Breaking News
Home / Recent Posts / ದಾಲ್ಮೀಯಾ ಸಿಮೇಂಟ್ ಕಾರ್ಖಾನೆ ಮತ್ತು ಗಣಿಗಾರಿಕೆ ವಿಸ್ತರಣೆಯ ಸಾರ್ವಜನಿಕರ ಹವಾಲು ಸಭೆ

ದಾಲ್ಮೀಯಾ ಸಿಮೇಂಟ್ ಕಾರ್ಖಾನೆ ಮತ್ತು ಗಣಿಗಾರಿಕೆ ವಿಸ್ತರಣೆಯ ಸಾರ್ವಜನಿಕರ ಹವಾಲು ಸಭೆ

Spread the love

ಮೂಡಲಗಿ: ದಾಲ್ಮೀಯಾ ಸಿಮೇಂಟ್ ಕಾರ್ಖಾನೆ ಮತ್ತು ಗಣಿಗಾರಿಕೆ ವಿಸ್ತರಣೆಯ ಸಾರ್ವಜನಿಕರ ಹವಾಲು ಸಭೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳ ಹೇಳಿಕೆಯ ವಿಡಿಯೋ ರೀಕಾಡ್ ಹಾಗೂ ಮನವಿಗಳನ್ನು ಪರಿಸರ ಮಂತ್ರಾಯ ಭಾರತ ಸರ್ಕಾರಕ್ಕೆ ವರದಿಯನ್ನು ಕಳಿಸಲಾಗುವುದು ಎಂದು ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.
ಶುಕ್ರವಾರದಂದು ತಾಲೂಕಿನ ಯಾದವಾಡ ದಾಲ್ಮೀಯಾ ಸಿಮೆಂಟ್ ಕಾರ್ಖಾನೆಯ ಹತ್ತಿರ ಆಯೋಜಿಸಲಾದ ಕಾರ್ಖಾನೆಯ ವಿಸ್ತರಣೆ ಬಗ್ಗೆ ಪರಿಸರ ಸಾರ್ವಜನಿಕರ ಆಲಿಕೆ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರ ಅಭಿಪ್ರಾಯಗಳನ್ನು ಹಾಲಿಸಿ ಮಾತನಾಡಿದ ಅವರು, ಸಾರ್ವಜನಿಕರು ಹೇಳುವ ಹಾಗೆ ಕಾರ್ಖಾನೆಯಿಂದ ಆಗಿರುವ ಸಮಸ್ಯೆಗಳಿಗೆ ಸಂಬಂದಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ ಎಂದರು.
ಸಭೆಯಲ್ಲಿ ಯಾದಡವಾದ ಗ್ರಾಪಂ ಸದಸ್ಯ ಕಲ್ಮೇಶ ಗಾಣಿಗೇರ ಮಾತನಾಡಿ, ಈ ಸಭೆಯಲ್ಲಿ ಸಾಕಷ್ಟು ರೈತರು ಅಪರ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಸಿಕೊಂಡಿದ್ದಾರೆ. ಗಣಿಕಾರಿಗೆಯಿಂದ ಆಗಿರುವ ತೊಂದರೆಗಳ ಬಗ್ಗೆ ತಿಳಿಸಿದ್ದರೆ, ಕಾರ್ಖಾನೆ ವಿಸ್ತರಣೆಯಿಂದ ಗ್ರಾಮದಲ್ಲಿ ಅಂತರಜರ್ಲ ಕುಸಿತ ಹಾಗೂ ಮನೆಗಳು ಬಿರುಕು ಹಾಗೂ ಬೆಳೆ ನಾಶ ಹೀಗೆ ಅನೇಕ ತೊಂದರೆಗಳನ್ನು ಉಂಟಾಗುವುದಿರಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಸಂಕಷ್ಟ ಎದುರಗುತ್ತದೆ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಕಾರ್ಖಾನೆಯ ಸುತ್ತಮುತ್ತನಲ್ಲಿ ಜಮೀನಿನ ಮಾಲಿಕರು ಕಾರ್ಖಾನೆಯಿಂದ ದೂಳಿನಿಂದ ಮತ್ತು ಗಣಿಗಾರಿಕೆಯಿಂದ ಆಗುತ್ತಿರುವ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸಭೆಯ ವೇದಿಕೆಯಲ್ಲಿ ಚಿಕ್ಕೋಡಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಜಗದೀಶ ಆಯ್.ಎಚ್, ಧಾರವಾಡ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ವಿಜಯಕುಮಾರ ಕಡಕಭಾಂವಿ ಜನರ ಹವಾಲಗಳನ್ನು ಆಲಿಸಿ ಮನವಿ ಸ್ವೀಕರಿಸಿದರು.
ಕಾರ್ಖಾನೆಯ ತಾಂತ್ರಿಕ ಮುಖ್ಯಸ್ಥ ಮುಖೇಶಕುಮಾರ ಸಿನ್ಹಾ ಅವರು ಕಾರ್ಖಾನೆಯಿಂದ ರೈತರಿಗೆ ನಷ್ಟವಾದರೆ ಪರಿಹಾರ ಒದಗಿಸುವದಗಿ ಭರವಸೆ ನೀಡಿದರು.
ಕಾರ್ಖಾನೆಯ ತಾಂತ್ರಿಕ ಮುಖ್ಯಸ್ಥ ಮುಖೇಶಕುಮಾರ ಸಿನ್ಹಾ, ಘಟಕ ಮುಖ್ಯಸ್ಥ ಪ್ರಭಾತಕುಮಾರ ಸಿಂಗ್, ಗಣಿಗಾರಿ ಮುಖ್ಯಸ್ಥ ಅಜಯ ಕಡಪಾ, ಮಾನಸಂಪನ್ಮೂಲ ಅಧಿಕಾರಿ ಮಾಯಾಂಕ ಪಾಟಕ, ಸಾಮಾಜಿಕ ಕಾರ್ಯಕ್ರಮಾಧಿಕಾರಿ ಚೇತನಕುಮಾರ ವಾಗಮೋರೆ ಹಾಗೂ ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ, ಡಿ.ವಾಯ್.ಎಸ್.ಪಿ ಮನೋಜಕುಮಾರ ನಾಯಕ ಸೇರಿದಂತೆ ವಿವಿಧ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು. ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಮತ್ತು ಕುಲಗೋಡ ಪಿಎಸ್‍ಐ ಹನಮಂತ ನೇರಳೆ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ ವ್ಯವಸ್ಥೆ ಕಲ್ಪಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ