Breaking News
Home / Recent Posts / ಮೂಡಲಗಿಗೆ ಕಿತ್ತೂರ ಚನ್ನಮ್ಮಜ್ಯೋತಿ ಆಗಮನ, ಭ್ಯವ್ಯ ಸ್ವಗತ

ಮೂಡಲಗಿಗೆ ಕಿತ್ತೂರ ಚನ್ನಮ್ಮಜ್ಯೋತಿ ಆಗಮನ, ಭ್ಯವ್ಯ ಸ್ವಗತ

Spread the love

ಮೂಡಲಗಿಗೆ ಕಿತ್ತೂರ ಚನ್ನಮ್ಮಜ್ಯೋತಿ ಆಗಮನ, ಭ್ಯವ್ಯ ಸ್ವಗತ

ಮೂಡಲಗಿ: ಕಿತ್ತೂರ ಉತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಆರಂಭವಗಿರುವ ವೀರರಾಣಿ ಕಿತ್ತೂರ ಚನ್ನಮ್ಮಾಜಿ ವಿಜಯಜ್ಯೋತಿಯು ಗುರುವಾರದಂದು ಮೂಡಲಗಿ ಪಟ್ಟಣಕ್ಕೆ ಆಗಮಿಸಿದಾಗ ಸಂಭ್ರಮದಿಂದ ಸ್ವಾಗತ ನೀಡಲಾಯಿತು.
ಮದ್ಯಾಹ್ನ ವೀರಜ್ಯೋತಿಯು ಗುರ್ಲಾಪೂರಕ್ಕೆ ಆಗಮಿಸಿದಾಗ ಪ್ರವಾಸಿ ಮಂದಿರದಲ್ಲಿ ಮೂಡಲಗಿ ತಾಲೂಕಾ ಆಡಳಿತ ಮತ್ತು ಪಂಚಮಸಾಲಿ ಸಮಾಜ ಸಂಘಟಕರು ಪೂಜೆ ಸಲ್ಲಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯಿರಿಂದ ಕುಂಭಮೇಳ ಮತ್ತು ಆರತಿಯೊಂದಿಗೆ ಭವ್ಯ ಸ್ವಾಗತ ಕೋರಿದರು.


ಪ್ರವಾಸಿ ಮಂದಿರದಲ್ಲಿ ಜರುಗಿದ ಸಮಾರಂಭದಲ್ಲಿ ತಹಶೀಲ್ದಾರ ಡಿ.ಜಿ.ಮಹಾತ ಮಾತನಾಡಿ, ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸುವದರಲ್ಲಿ ಮೊದಲಗಿರಾದ ಹೋರಾಟ ಮಾಡಿರು ಮಹಾನ ಚೇತನ, ವ್ಯಕ್ತಿತ್ವ ಹೊಂದಿರುವ ವೀರರಾಣಿ ಚನ್ನಮ್ಮಾಜಿ ಅವರ ವೀರ ವಿಜಯಜ್ಯೋತಿಯನ್ನು ನಾವು ಇಂದು ಸ್ವಾಗ ಮಾಡಿಕೊಳ್ಳವುದು ಬಹಳ ಅಭಿಮಾನ ಸಂಗತಿ ಎಂದರು.
ಬಿಇಒ ಅಜೀತ ಮನ್ನಿಕೇರಿ ಮಾತನಾಡಿದರು, ಕಿತ್ತೂರ ರಾಣಿ ಚನ್ನಮ್ಮಾಜಿ ಇತಿಹಾಸವನ್ನು ವಿವರಿಸಿ ಅವರು ನಾಡಿನ ಎಲ್ಲ ಮಹಿಳಾ ಶಕ್ತಿಯಾಗಿ ಘೊಚರಿಸಲ್ಲಿ ಎಂದು ಆಶಿಸಿದರು, ಕಿತ್ತೂರಿನ ನಾಡನ, ಸಮ್ರಾಜವನ್ನು, ಕಿತ್ತೂರಿ ಇತಿಹಾಸವನ್ನು ನಾವೆಲರೂ ್ಲ ಮರಿಯಬಾರೆಂದು ಕರ್ನಾಟಕ ಸರಕಾರ ಪ್ರತಿ ವರ್ಷ ಕಿತ್ತೂರ ಉತ್ಸವ ಮಾಡುತ್ತಾ ಉತ್ಸವದ ಮೂಲಕ ಚನ್ನಮ್ಮಾಜಿ ಸಮ್ರಾಜ್ಯದ ಎಲ್ಲ ಮಗ್ಗಲುಗಳನ್ನು ಜನರಿಗೆ ಪರಿಚಯ ಮಾಡಿಕೊಡು ಬೆಳಗಾವಿ ಜಿಲ್ಲಿಗೆ ಚನ್ನಮ್ಮ ಬಹಳ ದೊಡ್ಡ ಒಂದು ಆಸ್ತಿ ಅನ್ನವುದನು ಬಿಂಬಿಸುವ ಕಾರಣಕ್ಕಾಗಿ ಸರಕಾರ ಈ ಕಾರ್ಯಕ್ರವನ್ನು ಆಯೋಜನೆ ಮಾಡಿದು, ಇವತಿಗೂ ಕೂಡಾ ಚನ್ನಮ್ಮಾ ನಮ್ಮ ನಡುವೇ ಇದ್ದಾರೆ ಅವರ ಕಿಚ್ಚು, ಇಚ್ಚೆÀ ಸಂಕಲ್ಪ ಇನ್ನೂ ಕೂಡಾ ಮುಂದುವರಿಯಲ್ಲಿ ಎಂದರು.
ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಭಾವಚಿತ್ರಕ್ಕೆ ಮತ್ತು ವಿಜಯಜ್ಯೋತಿಗೆ ಚನ್ನಮ್ಮ ಸಮೀತಿ ಮತ್ತು ಪಂಚಮಸಾಲಿ ಸಮಾಜ ಸಮೀತಿ ಪೂಜೆಸಲ್ಲಿಸಿದರು ನಂತರ ಕಲ್ಮೇಶ್ವರ ವೃತ್ತದಲ್ಲಿಯೂ ಸಹ ಪೂಜೆಸಲ್ಲಿಸಿ ಬೀಳ್ಕೋಡಲಾಯಿತು.
ಈ ಸಮಯದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ ಮುಖ್ಯಾಧಿಕಾರಿ ದೀಪಕ ಹರ್ದಿ, ಸಿಡಿಪಿಒ ವಾಯ್.ಎಂ.ಗುಜನಟ್ಟಿ, ಪಿಎಸ್‍ಐ ಎಚ್.ವಾಯ್.ಬಾಲದಂಡಿ, ಪಂಚಮಸಾಲಿ ಜಿಲ್ಲಾಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ, ಮೂಡಲಗಿ ತಾಲೂಕಾ ಘಟಕ ಅಧ್ಯಕ್ಷ ಬಸವರಾಜ ಪಾಟೀಲ, ಬಿ.ಸಿ.ಮುಗಳಖೋಡ, ವೀರುಪಾಕ್ಷ ಮುಗಳಖೋಡ, ಅಂಗನವಾಡಿ ಮೇಲ್ವಿಚಾರಕಿ ಕೆ.ಸಿ.ಕನಶೆಟ್ಟಿ, ಮೂಡಲಗಿ ಕಿತ್ತೂರರಾಣಿ ಚನ್ನಮ್ಮ ಸಮೀತಿ ಅಧ್ಯಕ್ಷ ಖೇದಾರಿ ಭಸ್ಮೇ, ಪುರಸಭೆ ಸದಸ್ಯ ಗಪಾರ್ ಡಾಂಗೆ, ಅನ್ವರ ನದಾಫ್, ಪ್ರಕಾಶ ಮುಗಳಖೋಡ, ಬಿಜೆಪಿ ಅರಭಾಂವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪಂಚಮಸಾಲಿ ಸಮಾಜ ಸಂಘದ ಮತ್ತು ಬಿಜೆಪಿ ವಿವಿಧ ಸಮೀತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತಿತರಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ