದ ಬದಲು ಬುಧವಾರ  ಅನುಮತಿಗೆ ಮನವಿ

ಮೂಡಲಗಿ : ಪ್ರತಿ ಶನಿವಾರ ಹಾಗೂ ಭಾನುವಾರ ವಿಕೆಂಡ್ ಕಪ್ರ್ಯೂ ಜ್ಯಾರಿ ಇರುವ ಈ ದಿನಗಳಲ್ಲೇ ನಡೆಯುವ ಇಲ್ಲಿನ ಪ್ರಖ್ಯಾತ ಜಾನುವಾರು ಸಂತೆ ಕೊರೋನಾ ಮಹಾಮಾರಿಯಿಂದ ಸಂತೆ ಸ್ಥಗಿತಗೊಂಡು ವ್ಯಾಪಾರಸ್ಥರು,ದಲ್ಲಾಳಿಗಳು,ಗ್ರಾಮಸ್ಥರು ಆರ್ಥಿಕ ಸಂಕಷ್ಟಕ್ಕೀಡಾಗಿ ಉಪ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಪುರಸಭೆ ಸದಸ್ಯ ಹುಸೇನಸಾಬ ಶೇಖ ಹೇಳಿದರು.

ತಹಸೀಲದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈ ಸಂತೆಯಿಂದ ಅದೆಷ್ಟೋ ಬಡಬಗ್ಗರು ತಮ್ಮ ಉಪಜೀವನ ಸಾಗಿಸುತ್ತಿದ್ದು ವಿಕೆಂಡ್ ಕಪ್ರ್ಯೂದಿಂದ ಸಂತೆ ನಡೆಯದೆ ಹೊಟ್ಟೆಗೆ ಬರೆ ಎಳೆದಂತಾಗಿದ್ದು ಸಧ್ಯ ಅನ್‍ಲಾಕ್ ಇದ್ದರೂ ಸಂತೆ ನಡೆಯುವ ದಿನದಂದೆ ವಿಕೆಂಡ್ ಕಪ್ರ್ಯೂ ಇರುವುದರಿಂದ ಸಂತೆ ನಡೆಯುತಿಲ್ಲ ಕಾರಣ ಇಲ್ಲಿ ವ್ಯಾಪಾರ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದ ವ್ಯಾಪಾರಸ್ಥರು, ಇನ್ನಿತರ ಕೂಲಿ ಕಾರ್ಮೀಕರು ಬೀದಿಗೆ ಬಿದ್ದಂತಾಗಿದೆ. ಕೊರೋನಾ ಎರಡನೆ ಅಲೆಯಲ್ಲೂ ಕೂಡ ಅನೇಕ ತೊಂದರೆ ಅನುಭವಿಸುವಂತಾಗಿದೆ ಸಧ್ಯ ಅನ್‍ಲಾಕ್ ಇದ್ದರೂ ಶನಿವಾರ ಮತ್ತು ರವಿವಾರ ಎರಡು ದಿನಗಳ ಕಾಲ ವಿಕೆಂಡ ಕಪ್ರ್ಯೂ ಜಾರಿಯಲ್ಲಿರುವುದರಿಂದ ದನಗಳ ವ್ಯಾಪಾರ ಹಾಗೂ ಸಂತೆ ನಡೆಯುತ್ತಿಲ್ಲ. ನಾವು ಪ್ರತಿ ರವಿವಾರ ದನಗಳ ವ್ಯಾಪಾರ ಮಾಡಿ ನಮ್ಮ ಕುಟುಂಬವನ್ನು ನಡೆಸುತ್ತಿದ್ದೇವೆ ಈಗ ಪ್ರತಿ ರವಿವಾರ ವ್ಯಾಪಾರ ಮತ್ತು ವಹಿವಾಟ ಬಂದ ಇರುವುದರಿಂದ ಜೀವನ ನಡೆಸುವುದೆ ದುಸ್ತರವಾಗಿದೆ.ಆದ್ದರಿಂದ ವಿಕೆಂಡ ಕಪ್ರ್ಯೂ ಮುಗಿಯುವರೆಗೆ ಭಾನುವಾರದಂದು ನಡೆಯುವ ಸಂತೆಯ ದಿನವನ್ನು ಬದಲಿಸಿ ಬುಧವಾರದಂದು ದನಗಳ ಸಂತೆ ಹಾಗೂ ವ್ಯಾಪಾರ ಮಾಡಲು ಅನುಮತಿ ನೀಡಬೇಕೆಂದು ವ್ಯಾಪಾರಸ್ಥರ ಹಾಗೂ ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.

ಗುಜನಟ್ಟಿ ಮಾಜಿ ತಾಪಂ ಸದಸ್ಯ ಬಭ್ರುವಾಹನ ಬಂಡ್ರೋಳಿ, ಇಬ್ರಾಹಿಮ ಹುಣಶ್ಯಾಳ ಮಾತನಾಡಿದರು.

ಈ ಸಂದರ್ಭದಲ್ಲಿ ರಮೇಶ ಸಣ್ಣಕ್ಕಿ, ರವೀಂದ್ರ ಸಣ್ಣಕ್ಕಿ, ಪ್ರಭು ಬಂಗೆನ್ನವರ, ರಾಮು ಝಂಡೆಕುರಬರ,
ಮೆಹಬೂಬ ಶೇಖ ಹಾಗೂ ಅನೇಕ ವ್ಯಾಪಾರಸ್ಥರು, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಣೆ

Spread the loveSpread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ