Breaking News
Home / Recent Posts / ಹೈಸ್ಕೂಲಿನ 1990-91 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಅಪೂರ್ವ ಸ್ನೇಹಸಂಗಮ ಕಾರ್ಯಕ್ರಮ

ಹೈಸ್ಕೂಲಿನ 1990-91 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಗುರುವಂದನ ಮತ್ತು ಅಪೂರ್ವ ಸ್ನೇಹಸಂಗಮ ಕಾರ್ಯಕ್ರಮ

Spread the love

ಮೂಡಲಗಿ : ಭಾರತೀಯ ಸಂಸ್ಕ್ರತಿಯಲ್ಲಿ ತ್ರಿಮೂರ್ತಿಗಳಿಗೆ ಅತೀತವಾದ ಸ್ಥಾನವನ್ನು ಗುರುವಿಗೆ ನೀಡಿದೆ. ಸೃಷ್ಠಿ, ಸ್ಥಿತಿ, ಲಯಗಳನ್ನು ನಿರ್ವಹಿಸುತ್ತಿರುವ ಬ್ರಹ್ಮ, ವಿಷ್ಣು, ಮಹೇಶ್ವರರ ಕಾರ್ಯಗಳನ್ನು ಗುರುವೊಬ್ಬನೇ ನಿರ್ವಹಿಸಬಲ್ಲನಾದ್ದರಿಂದ “ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮ: ಎನ್ನುವ ಮೂಲಕ “ನ ಗುರೋರಧಿಕಂ” ಎಂದು ಮನ್ನಿಸಲಾಗಿದೆ. ಗುರು-ಶಿಷ್ಯ ಪರಂಪರೆಗೆ ಸನಾತನ ಕಾಲದಿಂದಲೂ ಬಹುದೊಡ್ಡ ಇತಿಹಾಸವಿದೆ. ಅಂತಹ ಗುರುಶಿಷ್ಯರ ಸಮ್ಮಿಲನ ಇಂದು ಕಣ್ಮನಗಳಿಗೆ ಮುದ ನೀಡುವಂತಿದೆ ಎಂದು ವಿಶ್ರಾಂತ ಪ್ರಾದ್ಯಾಪಕ, ಸಾಹಿತಿ ಪ್ರೋ. ಚಂದ್ರಶೇಖರ ಅಕ್ಕಿ ಅಭಿಪ್ರಾಯ ಪಟ್ಟರು.
ಸಮೀಪದ ಕಲ್ಲೋಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪಂಡಿತ ಜವಾಹರಲಾಲ ನೆಹರು ಹೈಸ್ಕೂಲಿನ 1990-91 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಶ್ರೀ ಬಸವೇಶ್ವರ   ಸಹಕಾರಿ ಸೋಸಾಯಿಟಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಗುರುವಂದನ ಮತ್ತು ಅಪೂರ್ವ ಸ್ನೇಹಸಂಗಮ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಪಂಚದ ಉತ್ತರಾಧಿಕಾರಿಗಳಾದ ಮಕ್ಕಳಿಗೆ ಅಕ್ಷರದೊಂದಿಗೆ ಅರಿವು ನೀಡಿ ಬಾಳಿಗೆ ಬೆಳಕಿನ ಹಾದಿ ತೋರಿದ ಗುರುವಿನ ಋಣ ತೀರಿಸುವ ಕೆಲಸ ಮಾಡಿದ್ದಿರಿ. ಸುಮಾರು ಮೂವತ್ತು ವರ್ಷಗಳ ಬಳಿಕ ಪುನ: ಒಂದುಗೂಡಿದ ನಿಮ್ಮ ಸ್ನೇಹ ಅನನ್ಯವಾದುದು ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ ಪಟ್ಟಣದ ವೈದ್ಯರು, ಶಿಕ್ಷಣಪೇಮಿಗಳೂ ಆದ ಡಾ|| ಆರ್. ಎನ್. ಪಾಟೀಲ ಮಾತನಾಡಿ, ಬಿಡುವಿಲ್ಲದ ಜೀವನ ಶೈಲಿಯಲ್ಲಿಯೂ ದೂರದೂರುಗಳಿಂದ ಆಗಮಿಸಿ ಗುರುವಂದನೆ ಸಲ್ಲಿಸಿದ ತಾವೆಲ್ಲರೂ ಧನ್ಯರು ಎಂದು ನುಡಿದರು. ಅಲ್ಲದೆ ಈ ಸಂದರ್ಭದಲ್ಲಿ ನ್ಯಾಯವಾದಿ ರಾಜೇಶ ಆಲದಕಟ್ಟಿ ಮತ್ತು ಮ್ಯಾನೇಜರ್ ಹನಮಂತ ಖಾನಗೌಡ್ರ ಮಾತನಾಡಿ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡರು.
ನಿವೃತ್ತ ಗುರುಗಳಾದ ಸರ್ವಶ್ರೀ ಆರ್.ಎಮ್.ಶಿಂಗಾಡಿ, ಸಿ.ಎಮ್.ಕಟಗಿ, ಬಿ.ಎಸ್.ಕೋಟಗಿ, ಎಸ್.ಎಸ್. ಅಂಗಡಿ, ಪಿ.ಆರ್.ಗರಗಟ್ಟಿ, ಎಸ್.ಬಿ.ಹಳ್ಳಿ, ಎನ್.ಎಸ್. ಜಗದಾಳೆ, ಶ್ರೀಮತಿಕುಮುದಾ ಕುಲಕರ್ಣಿ, ಶ್ರೀಮತಿ ಜಿ.ಜಿ.ಹಿರೇಮಠ, ಶ್ರೀಮತಿ ಲಕ್ಷ್ಮೀಬಾಯಿ ಪಿರಗನ್ನವರ ಅವರುಗಳನ್ನು ಸತ್ಕರಿಸಿ ಗುರುವಂದನೆ ಸಲ್ಲಿಸಲಾಯಿತು.
ಗಂಗಾಧರ ಐನಾಪುರ, ರಾಜು ಕಡಲಗಿ, ಪ್ರಕಾಶ ಕಲಾಲ, ಸುರೇಶ ತಹಶೀಲ್ದಾರ, ಗಿರಿಜಾ ಬೆಳಕೂಡ, ಸುಲೋಚನಾ ಹುಕ್ಕೇರಿ, ಸುವರ್ಣಾ ಗೋರೋಶಿ ಹಾಗೂ ಸುಮಾರು ಎಪ್ಪತ್ತು ಜನ ಹಳೆವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಶಶಿಧರ ನಿಶಾನಿಮಠ ಪ್ರಾರ್ಥಿಸಿದರು. ಶೈಲಾ ಕಬ್ಬೂರ ಸ್ವಾಗತಿಸಿದರು. ಪ್ರಾಸ್ಥಾವಿಕವಾಗಿ ಸಿದ್ರಾಮ ದ್ಯಾಗಾನಟ್ಟಿ ಮಾತನಾಡಿದರು.ಮಹಾಂತೇಶ ಕರೋಳಿ ವಂದಿಸಿದರು. ಚನ್ನಪ್ಪ ಹುಕ್ಕೇರಿ ನಿರೂಪಿಸಿದರು.


Spread the love

About inmudalgi

Check Also

ಕೌಜಲಗಿ- ಹೊನಕುಪ್ಪಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ: ಆರ್ಡಿಪಿಆರ್ ಇಲಾಖೆಯಿಂದ ರಸ್ತೆ ಸುಧಾರಣಾ ಕಾಮಗಾರಿಗಳಿಗಾಗಿ ೧೦ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ