ವಿಚಾರ ಸಂಕಿರಣಕ್ಕೆ ಶಿಕ್ಷಕರಾದ ಗಿರೆಣ್ಣವರ ಆಯ್ಕೆ
ಮೂಡಲಗಿ: ಅ.2ರಂದು ಬೆಂಗಳೂರಿನಲ್ಲಿ ಗಾಂಧೀಜಿಯವರ ಜಯಂತಿ ನಿಮಿತ್ಯವಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರ ಅಧ್ಯಕ್ಷತೆ ನಡೆಯುವ ವಿಚಾರಸಂಕಿರಣಕ್ಕೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆಣ್ಣವರ ಆಯ್ಕೆಯಾಗಿದ್ದಾರೆ.
ಈ ವಿಚಾರ ಸಂಕಿರದಲ್ಲಿ ರಾಜ್ಯ 34 ಶೈಕ್ಷಣಿಕ ಜಿಲ್ಲೆಗಳಿಂದ ಆಯ್ದ 34 ಶಿಕ್ಷಕರು ಈ ಸಂವಾದ ಆಮಂತ್ರಣ ನೀಡಿರುತ್ತಾರೆ,
ಈ ವಿಚಾರ ಸಂಕಿರಣಕ್ಕೆ ಆಯ್ಕೆಯಾದ ಮುಖ್ಯ ಶಿಕ್ಷಕ ಎ.ವಿ.ಗಿರೆಣ್ಣವರ ಅವರನ್ನು ಶೈಕ್ಷಣಿಕ ಚಿಕ್ಕೋಡಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಜಾನನ ಮನ್ನಿಕೇರಿ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಕಲ್ಲೋಳಿ ಸಿಆರ್‍ಸಿ ಅಧಿಕಾರಿ ಗಣಪತಿ ಉಪ್ಪಾರ ಮತ್ತು ಶಾಲೆಯ ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ರಾಜ್ಯ ಮಟ್ಟದ ವಿಚಾರಸಂಕಿರ್ಣಕ್ಕೆ ತುಕ್ಕಾನಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆಣ್ಣವರ ಆಯ್ಕೆಯಾಗಿರುವದು ಸಂತಸದ ವಿಷಯ, ಅವರ ಶೈಕ್ಷಣಿಕ ಕ್ಷೇತ್ರದ ಕಾಳಜಿಗೆ ಹಾಗೂ ಮುಖ್ಯ ಶಿಕ್ಷಕರಾಗಿ ನಿರಂತರವಾಗಿ ಕಾರ್ಯ ಮಾಡುತ್ತಿರುವ ಕೆಲಸಕ್ಕೆ ಸಂದ ಗೌರವವಾಗಿದೆ, ಗಿರೆಣ್ಣವರ ಅವರು ರಾಜ್ಯ ಮಟ್ಟದ ವಿಚಾರ ಸಂಕಿರಕ್ಕೆ ಆಯ್ಕೆಯಾಗಿ ಮೂಡಲಗಿ ಶೈಕ್ಷಣಿಕ ವಲಯದ ಗೌರವವನ್ನು ಹೆಚಿಸಿದ್ದಾರೆ ಹಾಗೂ ಎಲ್ಲ ಶಾಲೆಗಳಿಗೆ ಪ್ರೇರಣೆಯಾಗಿದು, ಶಿಕ್ಷಣ ಇಲಾಖೆಯಿಂದ ಅಭಿನಂದಿಸುವದಾಗಿ ಎಂದು ಮೂಡಲಗಿ ವಲಯ ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ತಿಳಿಸಿದ್ದಾರೆ.