ಬೆಟಗೇರಿ ಗ್ರಾಮದ ವಿವಿಧಡೆ ಕನಕದಾಸರ ಜಯಂತಿ ಆಚರಣೆ
ಬೆಟಗೇರಿ:ಗ್ರಾಮದ ಕನಕಶ್ರೀ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘದಲ್ಲಿ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮ ಸೋಮವಾರದಂದು ಜರುಗಿತು. ಸಂಘದ ಮುಖ್ಯ ಕಾರ್ಯನಿವಾಹಕ ರಮೇಶ ಹಾಲಣ್ಣವರ ಕನಕದಾಸರÀ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು. ಸಂಘದ ಅಧ್ಯಕ್ಷ ಹನುಮಂತ ವಡೇರ, ಮಹಾದೇವ ಹೊರಟ್ಟಿ, ಬನಪ್ಪ ಚಂದರಗಿ, ಸುರೇಶ ವಡೇರ, ಬಸವರಾಜ ಮಾಡಮಗೇರಿ, ವಿಠಲ ನಾಯ್ಕ ಸಂಘದ ಆಡಳಿತ ಮಂಡಳಿ ಸದಸ್ಯರು, ಇತರರು ಇದ್ದರು.
ಗ್ರಾಮ ಪಂಚಾಯತಿಯಲ್ಲಿ: ಬೆಟಗೇರಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕನಕದಾಸರ ಜಯಂತಿ ಆಚರಣೆ ಸೋಮವಾರದಂದು ಜರುಗಿತು. ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ ಕನಕದಾಸರÀ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸಿದರು. ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಳಿಕ ಸಿಹಿ ವಿತರಿಸಲಾಯಿತು. ಸುರೇಶ ಬಾಣಸಿ, ಬಸವರಾಜ ದೇಯಣ್ಣವರ, ಸಿದ್ದಪ್ಪ ಬಾಣಸಿ, ರಾಮಣ್ಣ ನೀಲಣ್ಣವರ, ಈರಣ್ಣ ದಂಡಿನ, ವಿಠಲ ಚಂದರಗಿ, ಮಂಜು ಕಂಬಿ, ಶಿವಪ್ಪ ಐದುಡ್ಡಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಸ್ಥಳೀಯರು ಇದ್ದರು.
ಸರ್ಕಾರಿ ಪ್ರೌಢ ಶಾಲೆಯಲ್ಲಿ: ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನಕದಾಸರ ಜಯಂತಿ ಆಚರಣೆ ನ.22ರಂದು ನಡೆಯಿತು. ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಕನಕದಾಸರ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸಿದರು. ಪ್ರಕಾಶ ಕುರಬೇಟ, ರಾಕೇಶ ನಡೋಣಿ, ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ವಿ.ಬಿ.ಬಿರಾದಾರ, ಎ.ಬಿ.ತಾಂವಶಿ, ವಾಯ್.ಎಮ್.ವಗ್ಗರ, ಶುಭಾ.ಬಿ., ಮಲ್ಹಾರಿ ಪೋಳ, ಪ್ರೌಢ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.