ಕಾರ್ಮಿಕ ಇಲಾಖೆವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ
ಕುಲಗೋಡ: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತ ಆವರಣದಲ್ಲಿ ಇಂದು ಮುಂಜಾನೆ ಗ್ರಾ.ಪಂ ವ್ಯಾಪ್ತಿಯ ಅಸಂಘಟಿತ 150 ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣಾ ಕಾರ್ಯಕ್ರಮ ನಡೆಯಿತು.
ಜಿ.ಪಂ ಸದಸ್ಯ ಗೋವಿಂದ ಕೊಪ್ಪದ ಆಹಾರ ಕಿಟ್ ವಿತರಿಸಿ ಮಾತನಾಡಿ ಶಾಸಕರ ಮಾರ್ಗದರ್ಶನದಲ್ಲಿ ಕಾರ್ಮಿಕ ಇಲಾಖೆ ಕರೋನಾ 2 ನೇ ಅಲೆಯಲ್ಲಿ ಸಂಕಷ್ಟದಲ್ಲಿದ್ದ ಅಸಂಘಟಿತ ಕಾರ್ಮಿಕರಿಗೆ ಸರಕಾರ. ಶ್ರಮಿಕರ ಬದುಕಿಗೆ ನೆರವಿನ ಆಸರೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ.ಗ್ರಾಪಂ ಉಪಾಧ್ಯಕ್ಷ ಶ್ರೀಪತಿ ಗಣಿ. ಭೀಮಶಿ ಪೂಜೇರಿ. ಸತೀಶ ವಂಟಗೋಡಿ. ವೆಂಕಣ್ಣಾ ಚನ್ನಾಳ. ಹಣಮಂತ ಚನ್ನಾಳ. ಗೋಪಾಲ ತಿಪ್ಪಿಮನಿ. ನಾಗೇಶ ವಂಡಿವಡ್ಡರ. ಸದಾ ಗುಡಗುಡಿ. ಬಸು ಯರಗಟ್ಟಿ. ಬಸು ನಾಯಿಕ.ಹಣಮಂತ ಲಕ್ಕಾರ.ಅಶೋಕ ಪೂಜೇರಿ. ಶಂಕರ ಹಾದಿಮನಿ. ಲಕ್ಷ್ಮಣ ನಂದಿ. ಗ್ರಾ.ಪಂ ಸದಸ್ಯರು ಗ್ರಾಮದ ಮುಖಂಡರು ಹಾಜರಿದ್ದರು.