Breaking News
Home / Recent Posts / ಆಸ್ಕರ್ ಫನಾರ್ಂಡಿಸ್ ಅವರ ನಿಧನಕ್ಕೆ ಕಾಂಗ್ರೇಸ್ ಪಕ್ಷದಿಂದ ಶೃದ್ಧಾಂಜಲ್ಲಿ ಸಭೆ

ಆಸ್ಕರ್ ಫನಾರ್ಂಡಿಸ್ ಅವರ ನಿಧನಕ್ಕೆ ಕಾಂಗ್ರೇಸ್ ಪಕ್ಷದಿಂದ ಶೃದ್ಧಾಂಜಲ್ಲಿ ಸಭೆ

Spread the love

ಆಸ್ಕರ್ ಫನಾರ್ಂಡಿಸ್ ಅವರ ನಿಧನಕ್ಕೆ ಕಾಂಗ್ರೇಸ್ ಪಕ್ಷದಿಂದ ಶೃದ್ಧಾಂಜಲ್ಲಿ ಸಭೆ

ಮೂಡಲಗಿ: ಸರಳ ಸಜ್ಜನಿಕೆಯ ಕಾಂಗ್ರೆಸ್ ಪಕ್ಷದ ರಾಜಕಾರನಿ ಆಸ್ಕರ್ ಫನಾರ್ಂಡಿಸ್ ಅವರ ಅಕಾಲಿಕ ನೀಧನದಿಂದ ಪಕ್ಷಕ್ಕೆ ಮತ್ತು ನಾಡಿಗೆ ಬಹಳ ನಷ್ಟವಾಗಿದೆ ಎಂದು ಅರಭಾವಿ ಕ್ಷೇತ್ರ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಹೇಳಿದರು.
ಪಟ್ಟಣದ ಸಂಪದಯ್ಯಾ ಮಠದ ಆವರಣದಲ್ಲಿ ಆಸ್ಕರ್ ಫನಾರ್ಂಡಿಸ್ ನೀದನಕ್ಕೆ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿ , ಫರ್ನಾಂಡಿಸ್ ಅವರು ಸಾಮಾನ್ಯ ಕುಟುಂಬದಿಂದ 1980 ರಲ್ಲಿ ಸಂಸದರಾಗಿ ಆಯಕ್ಕೆಯಾಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಓರ್ವ ರಾಜಕಾರಣಿ ಮಾತ್ರ ಆಗಿರದೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಾವುದೇ ಜಾತಿ, ಧರ್ಮ ಮತ್ತು ಭಾμÉಯನ್ನು ಲೆಕ್ಕಿಸದೆ ಜನರ ಸುಖ ದುಃಖಗಳಲ್ಲಿ ಭಾಗಿಯಾಗುತ್ತಿದ್ದ ಶ್ರೇಷ್ಠ ನಾಯಕ. ಆಸ್ಕರ್ ಫನಾರ್ಂಡಿಸ್ ಅವರು ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಾರಿಗೆ ಮತ್ತು ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸುವ ಮೂಲಕ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಈಡೇರಿಸಿ ರಾಜ್ಯದಲ್ಲಿನ ಕೊಂಕಣ ರೇಲ್ವೆ ಸೇವೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಸಭೆಯಲ್ಲಿ ಪಟ್ಟಣದ ಚರ್ಚ ಪಾದರ ರೇ.ಡೆನಿಯಲ್ ಬಾಬು ಮತ್ತು ಕಾಂಗ್ರೇಸ್ ಪಕ್ಷದ ಮುಖಂಡರಾದ ಎಸ್.ಆರ್.ಸೋನವಾಲಕರ, ವಿ.ಪಿ.ನಾಯಿಕ, ಗುರಪ್ಪಾ ಹಿಟ್ಟಣಗಿ ಮಾತನಾಡಿ ಆಸ್ಕರ್ ಫನಾರ್ಂಡಿಸ್ ಅವರ ಕಾರ್ಯ ವೈಖರಿ ಬಗ್ಗೆ ಮಾತನಾಡಿದರು.
ಸಭೆ ಆಸ್ಕರ್ ಫನಾರ್ಂಡಿಸ್ ಅವರ ಭಾವ ಚಿತ್ರಕ್ಕೆ ಪುಷ್ಪ ಅರ್ಪಿಸಿ ಮೌನಾಚರಣೆ ಮಾಡುವ ಮೂಲಕ ಶೃದ್ಧಾಂಜಲಿ ಅರ್ಪಿಸಿದರು.
ಸಭೆಯಲ್ಲಿ ವೀರುಪಾಕ್ಷ ಮುಗಳಖೋಡ, ಸುರೇಶ ಮಗದುಮ್, ಹಸನಾಸಾಬ ಮುಗಟಖಾನ, ಅಮೀರಹಜ್ಮಾ ಥರಥರಿ, ಶಲಿಂ ಇನಾಮದಾರ, ರವಿ ಮೂಡಲಗಿ, ಇರ್ಶಾದ ಪೈಲವಾನ್, ಇಮಾಮ್ಮ ಹುನೂರ, ಮಲ್ಲಿಕ ಕಳ್ಳಿಮನಿ ಮತ್ತು ಪಟ್ಟಣ ಹಾಗೂ ವಿವಿಧ ಗ್ರಾಮಗಳ ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದರು.

 


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ