Breaking News
Home / Recent Posts / ನೂತನ ಟಿವಿಎಸ್ ಶೋರೂಮ್‍ದ ಉದ್ಘಾಟನೆ ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

ನೂತನ ಟಿವಿಎಸ್ ಶೋರೂಮ್‍ದ ಉದ್ಘಾಟನೆ ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

Spread the love

 

ಶ್ರದ್ಧೆ ಮತ್ತು ವಿಶ್ವಾಸದಲ್ಲಿ ಯಶಸ್ಸು ಸಾಧನೆ

ಮೂಡಲಗಿ: ‘ಶ್ರದ್ದೆ ಮತ್ತು ಜನರ ವಿಶ್ವಾಸವಿದ್ದರೆ ಎಲ್ಲ ವ್ಯವಹಾರಗಳು ಯಶಸ್ಸು ಸಾಧಿಸುತ್ತವೆ’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿಗಳು ಹೇಳಿದರು.
ಇಲ್ಲಿಯ ಕಾಲೇಜು ರಸ್ತೆಯಲ್ಲಿ ಸಮರ್ಥ ಟಿವಿಎಸ್ ದ್ವಿಚಕ್ರ ವಾಹನಗಳ ಮಾರಾಟ ನೂತನ ಶೋರೂಮ ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ದೈವಭಕ್ತಿ ಇದ್ದರೆ ಸಾಗುವ ದಾರಿಯು ಯಶಸ್ಸಿನತ್ತ ಇರುತ್ತದೆ ಎಂದರು.
ಶಿವಬಸಪ್ಪ ಭೀಮಪ್ಪ ಲಂಕೆಪ್ಪನ್ನವರ ಮತ್ತು ವೀರೇಶ ಲಂಕೆಪ್ಪನ್ನವರ ಅವರು ಪೂಜ್ಯರನ್ನು ಹಾಗೂ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಗೋಕಾಕದ ಉದಯ ಪತ್ರಾವಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಸದಸ್ಯ ಸಂತೋಷ ಸೋನವಾಲಕರ, ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ರಮೇಶ ಪ್ಯಾಟಿಗೌಡರ ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ