Breaking News
Home / Recent Posts / ಶಿಕ್ಷಕರ ಪ್ರತಿಭಾ ಪರಿಷತ್: ಗುರುಶ್ರೇಷ್ಠ ಪ್ರಶಸ್ತಿ ಪ್ರದಾನ

ಶಿಕ್ಷಕರ ಪ್ರತಿಭಾ ಪರಿಷತ್: ಗುರುಶ್ರೇಷ್ಠ ಪ್ರಶಸ್ತಿ ಪ್ರದಾನ

Spread the love

ಶಿಕ್ಷಕರ ಪ್ರತಿಭಾ ಪರಿಷತ್: ಗುರುಶ್ರೇಷ್ಠ ಪ್ರಶಸ್ತಿ ಪ್ರದಾನ

ಮೂಡಲಗಿ: ಇಲ್ಲಿಯ ಚೈತನ್ಯ ಆಶ್ರಮ ವಸತಿ ಶಾಲೆಯ ಆತಿಥ್ಯದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ ಚಿಕ್ಕೋಡಿ ಜಿಲ್ಲಾ ಘಟಕದಿಂದ ಅ. 19ರಂದು ಬೆಳಿಗ್ಗೆ 11ಕ್ಕೆ ವಾರ್ಷಿಕೋತ್ಸವ ಹಾಗೂ ‘ಗುರುಶ್ರೇಷ್ಠ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಿರುವರು.
ಸಾನ್ನಿಧ್ಯವನ್ನು ಶಿರಗಾವಿಯ ಗವಿಮಠದ ಸದಾಶಿವ ಸ್ವಾಮೀಜಿವಹಿಸುವರು. ಅಧ್ಯಕ್ಷತೆಯನ್ನು ವೈ.ಬಿ. ಪಾಟೀಲವಹಿಸುವರು. ಪ್ರಶಸ್ತಿ ಪ್ರದಾನವನ್ನು ಕ್ಷೇತ್ರ ಶಿಕ್ಷಣಾಧಿಕಾರ ಅಜಿತ ಮನ್ನಿಕೇರಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಗೋಕಾಕ ಬಿಇಒ ಜಿ.ಬಿ. ಬಳಿಗಾರ, ಪರಿಷತ್ ರಾಜ್ಯ ಕಾರ್ಯದರ್ಶಿ ಮಹಾಂತೇಶ ಚವ್ಹಾಣ, ರಾಜ್ಯ ಉಪಾಧ್ಯಕ್ಷ ಶಂಕರ ಕ್ಯಾಸ್ತಿ, ರಾಜ್ಯ ಕೋಶಾಧ್ಯಕ್ಷ ಚಲುವೇಗೌಡರು, ಎಸ್.ಎನ. ಬೆಳಗಾವಿ, ಸಿದ್ರಾಮ್ ಲೋಕನ್ನವರ, ಪ್ರೊ. ಎಸ್.ಎಂ. ಕಮದಾಳ, ಬಾಲಶೇಖರ ಬಂದಿ, ಸಿದ್ರಾಮ್ ದ್ಯಾಗಾನಟ್ಟಿ, ಎಲ್.ಎಂ. ಬಡಕಲ್ಲ, ಎ.ಪಿ. ಪರಸನ್ನವರ ಭಾಗವಹಿವರು ಎಂದು ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ಎಲ್.ಎಸ್. ಚೌರಿ ಪ್ರಕಟಣೆಯಲ್ಲಿ ತಿಳಿಸಿರುವರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ