ಮೂಡಲಗಿ ಪಿಕೆಪಿಎಸ್‍ಗೆ ಅಧ್ಯಕ್ಷರಾಗಿ ಸಂದೀಪ, ಉಪಾಧ್ಯಕ್ಷೆಯಾಗಿ ನೀಲವ್ವ ಆಯ್ಕೆ
ಮೂಡಲಗಿ: ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇತ್ತಿಚೆಗೆ ಜರುಗಿದ ಅಧ್ಯಕ್ಷರ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂದೀಪ ಮಲ್ಲಪ್ಪ ಸೋನವಾಲಕರ ಹಾಗೂ ಉಪಾಧ್ಯಕ್ಷೆಯಾಗಿ ನೀಲವ್ವ ದುಂಡಯ್ಯ ಮಠಪತಿ ಅವರು ಅವಿರೋಧವಾಗಿ ಆಯ್ಕೆಯಾಗಿರುವರು.
ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿ ಸಂದೀಪ ಸೋನವಾಲಕರ ಮಾತನಾಡಿ ‘1947ರಲ್ಲಿ ರೈತರಿಂದ ಸ್ಥಾಪಿತವಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸೋಸೈಟಿಯು ಮೂಡಲಗಿಯ ಪ್ರಥಮ ಸಹಕಾರಿ ಸಂಸ್ಥೆಯಾಗಿದೆ. ಪ್ರತಿಷ್ಠಿತ ಪಿಕೆಪಿಎಸ್ ಸೊಸೈಟಿಯ ಎಲ್ಲ ನಿರ್ದೇಶಕರ ಮತ್ತು ಸದಸ್ಯರ ವಿಶ್ವಾಸದೊಂದಿಗೆ ಸೊಸೈಟಿಯ ಏಳ್ಗೆಗಾಗಿ ಶ್ರದ್ಧೆಯಿಂದ ಕಾರ್ಯಮಾಡುವೆನು’ ಎಂದು ತಿಳಿಸಿದರು.