28ನೇ ಅಯ್ಯಪ್ಪಸ್ವಾಮಿ ಮಹಾಪೂಜೆ
ಮೂಡಲಗಿ : ಪಟ್ಟಣದ ಶಿವಬೋಧರಂಗ ಮಠದ ರಸ್ತೆಯಲ್ಲಿರುವ ಯಲ್ಲಮ್ಮದೇವಿ ದೇವಸ್ಥಾನದ ಹತ್ತಿರ ಡಿ.20ರಂದು ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ಪಟ್ಟಣದ ಶ್ರೀ ಬಸವ ಮಂಟಪ ಬಾಜಿ ಮಾರ್ಕೇಟದಲ್ಲಿ 28ನೇ ವರ್ಷದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
ಡಿ. 20ರಂದು ಮಧ್ಯಾಹ್ನ 2 ಗಂಟೆಗೆ ಅಯ್ಯಪ್ಪ ಸನ್ನಿದಾನದಿಂದ ಪಟ್ಟಣದ ಪ್ರಮುಖ ಬಿದಿಗಳ ಮೂಲಕ ಅಯ್ಯಪ್ಪ ಸ್ವಾಮಿಯ ಭಾವಚಿತ್ರದ ಭವ್ಯ ಆನೆ ಮೆರವಣಿ ಹಾಗೂ ಕುಂಭಮೇಳ ವಾದ್ಯಗಳೊಂದಿಗೆ ಮೆರವಣಿಗೆ ಮತ್ತು ಸಂಜೆ 6ಗಂಟೆಗೆ ಮಹಾಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಶಿವಬೋಧರಂಗ ಸಿದ್ದ್ ಸಂಸ್ಥಾನ ಮಠದ ದತ್ತಾತ್ರೇಯ ಸ್ವಾಮಿಗಳು, ಸುಣಧೋಳಿಯ ಜಡಿಸಿದ್ದೇಶ್ವರ ಶಿವಾನಂದ ಮಹಾಸ್ವಾಮಿಗಳು, ಭಾಗೋಜಿಕೊಪ್ಪ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಮತ್ತು ಪರಸ್ಥಳದಿಂದ ಗುರುಸ್ವಾಮಿಗಳು ಮತ್ತು ಮಾಲಾಧಿರಿಗಳು ಭಗವಹಿಸುವರು ಮತ್ತು ಸಕಲ ಸದ್ಭಕ್ತರು ತನು-ಮನ ಧನದಿಂದ ಅಯ್ಯಪ್ಪಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಅಯ್ಯಪ್ಪಸ್ವಾಮಿ ಸನ್ನಿದಾನದ ರವಿ ನೇಸೂರ ಗುರುಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News