Breaking News
Home / Recent Posts / ಪತ್ರಕರ್ತ ಹಾಗೂ ಛಾಯಾಗ್ರಾಹಕ ಎಸ್ ಎಮ್ ಚಂದ್ರಶೇಖರ ನಿಧನ

ಪತ್ರಕರ್ತ ಹಾಗೂ ಛಾಯಾಗ್ರಾಹಕ ಎಸ್ ಎಮ್ ಚಂದ್ರಶೇಖರ ನಿಧನ

Spread the love

ಪತ್ರಕರ್ತ ಹಾಗೂ ಛಾಯಾಗ್ರಾಹಕ ಎಸ್ ಎಮ್ ಚಂದ್ರಶೇಖರ ನಿಧನ

ಮೂಡಲಗಿ: ಪಟ್ಟಣದ ಲಕ್ಷ್ಮೀ ನಗರದ ನಿವಾಸಿ ಕಳೆದ ನಾಲವತ್ತು ವರ್ಷಗಳಿಂದ ಛಾಯಾಗ್ರಾಹಕನ್ನಾಗಿ ಹಾಗೂ ವಿಶ್ವವಾಣಿ ದಿನ ಪತ್ರಿಕೆಯ ವರದಿಗಾರರಾದ ಎಸ್ ಎಮ್ ಚಂದ್ರಶೇಖರ (57)ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲ್ಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಬುಧವಾರ ಮುಂಜಾನೆ 9 ಗಂಟೆಗೆ ಮೂಡಲಗಿ ಪಟ್ಟಣದಲ್ಲಿ ಜರುಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಎಸ್ ಎಮ್ ಚಂದ್ರಶೇಖರ ಅವರು ಕಳೆದ ಮೂರು ದಶಕಗಳಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಗುರುತಿಸಿಕೊಂಡು, ವಿವಿಧ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.

ಸಂತಾಪ : ಛಾಯಾಗ್ರಾಹಕ ಹಾಗೂ ಪತ್ರಕರ್ತರ ಎಸ್ ಎಮ್ ಚಂದ್ರಶೇಖರ ಅವರು ಅಕಾಲಿಕ ನಿಧನಕ್ಕೆ ಮೂಡಲಗಿ ಹಾಗೂ ಗೋಕಾಕ ತಾಲೂಕಾ ಪತ್ರಕರ್ತರ ಬಳಗವು ಒಬ್ಬ ಒಳ್ಳೆಯ ಛಾಯಾಗ್ರಾಹಕ ಹಾಗು ಪತ್ರಕರ್ತನನ್ನು ಕಳೆದುಕೊಂಡಿರುವುದು ಬಹಳ ನಷ್ಟವಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೇಂದು ತೀವ್ರ ಸಂತಾಪ ಸೂಚಿಸಿದ್ದಾರೆ.

ಬಾಲಚಂದ್ರ ಜಾರಕಿಹೊಳಿ ಸಂತಾಪ : ಕಳೆದ ಎರಡು ದಶಕಗಳಿಂದ ನಮ್ಮ ಕುಟುಂಬ ಜೊತೆ ಒಡನಾಟ ಹೊಂದಿ ನಮ್ಮ ಪತ್ರಿಯೊಂದು ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್ ಎಮ್ ಚಂದ್ರಶೇಖರ ಅವರ ಅಕಾಲಿಕ ನಿಧನದಿಂದ ಬಹಳ ದುಃಖವಾಗಿದೆ. ಭಗವಂತನ್ನು ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ನೀಡಲೇಂದು ಪ್ರಾರ್ಥಿನಿಸುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಹೊಳಿ ಸಂತಾಪಾ ಸೂಚಿಸಿದ್ದಾರೆ.


Spread the love

About inmudalgi

Check Also

ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಇದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ