ಕೆನರಾ ಬ್ಯಾಂಕ್: ಅವ್ಯವಸ್ಥೆಯ ಆಗರ
ವರದಿ: ಶಂಕರ ಹಾದಿಮನಿ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಕೆನರಾ ಬ್ಯಾಂಕ್ ಅವ್ಯವಸ್ಥೆಯ ಆಗರವಾಗಿದ್ದು. ವ್ಯವಹಾರಕ್ಕೆ ಜನರು ಪರಿದಾಡುವ ಪರಿಸ್ಥಿತಿ ಎದುರಿಸುತ್ತಿದ್ದರು ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡದಿರುವದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೆನರಾ ಬ್ಯಾಂಕ 1974 ರಲ್ಲಿ ಪ್ರಾರಂಭವಾಗಿದ್ದು ಸುತ್ತಲಿನ ಹತ್ತಾರು ಗ್ರಾಮಗಳಲ್ಲಿನ 10 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ. ವರ್ಷಕ್ಕೆ ನೂರಾರು ಕೋಟಿ ವಹಿವಾಟು ನಡೆಸುತ್ತಿದೆ.
ಸರಕಾರದ ತಿಂಗಳ ಮಾಸಾಚನೆ ಹಣದ ಆಸರೆಯಾದ ವೃದ್ಧರು, ಅಂಕವಿಕಲರು, ವಿಧವೇಯರು ದಿನವೀಡಿ ಸಾಲಿನಲ್ಲಿ ನಿಂತು ಹೈರಾನಾಗುತ್ತಿದ್ದು. ಕೆನರಾ ಬ್ಯಾಂಕ ಜೊತೆ ಸಿಂಡಿಕೇಟ ಬ್ಯಾಂಕ ವೀಲಿನವಾದಾಗಿನಿಂದ ವ್ಯವಹಾರ, ಸಿಬ್ಬಂದಿ ಹೆಚ್ಚಾದರೆ ಹೊರತು ಗ್ರಾಹಕರಿಗೆ ಅನುಕೂಲವಾಗಿಲ್ಲಾ. 2 ಬ್ಯಾಂಕ್ ಗಳ ವಿಲೀನದಿಂದ ಗ್ರಾಹಕರು ಹೆಚ್ಚಾಗಿದ್ದು 1 ಕ್ಯಾಶ್ ಕೌಂಟರ್ ಇದ್ದು ಇಡೀದಿನ ನಿಂತು ಹಣ ಪಡೆಯುವಂತಾಗಿದೆ ಎಂದು ಜನರ ಕಿಡಿಕಾರುತ್ತಿದ್ದರೆ. ಕೂಡಲೇ ಅಧಿಕಾರಿಗಳು ಕನ್ನಡ ಮಾತನಾಡುವ ಅಧಿಕಾರಿಗಳನ್ನು ನೆಮಕ ಮಾಡಬೇಕೂ ಮತ್ತು ಎಟಿಎಮ್, ಕ್ಯಾಶ ಕೌಂಟರ್ 2 ಮಾಡಬೇಕು ಇಲ್ಲದಿದ್ದರೇ ಬರುವ ದಿನಗಳಲ್ಲಿ ಉಗ್ರಕ್ರಮಕ್ಕೆ ಮುಂದಾಗೂತ್ತೇವೆ ಎಂದು ಗ್ರಾಮಸ್ಥರ ಆಗ್ರಹವಾಗಿದೆ.

IN MUDALGI Latest Kannada News